Gold Price: ಕುಸಿದಿದ್ದ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ- ಯುಗಾದಿ ಹಬ್ಬ ಹತ್ತಿರವಾಗುತ್ತಿದ್ದಂತೆ ದುಬಾರಿಯಾದ ಬಂಗಾರ

ಭಾರತೀಯರು ಚಿನ್ನವನ್ನು ತುಂಬಾ ಪ್ರೀತಿಸುತ್ತಾರೆ. ಹಬ್ಬ, ಶುಭ ಸಂದರ್ಭಗಳು ಮತ್ತು ಇತರ ಆಚರಣೆಗಳ ಸಮಯದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಮಹಿಳೆಯರು ಹೆಚ್ಚಾಗಿ ಚಿನ್ನಾಭರಣಗಳನ್ನು ಖರೀದಿ ಮಾಡುತ್ತಾರೆ. ಚಿನ್ನದ ಆಭರಣಗಳು ಮಹಿಳೆಯರಿಗೆ ಅಲಂಕಾರವೂ ಹೌದು. ಅದಕ್ಕಾಗಿಯೇ ಮಹಿಳೆಯರು ಚಿನ್ನಾಭರಣಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಹೆಚ್ಚಳದಿಂದಾಗಿ ಜನರು ಚಿನ್ನದ ಆಭರಣಗಳನ್ನು ಖರೀದಿಸಲು ಹಿಂದೇಟಾಗುತ್ತಿದ್ದಾರೆ.

ಹೌದು... ಇತ್ತೀಚೆಗೆ ಸತತ ಎರಡು ದಿನ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡು ಬಂದಿತ್ತು. ಆದರೀಗ ಕೇವಲ ಒಂದು ದಿನದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಇದ್ದಕ್ಕಿದ್ದಂತೆ ಏರಿಕೆಯಾಗಿದೆ. ಹಾಗಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.

Gold rate today 30th january 2025 today gold and silver rates in india including bengaluru delhi

ಜನವರಿ 30 ಚಿನ್ನ ಮತ್ತು ಬೆಳ್ಳಿ ದರಗಳು

* ಬೆಂಗಳೂರಿನಲ್ಲಿ ಜನವರಿ 30 ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 75,960 ರೂಪಾಯಿ ಇದೆ. ಈ ಬೆಲೆ ನಿನ್ನೆ 75,950 ರೂಪಾಯಿ ಇತ್ತು. ಇನ್ನೂ ಇಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ 82,860 ರೂಪಾಯಿ ಇದ್ದರೆ ನಿನ್ನೆ ಈ ಬೆಲೆ 82,850 ರೂಪಾಯಿ ಇತ್ತು.

*ಜನವರಿ 30 ರಂದು ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂಗೆ 80,430 ರೂಪಾಯಿ ಇದೆ. ಜನವರಿ 29 ರಂದು 10 ಗ್ರಾಂ ಚಿನ್ನಕ್ಕೆ 80,410 ರೂ. ಬೆಲೆ ಇತ್ತು. ಒಂದು ವಾರದ ಹಿಂದೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 79,690 ರೂ. ಇತ್ತು. ಇನ್ನೂ ಜನವರಿ 30 ರಂದು ದೆಹಲಿಯಲ್ಲಿ ಬೆಳ್ಳಿ ದರ ಕೆಜಿಗೆ 91,850 ರೂಪಾಯಿ ಇದೆ. ಜನವರಿ 29 ರಂದು ಬೆಳ್ಳಿಯ ಬೆಲೆ ಕೆಜಿಗೆ 91,000 ಇತ್ತು. ಒಂದು ವಾರದ ಹಿಂದೆ ಬೆಳ್ಳಿ ಬೆಲೆ ಕೆಜಿಗೆ 90,960 ರೂಪಾಯಿ ಇತ್ತು.

