Gold Silver Prices: ಚಿನ್ನ, ಬೆಳ್ಳಿ ಬೆಲೆ ಸದ್ಯದಲ್ಲೇ ಕುಸಿತ: ರಾಬರ್ಟ್ ಕಿಯೋಸಾಕಿ ಭವಿಷ್ಯದಿಂದ ಆಭರಣಪ್ರಿಯರು ಫುಲ್‌ ಖುಷ್

ನವದೆಹಲಿ, ಜುಲೈ 22: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನೀವು ಕೂಡ ಚಿನ್ನ ಖರೀದಿಸೋಕೆ ಹೋಗ್ತಾ ಇದ್ದೀರಾ? ಇಲ್ಲ ಬಂಗಾರ ಖರೀದಿಸಬೇಕು ಅಂತ ಅಂದುಕೊಂಡಿದ್ದೀರಾ? ಸದ್ಯದಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಇತಿಹಾಸದಲ್ಲಿ ಅತ್ಯಂತ ದೊಡ್ಡ ಆರ್ಥಿಕ ಕುಸಿತ ಶೀಘ್ರದಲ್ಲೇ ಬರಲಿದೆ ಎಂದು ರಾಬರ್ಟ್ ಕಿಯೋಸಾಕಿ ದಿಟ್ಟ ಭವಿಷ್ಯ ನುಡಿದಿದ್ದಾರೆ.

ತಮ್ಮ ಅಪಾರ ಅನುಭವದ ಆಧಾರದ ಮೇಲೆ ಪ್ರತಿದಿನ ತಮ್ಮ ಅನುಯಾಯಿಗಳಿಗೆ ಆರ್ಥಿಕ ಸಲಹೆಯನ್ನು ತಿಳಿಸುವ ರಾಬರ್ಟ್ ಕಿಯೋಸಾಕಿ, ಮತ್ತೊಮ್ಮೆ ನಿಮ್ಮನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಪ್ರೇರೇಪಿಸುವ ದಿಟ್ಟ ಭವಿಷ್ಯ ನುಡಿದಿದ್ದಾರೆ. ಸದ್ಯದಲ್ಲೇ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತಿದೊಡ್ಡ ಕುಸಿತ ಆರಂಭವಾಗಬಹುದು ಎಂದು ಕೆಲವಾರು ವರ್ಷಗಳಿಂದ ರಾಬರ್ಟ್ ಕಿಯೋಸಾಕಿ ಹೇಳುತ್ತಾ ಬಂದಿದ್ದರು, ಇದೀಗ ರು ಚಿನ್ನ, ಬೆಳ್ಳಿ, ಬಿಟ್​ಕಾಯಿನ್ ಬೆಲೆ ಕುಸಿಯಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ರಾಬರ್ಟ್‌ ಕಿಯೋಸಾಕಿ ಅವರ ಭವಿಷ್ಯದಿಂದಾಗಿ ಆಭರಣ ಪ್ರಿಯರು ಹಾಗೂ ಹೂಡಿಕೆದಾರರು ಫುಲ್‌ ಖುಷಿಯಾಗಿದ್ದಾರೆ.

Gold silver and Bitcoin will bust too Robert Kiyosaki hints at price crash

ಷೇರು ಮಾರುಕಟ್ಟೆ, ಡಾಲರ್, ಹೂಡಿಕೆ ಬಗ್ಗೆ ಹೆಚ್ಚು ಹೆಚ್ಚು ಸಲಹೆಗಳನ್ನು ನೀಡುತ್ತಲೇ ಇರುವ ಖ್ಯಾತ ಲೇಖಕ ಮತ್ತು ಹೂಡಿಕೆದಾರ ರಾಬರ್ಟ್ ಕಿಯೋಸಾಕಿ ಅವರು ಇದೀಗ ಚಿನ್ನ , ಬೆಳ್ಳಿ ಹಾಗೂ ಬಿಟ್​ಕಾಯಿನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸದ್ಯದಲ್ಲೇ ವಿಶ್ವದ ಪ್ರಮುಖ ಸರಕುಗಳ ಬೆಲೆ ಕುಸಿತ ಆರಂಭವಾಗಬಹುದು ಎನ್ನುವ ಸುಳಿವನ್ನು ನೀಡಿದ್ದಾರೆ. ಇದು ತಮಗೆ ಒಳ್ಳೆಯ ಸುದ್ದಿ ಎಂದೂ ರಾಬರ್ಟ್‌ ಕಿಯೋಸಾಕಿ ಅವರು ಹೇಳಿದ್ದಾರೆ. ಉಬ್ಬರ ಒಡೆಯಲು ಆರಂಭಿಸುತ್ತಿದೆ. ಅದರ ಜೊತೆಗೆ ಚಿನ್ನ ಬೆಳ್ಳಿ, ಬಿಟ್​ಕಾಯಿನ್ ಕೂಡ ಕುಸಿಯುತ್ತವೆ. ಹಾಗೇನಾದರೂ ಆದರೆ, ತಾನು ಅವುಗಳಲ್ಲಿ ಹೂಡಿಕೆ ಮಾಡುತ್ತೇನೆ ಎಂದು ರಾಬರ್ಟ್‌ ಕಿಯೋಸಾಕಿ ತಿಳಿಸಿದ್ದಾರೆ.

