Gold: ವಿದೇಶದಿಂದ ಚಿನ್ನ ತರುವುದು ಇನ್ಮುಂದೆ ಇನ್ನಷ್ಟು ಸುಲಭ, ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್
Gold: ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಈ ನಡುವೆ ಕೇಂದ್ರ ಸರ್ಕಾರವು ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ವಿದೇಶದಿಂದ ಪ್ರಯಾಣಿಸುವಾಗ ಭಾರತಕ್ಕೆ ಆಭರಣಗಳನ್ನು ತರುವ ವಿಚಾರದಲ್ಲಿ ಕೆಲವೊಂದು ಪ್ರಮುಖ ಸಡಿಲಿಕೆಗಳನ್ನು ತರಲಾಗಿದೆ. ಸರ್ಕಾರವು ಹೊರ ದೇಶಗಳಿಂದ ಚಿನ್ನಾಭರಣ ತರುವುದರಲ್ಲಿ ಕೆಲವೊಂದು ವಿನಾಯಿತಿ ನೀಡಿದೆ. ಇದರಿಂದ ಎನ್‌ಆರ್‌ಐ (NRI - Non-Resident Indian) ಹಾಗೂ ಭಾರತೀಯ ಮೂಲದ ಪ್ರವಾಸಿಗರಿಗೆ ವಿದೇಶದಿಂದ ಚಿನ್ನ ಖರೀದಿ ಮಾಡಿಕೊಂಡು ಬರುವುದು ಸುಲಭವಾಗಲಿದೆ.
2026ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಮತ್ತು ಫೆಬ್ರವರಿ 2, 2026 ರಿಂದ ಜಾರಿಗೆ ಬಂದ ಹೊಸ ಬ್ಯಾಗೇಜ್ ನಿಯಮಗಳು 2026ರ ಅಡಿಯಲ್ಲಿ ಕೇಂದ್ರ ಸರ್ಕಾರವು ಕೆಲವು ನಿರ್ದಿಷ್ಟ ಆಭರಣಗಳ ಮೇಲಿನ ತೂಕದ ಮಿತಿಯನ್ನು ಮಾತ್ರ ಉಳಿಸಿಕೊಂಡಿದೆ. 2016 ರ ಬ್ಯಾಗೇಜ್ ನಿಯಮಗಳಲ್ಲಿ ಸೂಚಿಸಲಾದ ಮೌಲ್ಯದ ಮಿತಿಯನ್ನು ತೆಗೆದುಹಾಕಲಾಗಿದೆ. ಅಲ್ಲದೆ ಎನ್ಆರ್‌ಐ ನಿವಾಸಿಗಳು, ಭಾರತೀಯ ಮೂಲದ/ವಿದೇಶಿ ಮೂಲದ ಪ್ರವಾಸಿಗರು, ವೀಸಾ ಕಾರ್ಡ್ ಹೊಂದಿರುವ ವಿದೇಶಿಯರು (ಪ್ರವಾಸಿ ವೀಸಾ ಹೊರತುಪಡಿಸಿ) ಮತ್ತು ಸಿಬ್ಬಂದಿ ಸದಸ್ಯರಿಗೆ ಸುಂಕ ಮುಕ್ತ ಭತ್ಯೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಹ ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿದೆ. ಇದರಿಂದ ವಿದೇಶಗಳಿಂದ ಚಿನ್ನ ಅಥವಾ ಚಿನ್ನಾಭರಣಗಳನ್ನು ಭಾರತಕ್ಕೆ ತರುವುದು ಈಗ ಸುಲಭವಾಗಿದೆ.

2026 ರ ಹೊಸ ಬ್ಯಾಗೇಜ್ ನಿಯಮಗಳು: ಚಿನ್ನಾಭರಣ ವಿಷಯದಲ್ಲಿ ಏನೆಲ್ಲಾ ಬದಲಾಗಿದೆ
ಕೇಂದ್ರ ಸರ್ಕಾರವು ಮೌಲ್ಯದ ಮಿತಿಗಳನ್ನು ತೆಗೆದುಹಾಕುವ ಮೂಲಕ ತೂಕದ ಆಧಾರದ ಮೇಲೆ ಮಾತ್ರ ಆಭರಣಗಳಿಗೆ ವಿಶೇಷ ಭತ್ಯೆಗಳನ್ನು ಸೂಚಿಸಿದೆ. ನಿಯಮ ಬದಲಾವಣೆಯ ನಂತರ, ತೂಕದ ಆಧಾರದ ಮೇಲೆ ಸಂಪೂರ್ಣವಾಗಿ ಸುಂಕ-ಮುಕ್ತ ಆಭರಣಗಳನ್ನು ಭಾರತಕ್ಕೆ ತೆಗೆದುಕೊಂಡು ಬರುವುದಕ್ಕೆ ಅನುಮತಿ ನೀಡಲಾಗಿದೆ.
ಮಹಿಳೆಯರಿಗೆ: 40 ಗ್ರಾಂ ವರೆಗೆ ಚಿನ್ನ ತರಲು ಅವಕಾಶ
ಪುರುಷ ಪ್ರಯಾಣಿಕರಿಗೆ: 20 ಗ್ರಾಂ ವರೆಗೆ
ಯಾವ ಆಭರಣ ತರುವ ವಿಚಾರದಲ್ಲಿ ಬದಲಾವಣೆ ಆಗಿದೆ
ಈ ಹಿಂದೆ ನೀವು ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸವಿದ್ದು, ಹಿಂದಿರುಗುತ್ತಿದ್ದರೆ ತೂಕ ಮತ್ತು ಮೌಲ್ಯ ಮಿತಿಗಳಿಗೆ ಒಳಪಟ್ಟು ಪ್ರಯಾಣಿಕರಿಗೆ 20 ಗ್ರಾಂ 50,000 ರೂಪಾಯಿ ವರೆಗೆ ಮತ್ತು ಮಹಿಳಾ ಪ್ರಯಾಣಿಕರಿಗೆ 40 ಗ್ರಾಂ ಹಾಗೂ 1,00,000 ರೂಪಾಯಿಯ ವರೆಗೆ ಆಭರಣಗಳನ್ನು ಸುಂಕ ರಹಿತವಾಗಿ ತರುವುದಕ್ಕೆ ಅವಕಾಶ ನೀಡಲಾಗಿತ್ತು.