*ಮುಂಬೈನಲ್ಲಿ ಇಂದು ಚಿನ್ನದ ದರ 10 ಗ್ರಾಂಗೆ 80,570 ರೂಪಾಯಿ ಇದೆ. ಜನವರಿ 29 ರಂದು ಚಿನ್ನದ ದರ 10 ಗ್ರಾಂಗೆ 80,550 ರೂಪಾಯಿಗೆ ಲಭ್ಯವಿತ್ತು. ಒಂದು ವಾರದ ಹಿಂದೆ ಜನವರಿ 23 ರಂದು ಚಿನ್ನದ ಬೆಲೆ 10 ಗ್ರಾಂಗೆ 79,830 ರೂಪಾಯಿಗೆ ಮಾರಾಟವಾಗಿತ್ತು. ಇನ್ನೂ ಜನವರಿ 30ರಂದು ಮುಂಬೈನಲ್ಲಿ ಬೆಳ್ಳಿ ದರ ಕೆಜಿಗೆ 92,000 ರೂಪಾಯಿ ಇದೆ. ಆದರೆ ಒಂದು ವಾರದ ಹಿಂದೆ ಈ ಬೆಲೆ ಕೆಜಿಗೆ 91,160 ರೂಪಾಯಿ ಇತ್ತು ಮತ್ತು ಒಂದು ವಾರದ ಹಿಂದೆ ಈ ಬೆಲೆ 91,120 ರೂ ಇತ್ತು.

* ಜನವರಿ 30 ರಂದು ಕೋಲ್ಕತ್ತಾದಲ್ಲಿ ಚಿನ್ನದ ದರ 10 ಗ್ರಾಂಗೆ 80,470 ರೂಪಾಯಿ ಇದೆ. ನಿನ್ನೆ 10 ಗ್ರಾಂಗೆ 80,450 ರೂ.ಗೆ ಮಾರಾಟವಾಗಿತ್ತು ಮತ್ತು ಕಳೆದ ವಾರ 10 ಗ್ರಾಂಗೆ 79,730 ರೂ. ಇತ್ತು. ಇನ್ನೂ ಇಂದು ಕೋಲ್ಕತ್ತಾದಲ್ಲಿ ಬೆಳ್ಳಿ ದರ ಕೆಜಿಗೆ 91,880 ರೂ. ಇದೆ. ಜನವರಿ 29 ರಂದು ಬೆಳ್ಳಿಯ ಬೆಲೆ ಕೆಜಿಗೆ 91,030 ರೂ. ಇತ್ತು. ಕಳೆದ ವಾರ ಜನವರಿ 23 ರಂದು ಬೆಳ್ಳಿ 91,000 ರೂ. ಇತ್ತು.

* ಜನವರಿ 30ರಂದು ಚೆನ್ನೈನಲ್ಲಿ ಚಿನ್ನದ ದರ 10 ಗ್ರಾಂಗೆ 80,810 ರೂ. ಇದೆ. ಜನವರಿ 29 ರಂದು 10 ಗ್ರಾಂಗೆ 80,790 ರೂ. ಇತ್ತು. ಒಂದು ವಾರದ ಹಿಂದೆ ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 80,060 ರೂ. ಇತ್ತು. ಇಂದು ಜನವರಿ 30 ರಂದು ಚೆನ್ನೈನಲ್ಲಿ ಬೆಳ್ಳಿ ದರ ಕೆಜಿಗೆ 92,270 ರೂ. ಇದೆ. ಜನವರಿ 29 ರಂದು ಬೆಳ್ಳಿಯ ಬೆಲೆ ಕೆಜಿಗೆ 91,420 ರೂ. ಇತ್ತು. ಒಂದು ವಾರದ ಹಿಂದೆ ಚೆನ್ನೈನಲ್ಲಿ ಬೆಳ್ಳಿ ಗ್ರಾಹಕರಿಗೆ ಕೆಜಿಗೆ 91,380 ರೂ.ಗೆ ಮಾರಾಟವಾಗಿದೆ.

*ಪ್ರಸ್ತುತ ಹೈದರಾಬಾದ್ ನಗರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 75,950ರೂ. ಇದ್ದು 850 ರೂ. ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನದ ಇತ್ತೀಚಿನ ಬೆಲೆ ಪ್ರತಿ 10 ಗ್ರಾಂಗೆ 82,850 ರೂ. ಇದ್ದು 920 ರೂಪಾಯಿ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+