ಬಬಲ್​ಗಳು ಒಡೆಯಲಿವೆ. ಇವು ಒಡೆದಾಗ, ಚಿನ್ನ, ಬೆಳ್ಳಿ ಮತ್ತು ಬಿಟ್​ಕಾಯಿನ್ ಕೂಡ ಒಡೆಯಬಹುದು ಎಂದು ರಾಬರ್ಟ್‌ ಕಿಯೋಸಾಕಿ ಅವರು ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ, ಈ ಸರಕುಗಳ ಬೆಲೆ ಕುಸಿದಾಗ ತಾನು ಅವುಗಳ ಮೇಲೆ ಹೂಡಿಕೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಅಂದರೆ, ರಿಚ್ ಡ್ಯಾಡ್ ಪೂರ್ ಡ್ಯಾಡ್ ಎನ್ನುವ ಬೆಸ್ಟ್ ಸೆಲ್ಲಿಂಗ್ ಪುಸ್ತಕದ ಕರ್ತೃವಾದ ಕಿಯೋಸಾಕಿ, ತಾನು ಚಿನ್ನ, ಬೆಳ್ಳಿ ಬಿಟ್​ಕಾಯಿನ್ ಮೇಲೆ ಹೂಡಿಕೆ ಮಾಡಲಿರುವುದಾಗಿ ಹೇಳಿದ್ದಾರೆ.

ಹಣ ಉಳಿಸಿ ಕೂಡಿ ಹಾಕುವವರನ್ನು ರಾಬರ್ಟ್ ಕಿಯೋಸಾಕಿ ಲೂಸರ್ಸ್ ಎಂದು ಕರೆಯುತ್ತಾರೆ. ಹಣಕ್ಕೆ ಯಾವ ಮೌಲ್ಯವೂ ಇಲ್ಲ. ಹಾಗೆ ಹಣ ಕೂಡಿ ಹಾಕುವ ಬದಲು ಎಲ್ಲಿಯಾದರೂ ಹೂಡಿಕೆ ಮಾಡಿ ಎಂದು ರಾಬರ್ಟ್‌ ಅವರು ಸಲಹೆ ನೀಡುತ್ತಾರೆ. 1987ರಲ್ಲಿ ಮಾರುಕಟ್ಟೆ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 1998ರಲ್ಲಿ ಎಲ್​ಟಿಸಿಎಂ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. 2019ರಲ್ಲಿ ರಿಪೋ ಮಾರ್ಕೆಟ್ ಕುಸಿದಾಗ ನಕಲಿ ಡಾಲರ್ ಮುದ್ರಿಸಿದರು. ಕೋವಿಡ್ ಬಂದಾಗಲೂ ಮುದ್ರಿಸಿದರು ಎಂದು ಹೇಳಿದ್ದಾರೆ.

ನಕಲಿ ಡಾಲರ್​ಗಳನ್ನು ಉಳಿಸುವುದನ್ನು ಬಿಟ್ಟು ನೈಜ ಚಿನ್ನ, ಬೆಳ್ಳಿ ಮತ್ತು ಬಿಟ್​ಕಾಯಿನ್​ಗಳನ್ನು ಉಳಿಸಲು ಆರಂಭಿಸಿ ಎಂದು ಮತ್ತೊಂದು ಪೋಸ್ಟ್​ನಲ್ಲಿ ಹೇಳಿದ್ದಾರೆ. ಅಮೆರಿಕವನ್ನು ವಿಶ್ವದ ಅತಿದೊಡ್ಡ ಸಾಲಗಾರ ದೇಶ ಎಂದು ಬಣ್ಣಿಸುವ ಇವರು, ಇತಿಹಾಸದಲ್ಲೇ ಅತಿದೊಡ್ಡ ಕುಸಿತ ಸದ್ಯದಲ್ಲೇ ಬರುತ್ತಿದೆ ಎಂದು ಎಚ್ಚರಿಸಿದ್ದಾರೆ. ಆಗ ಹೆಚ್ಚು ಹೆಚ್ಚು ಹೂಡಿಕೆ ಮಾಡಿ ಎಂದು ಸಹ ಸಲಹೆ ನೀಡಿದ್ದಾರೆ. "ನಕಲಿ ಡಾಲರ್‌ಗಳನ್ನು ಉಳಿಸುವುದನ್ನು ನಿಲ್ಲಿಸಿ, ನಿಜವಾದ ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್‌ಗಳನ್ನು ಉಳಿಸಲು ಪ್ರಾರಂಭಿಸಿ" ಎಂದು ಅವರು ಪುನರುಚ್ಚರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+