ಆಭರಣಗಾರರಿಂದ ತಗ್ಗಿದ ಬೇಡಿಕೆ, ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ

ನವದೆಹಲಿ, ಜೂನ್ 27: ಚಿನಿವಾರ ಪೇಟೆಯಲ್ಲಿ ಹಳದಿ ಲೋಹದ ಬೆಲೆ ಏರಿಳಿತ ಮುಂದುವರೆದಿದೆ. ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು (ಜೂನ್ 27) ದಿಢೀರ್ ಇಳಿಕೆ ಕಂಡಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಗುರುವಾರದಂದು 10 ಗ್ರಾಂಗೆ ಸರಾಸರಿ 300 ರೂ ನಷ್ಟು ಇಳಿಕೆಯಾಗಿದೆ. ಕೈಗಾರಿಕಾ ಘಟಕ ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ತಗ್ಗಿದ್ದರಿಂದ ಬೆಳ್ಳಿ ದರದಲ್ಲೂ ಇಳಿಕೆಯಾಗಿದೆ. ಪ್ರಧಾನಿ ಮೋದಿ ಹಾಗು ಟ್ರಂಪ್ ನಡುವಿನ ಭೇಟಿ, ಮಾತುಕತೆ, ಆಮದು ಸುಂಕ ಕುರಿತ ಚರ್ಚೆ ಬೆಳವಣಿಗೆ ಜೊತೆಗೆ ಸ್ಥಳೀಯ ಆಭರಣ ತಯಾರಕರು, ವ್ಯಾಪಾರಿಗಳಿಂದ ಕೂಡಾ ಬೇಡಿಕೆ ತಗ್ಗಿರುವುದರಿಂದ ಚಿನ್ನ, ಬೆಳ್ಳಿ ದರ ತಗ್ಗಿದೆ.

ಎಂ ಸಿಎಕ್ಸ್ ನಲ್ಲಿ ಗುರುವಾರ ಬೆಳಗ್ಗೆ 10.45ರ ಸುಮಾರಿಗೆ 10 ಗ್ರಾಂಗೆ 34224 ರು ನಷ್ಟಿತ್ತು, ಆರಂಭದಲ್ಲಿ 163ರು ಕಳೆದುಕೊಂಡಿತ್ತು, ದಿನದ ಅಂತ್ಯಕ್ಕೆ ಸರಾಸರಿ 300ರು ನಷ್ಟು ತಗ್ಗಿದೆ. ಬೆಳ್ಳಿ ಕೂಡಾ 206ರು ನಷ್ಟು ತಗ್ಗಿದ್ದು, ಪ್ರತಿ 1 ಕೆಜಿಗೆ ಬೆಲೆ 37,656ರು ನಷ್ಟಿದೆ. ಎಂಸಿಎಕ್ಸ್ ನಲ್ಲಿ ಫ್ಯೂಚರ್ ಬಂಗಾರದ ಬೆಲೆ ಕಳೆದ ಎರಡು ದಿನಗಳಲ್ಲಿ 35 ಸಾವಿರ ರು ಗಡಿ ದಾಟುವ ಸುಳಿವು ಸಿಕ್ಕಿತ್ತು. ಆದರೆ, ಈಗ 34 ಸಾವಿರಕ್ಕೆ ಸ್ಥಿರವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Gold Rate Today: Gold falls on rally low spot demand

ದೆಹಲಿಯಲ್ಲಿ 99.9% ಪರಿಶುದ್ಧ ಚಿನ್ನ ಹಾಗೂ 99.5% ಪರಿಶುದ್ಧ ಚಿನ್ನ ಬೆಲೆ ಕ್ರಮವಾಗಿ 10 ಗ್ರಾಂಗೆ 33,300ರು ಹಾಗೂ 34,500ರು ಪ್ರತಿ 10ಗ್ರಾಂ ನಂತೆ ಮಾರಾಟ ಕಂಡಿದೆ.

ಸವರನ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿದ್ದು, 100ರು ಇಳಿಕೆ ಕಂಡು 8 ಗ್ರಾಂಗೆ 26,800ರು ನಷ್ಟಿದೆ. ಬೆಳ್ಳಿ ನಾಣ್ಯಗಳು 1,000 ರು ಏರಿಕೆ ಕಂಡು 100ಕ್ಕೆ 81,000ರು ಖರೀದಿಗೆ ಹಾಗೂ 82,000 ರು ಮಾರಾಟಕ್ಕೆ ದರ ಪಡೆದುಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+