ತಗ್ಗಿದ ಬೇಡಿಕೆ : ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ
ಬೆಂಗಳೂರು, ಜುಲೈ 17: ಸ್ಥಳೀಯ ಆಭರಣಕಾರರು ಮತ್ತು ವ್ಯಾಪಾರಿಗಳಿಂದ ಬೇಡಿಕೆ ಕಡಿಮೆಯಾಗಿರುವುದು, ಜಾಗತಿಕವಾಗಿ ಹೆಚ್ಚಿನ ಏರಿಕೆ ಕಾಣದಿರುವುದು ಇವೇ ಮುಂತಾದ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.
ಬಂಗಾರದ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದ್ದು, ಮಂಗಳವಾರದಂದು ಚಿನಿವಾರ ಪೇಟೆಯಲ್ಲಿ ಸದ್ಯ 10 ಗ್ರಾಂ ಚಿನ್ನದ ಬೆಲೆ 31,050 ರೂಪಾಯಿ ಇದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 130 ರು ಇಳಿಕೆ ಕಂಡು 39,820 ರು ನಷ್ಟಿದೆ.
ಸಿಂಗಪುರದಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ ಶೇ 0.28 ರಷ್ಟು ಏರಿಕೆ ಕಂಡು 1,243.70 ಪ್ರತಿ ಔನ್ಸ್ ಹಾಗೂ ಬೆಳ್ಳಿ ಬೆಲೆ ಶೇ 0.44 ರಷ್ಟು ಏರಿಕೆ ಕಂಡಿದೆ. ಸವರನ್ ಚಿನ್ನ 8 ಗ್ರಾಮ್ ಗೆ 24,700 ರು ನಷ್ಟಿದೆ. ಬೆಳ್ಳಿ ನಾಣ್ಯ 100ಕ್ಕೆ 75,000ರುನಷ್ಟಿದೆ.

ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ 28,250ರು ಹಾಗೂ ಅಪರಂಜಿ ಇನ್ನ 28,310 ರು ನಷ್ಟಿದೆ. ಬೆಳ್ಳಿ 1 ಕೆಜಿ 42,200ರು ನಷ್ಟಿದೆ.












Click it and Unblock the Notifications