ಸತತ ಐದು ದಿನಗಳ ಕುಸಿತದ ಬಳಿಕ, ಇಂದು ಚಿನ್ನದ ಬೆಲೆ ಏರಿಕೆ
ನವದೆಹಲಿ, ಜನವರಿ 29: ಭಾರತೀಯ ಮಾರುಕಟ್ಟೆಗಳಲ್ಲಿ ಸತತ ಐದು ದಿನಗಳ ಕುಸಿತದ ನಂತರ ಇಂದು ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆ ಏರಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.26ರಷ್ಟು ಏರಿಕೆಯಾಗಿ 48,749 ರೂಪಾಯಿಗೆ ತಲುಪಿದೆ.
ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಏರಿಕೆ ಜೊತೆಗೆ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಶೇಕಡಾ 1.5ರಷ್ಟು ಏರಿಕೆಯಾಗಿ 68,639 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.5ರಷ್ಟು ಮತ್ತು ಬೆಳ್ಳಿ ಶೇಕಡಾ 1.8ರಷ್ಟು ಕುಸಿದಿದೆ.
ಹಿಂದಿನ ದಿನದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.5ರಷ್ಟು ಮತ್ತು ಬೆಳ್ಳಿ ಶೇಕಡಾ 1.8ರಷ್ಟು ಕುಸಿದಿದೆ. ಭಾರತದಲ್ಲಿ ಈ ವರ್ಷ(2021) ಇಲ್ಲಿಯವರೆಗೆ ಚಿನ್ನದ ಬೆಲೆಗಳು ಸುಮಾರು ಶೇಕಡಾ 3ರಷ್ಟು ಅಥವಾ 1,500 ರೂಪಾಯಿನಷ್ಟು ಇಳಿಕೆಯಾಗಿದ್ದು, ಜಾಗತಿಕ ದರಗಳಲ್ಲಿ ಇದೇ ರೀತಿಯ ಕುಸಿತ ಕಂಡುಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಇಂದು ಯಾವುದೇ ಹೆಚ್ಚಿನ ವ್ಯತ್ಯಾಸ ಕಂಡು ಬರದಿದ್ದರೂ, ಮಾಸಿಕ ಕುಸಿತಕ್ಕೆ ಕಾರಣವಾಯಿತು. ಸ್ಪಾಟ್ ಚಿನ್ನವು ಔನ್ಸ್‌ಗೆ 1,840.91 ಡಾಲರ್‌ಗೆ ಸ್ಥಿರವಾಗಿದ್ದು, ಬೆಳ್ಳಿ ದರಗಳು ಔನ್ಸ್‌ಗೆ ಶೇಕಡಾ 0.7ರಷ್ಟು ಇಳಿದು 26.18 ಡಾಲರ್‌ಗೆ ತಲುಪಿದೆ.
ಅಮೆರಿಕಾದ ವಿಶೇಷ ಆರ್ಥಿಕ ಪ್ಯಾಕೇಜ್ ವಿಳಂಬವಾಗಬಹುದು ಎಂಬುದು ಹಳದಿ ಲೋಹದ ಮೇಲೆ ಪರಿಣಾಮ ಬೀರುತ್ತಿದೆ. ಅಮೆರಿಕಾ ಡಾಲರ್ ಇತರೆ ಕರೆನ್ಸಿಗಳ ವಿರುದ್ಧ ಶೇಕಡಾ 0.28ರಷ್ಟು ಏರಿಕೆಯಾಗಿದ್ದು, ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವು ದುಬಾರಿಯಾಗಿದೆ.












Click it and Unblock the Notifications