ಅ.23ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಅಕ್ಟೋಬರ್ 23: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 23 ರಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಳಿತ ಕಂಡಿದೆ.
22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,450 ರೂ ಆಗಿದ್ದು, 10 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನ 47,450 ರೂ. ಆಗಿದ್ದು 10 ರೂ. ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,750 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,820 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,700 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 50,950 ರೂ. ಇದೆ.
ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ - ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ 'ಭಾರತೀಯ ಚಿನ್ನ ಬೇಡಿಕೆಯ ಚಾಲಕರು' ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಎಕನೋಮೆಟ್ರಿಕ್ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990 ರಿಂದ 2020 ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ.
ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ, ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾ ಶಾಸ್ತ್ರ, ಸಾಮಾಜಿಕ - ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 23: 44, 750 ರೂ ,( 200 ರೂ ಏರಿಕೆ) 48,820 ರೂ(200 ರೂ ಏರಿಕೆ)
ಅಕ್ಟೋಬರ್ 22: 44, 550 ರೂ, 48,600 ರೂ(-)
ಅಕ್ಟೋಬರ್ 21: 44, 550 ರೂ, 48,600ರೂ
ಅಕ್ಟೋಬರ್ 20:44, 300 ರೂ, 48,330 ರೂ(-)
ಅಕ್ಟೋಬರ್ 19:44, 300 ರೂ, 48,330 ರೂ
ಅಕ್ಟೋಬರ್ 18:44, 300 ರೂ, 48,330 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 23: 46,700ರೂ, 50,850ರೂ
ಅಕ್ಟೋಬರ್ 22: 46,700ರೂ,(90ರೂ ಏರಿಕೆ, 50,950ರೂ( 100 ರೂ ಏರಿಕೆ)
ಅಕ್ಟೋಬರ್ 21: 46,610 ರೂ, 50,850ರೂ
ಅಕ್ಟೋಬರ್ 20: 46,450( 10ರೂ ಇಳಿಕೆ), 50,670 ರೂ(10ರೂ ಇಳಿಕೆ)
ಅಕ್ಟೋಬರ್ 19:46,460 ರೂ,( 130ರೂ. ಏರಿಕೆ) 50,680 ರೂ( 140 ರೂ. ಏರಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 65,600 ರೂಪಾಯಿ

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 23: 46,450ರೂ,(10 ರೂ ಇಳಿಕೆ) 47,450 ರೂ (10 ರೂ ಇಳಿಕೆ)
ಅಕ್ಟೋಬರ್ 22: 46,460ರೂ, (20 ರೂ ಇಳಿಕೆ) 47,460 ರೂ (20 ರೂ ಇಳಿಕೆ)
ಅಕ್ಟೋಬರ್ 21: 46,480ರೂ, 47,480 ರೂ
ಅಕ್ಟೋಬರ್ 20: 46,500 ರೂ, 47,500 ರೂ
ಅಕ್ಟೋಬರ್ 19: 47,070 ರೂ, 48,070 ರೂ
ಬೆಳ್ಳಿ ಬೆಲೆ ಕೆ.ಜಿಗೆ 65,600ರೂಪಾಯಿ

ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 23: 44,750 ರೂ,(200 ರೂ ಏರಿಕೆ) 47,450 ರೂ
ಅಕ್ಟೋಬರ್ 22: 44,550 ರೂ, 48,600ರೂ(-)
ಅಕ್ಟೋಬರ್ 21: 44,550 ರೂ, 48,600ರೂ
ಅಕ್ಟೋಬರ್ 20: 44,300 ರೂ, 48330 ರೂ
ಅಕ್ಟೋಬರ್ 19: 44,300 ರೂ, 48330 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,900 ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 23: 46,950 ರೂ, ರೂ 49,650 ರೂ
ಅಕ್ಟೋಬರ್ 22: 46,950 ರೂ,(50 ರೂ ಏರಿಕೆ) 49,650 ರೂ 50 ರೂ ಏರಿಕೆ
ಅಕ್ಟೋಬರ್ 21: 46,900 ರೂ, 49,600 ರೂ
ಅಕ್ಟೋಬರ್ 20: 46,840 ರೂ, 48,300 ರೂ
ಅಕ್ಟೋಬರ್ 19: 46,760ರೂ(30ರೂ. ಏರಿಕೆ) , 49,460ರೂ(30ರೂ. ಏರಿಕೆ)
ಬೆಳ್ಳಿ: 1 ಕೆ.ಜಿಗೆ 65,600 ರೂಪಾಯಿ












Click it and Unblock the Notifications