ಹಳೆಯ ನಿಯಮಗಳ ಆಧಾರದ ಮೇಲೆ ಸಣ್ಣ ಪ್ರಮಾಣದ ಆಭರಣಗಳನ್ನು ಸಹ ಕಸ್ಟಮ್ಸ್ ಇಲಾಖೆಯು ವಶಪಡಿಸಿಕೊಳ್ಳುತ್ತಿತ್ತು. ಈ ಹೊಸ ನಿಯಮಗಳು ಒತ್ತಡದ ಕಸ್ಟಮ್ಸ್ ಕ್ಲಿಯರೆನ್ಸ್ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ, ಎಲೆಕ್ಟ್ರಾನಿಕ್ ಕ್ಲಿಯರೆನ್ಸ್, ಸುಗಮ ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ಒಟ್ಟಾರೆಯಾಗಿ ಚಿನ್ನ ಪ್ರಿಯರು ವಿದೇಶಗಳಿಂದ ಚಿನ್ನ ಖರೀದಿ ಮಾಡುವುದು ಅತ್ಯಂತ ಸುಲಭವಾಗಿದೆ.
ಹೊಸ ನಿಯಮದಲ್ಲಿ ಏನಿದೆ
ಇನ್ನು ಹೊಸ ಬ್ಯಾಗೇಜ್ ನಿಯಮಗಳ ಪ್ರಕಾರ, ಹಣಕಾಸು ಸಚಿವಾಲಯವು ತನ್ನ ಬ್ಯಾಗೇಜ್ ನಿಯಮಗಳ ಅಧಿಸೂಚನೆಯಲ್ಲಿ ಚಿನ್ನದ ಆಭರಣಗಳ ಬಗ್ಗೆ ಉಲ್ಲೇಖಿಸಿಲ್ಲ. ಹೊಸ ನಿಯಮಗಳು ಎಲ್ಲಾ ರೀತಿಯ ಆಭರಣ ವಸ್ತುಗಳಿಗೆ ಅನ್ವಯಿಸಲಿವೆ. ಚಿನ್ನ ಸೇರಿದಂತೆ ಎಲ್ಲಾ ರೀತಿಯ ಆಭರಣಗಳ ಮೇಲಿನ ಹಿಂದಿನ ಮಿತಿಗಳು 1 ಲಕ್ಷ ರೂ ಅಥವಾ 40 ಗ್ರಾಂ ವರೆಗೆ ಇದ್ದವು. ಹಿಂದಿನ ನಿಯಮಗಳನ್ನು 2016 ರಲ್ಲಿ ರಚಿಸಲಾಯಿತು, ಆಗ ಚಿನ್ನದ ಬೆಲೆ ಸುಮಾರು 30,000 ರೂ.ಗಳಲ್ಲಿತ್ತು. ಆದರೆ ಇದೀಗ ಚಿನ್ನದ ಬೆಲೆಯು ವಿಪರೀತವಾಗಿ ಏರಿಕೆ ಆಗಿರುವುದರಿಂದ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಎಷ್ಟು ಚಿನ್ನವನ್ನು ನೀವು ತೆಗೆದುಕೊಂಡು ಬರಬಹುದು?
ಭಾರತವೂ ಸೇರಿದಂತೆ ವಿಶ್ವದಾದ್ಯಂತ ಚಿನ್ನದ ಬೆಲೆಯು ವಿಪರೀತವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನ ಖರೀದಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ವಿವಿಧ ಪ್ರಯಾಣಿಕರಿಗೆ ಚಿನ್ನ ತೆಗೆದುಕೊಂಡು ಬರುವ ಅರ್ಹತೆಗಳನ್ನು ಪರಿಷ್ಕರಿಸಲಾಗಿದೆ. ಅದರ ವಿವರ ಇಲ್ಲಿದೆ.
ಈ ಪ್ರಯಾಣಿಕರಿಗೆ ಸುಂಕ ರಹಿತ ಭತ್ಯೆಯನ್ನು ಪರಿಶೀಲಿಸಿ
ನಿವಾಸಿ: ಸುಂಕ ರಹಿತ ಭತ್ಯೆ 50,000 ರೂ.ಗಳಿಂದ 75,000 ರೂ.ಗಳಿಗೆ ಹೆಚ್ಚಿಸಲಾಗಿದೆ
ಭಾರತೀಯ ಮೂಲದ ಪ್ರವಾಸಿ: 75,000 ರೂ.
ಪ್ರವಾಸಿ ವೀಸಾ ಹೊರತುಪಡಿಸಿ ಮಾನ್ಯ ವೀಸಾ ಹೊಂದಿರುವ ವಿದೇಶಿ: 75,000 ರೂ.
ವಿದೇಶಿ ಮೂಲದ ಪ್ರವಾಸಿ: 25,000 ರೂ.
ಸಿಬ್ಬಂದಿ ಸದಸ್ಯರು: ರೂ. 2,500 ರೂ.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral












Click it and Unblock the Notifications