Gold-Silver Price: ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಇಂದು ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಕುಸಿತ, ದರಪಟ್ಟಿ ಹೀಗಿದೆ
Gold Silver Price Update: ಚಿನ್ನಾಭರಣಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿ ಸಿಕ್ಕಿದೆ. ಬಂಗಾರ ಹಾಗೂ ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಎರಡು ಲೋಹಗಳು ಬೆಲೆಗಳು ಇಳಿಮುಖವಾಗಿದ್ದು, ಆಭರಣ ಖರೀದಿಸುವವರಿಗೆ ಇದೊಂದು ಸೂಕ್ತ ಸಮಯ ಎನ್ನಬಹುದು. ವಾರಾಂತ್ಯದ ಹೊತ್ತಿಗೆ ಇನ್ನಷ್ಟು ಇಳಿಕೆಯ ನಿರೀಕ್ಷೆ ಇದೆ.
ಇಂದು ಗುರುವಾರ (ಏಪ್ರಿಲ್ 23) ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಿಯ ದರ 5000 ರೂಪಾಯಿ ಕುಸಿತ ಕಂಡರೆ, ಚಿನ್ನದ ಬೆಲೆಯು 24 ಕ್ಯಾರಟ್ 10 ಗ್ರಾಂ 1200 ರೂಪಾಯಿ, 22 ಕ್ಯಾರಟ್ 10 ಗ್ರಾಂ 1100 ರೂಪಾಯಿ ಇಳಿಕೆ ಕಂಡಿದೆ. ಕೇವಲ ಕರ್ನಾಟಕ, ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ ಆಗಿದೆ.

MCX ನಲ್ಲಿ ಇಂದಿನ ಚಿನ್ನದ ವಹೀವಾಟು
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ವೇದಿಕೆ (MCX) ಚಿನ್ನದ ಬೆಲೆಗಳು (ಜೂನ್ ಅವಧಿ ಮುಗಿದ ನಂತರ) ಸಹ ಏರಿಳಿತದಿಂದ ಕೂಡಿವೆ. ಈ ವಾರದ ಆರಂಭದಲ್ಲಿ 10 ಗ್ರಾಂ ಚಿನ್ನವು 1,53,455 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸಿತ್ತು. ಹೆಚ್ಚಾದ ಯುಎಸ್ ಹಣದುಬ್ಬರದ ಆತಂಕದಿಂದ ಬಂಗಾರ ಬೆಲೆ ಒತ್ತಡದಲ್ಲಿದೆ. ಹೀಗಾಗಿ ನಿರಂತರ ಇಳಿಕೆ ಕಾಣುತ್ತಿದೆ. ಇದರ ಬೆನ್ನಲ್ಲೆ ಬಂಗಾರ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜೂನ್ ಫ್ಯೂಚರ್‌ಗಳು ಶೇ.0.52ರಷ್ಟು ಕುಸಿತದ ನಂತರ 1,52,234 ರೂ. ಆಸುಪಾಸಿನಲ್ಲಿ ವಹಿವಾಟು ನಡೆದಿದೆ. ಮುಂದಿನ ದಿನಗಲ್ಲಿ ಚಿನ್ನ-ಬೆಳ್ಳಿ ಮತ್ತಷ್ಟು ಇಳಿಕೆ ಆಗುವ ಆತಂಕವಿದೆ.
ನಿರಂತರ ಕುಸಿಯುತ್ತಿರುವ ಚಿನ್ನ-ಬೆಳ್ಳಿ ದರ
ಇಂದು 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 110 ರೂ.ನಂತೆ 10 ಗ್ರಾಂಗೆ 1,100 ರೂ. ಇಳಿಕೆ ಆಗುವ ಮೂಲಕ ಅದರ ಬೆಲೆ 1,40,750 ರೂಪಾಯಿಗೆ ತಗ್ಗಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ದರವು 120 ರೂ.ನಂತೆ 10 ಗ್ರಾಂದ 1200 ರೂ. ಕುಸಿದು ಒಟ್ಟು ದರವು 1,53,550 ರೂಪಾಯಿ ಇಳಿಕೆ ಕಂಡಿದೆ.
ಏಪ್ರಿಲ್ 18ರಂದು ಒಂದು ಗ್ರಾಂ ಆಭರಣ ಚಿನ್ನವು 75 ರೂ.ಜಿಗಿದಿತ್ತು. ಅಲ್ಲಿಂದ ಈವರೆಗೆ ನಿರಂತರವಾಗಿ ಕುಸಿಯುತ್ತಲೇ ಸಾಗಿದೆ. ಏಪ್ರಿಲ್ 22ರಂದು ಬುಧವಾರ 50 ರೂಪಾಯಿ ಇಳಿಕೆ ಕಂಡಿತ್ತು.
ಬೆಳ್ಳಿ ದರ ಕುಸಿತ
ಇಂದು 100 ಗ್ರಾಂ ಬೆಳ್ಳಿಗೆ 500 ರೂಪಾಯಿ, ಒಂದು ಕೆಜಿ ಬೆಳ್ಳಿಗೆ 5000 ರೂಪಾಯಿ ಕುಸಿತ ಕಂಡಿದೆ. ಒಂದೇ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಇಳಿಕೆ ಆಗಿರುವುದು ಗ್ರಾಹಕರಿಗೆ ಖುಷಿ ನೀಡಿದರೆ, ಬಂಡವಾಳ ಹೂಡಿಕೆದಾರರಿಗೆ ಸಂಕಷ್ಟ ಎದುರಾದಂತಾಗಿದೆ. ಈ ಲೋಹಗಳ ಮೇಲಿನ ಹೂಡಿಕೆ ಹಿಂಪಡೆಯಬೇಕೆ, ಇನ್ನು ಸ್ವಲ್ಪ ದಿನ ಕಾದು ನೋಡಬೇಕೋ? ಎಂಬ ಗೊಂದಲದಲ್ಲಿದ್ದಾರೆ. ಕೆಲವರು ಚಿನ್ನ-ಬೆಳ್ಳಿ ಮೇಲಿನ ಹೂಡಿಕೆ ಹಿಂತೆಗೆದುಕೊಂಡು ಹಾಲಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರಾಟ ಹೆಚ್ಚಾಗಿದೆ. ಬೇಡಿಕೆ ಕಡಿಮೆ ಆಗಿದೆ. ಇನ್ನು ಗ್ರಾಹಕರು ಮತ್ತಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕಾಯುತ್ತಿದ್ದಾರೆ.
ನಗರವಾರು 1 ಗ್ರಾಂ (22k) ಚಿನ್ನದ ಬೆಲೆ
ಬೆಂಗಳೂರು: 14,075 ರೂಪಾಯಿ
ದೆಹಲಿ: 14,090 ರೂಪಾಯಿ
ಚೆನ್ನೈ: 14,160 ರೂಪಾಯಿ
ಮುಂಬೈ: 14,075 ರೂಪಾಯಿ
ಕೊಲ್ಕತ್ತಾ: 14,075 ರೂಪಾಯಿ
ಹೈದರಾಬಾದ್: 14,075 ರೂಪಾಯಿ
ಕೇರಳ: 14,075 ರೂಪಾಯಿ
ಪುಣೆ: 14,075 ರೂಪಾಯಿ












Click it and Unblock the Notifications