Gold Rates: ಚಿನ್ನ ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ: ನಗರಗಳಲ್ಲಿ ಇಂದಿನ ದರ ಹೇಗಿದೆ?

ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿತ್ಯ ಹಾವು ಏಣಿ ಆಟ ನಡೆಯುತ್ತಿದೆ. ಇಂದು ಇದ್ದ ಬೆಲೆ ನಾಳೆಗೆ ಇರುವುದು ಕಷ್ಟ. ಹೀಗಾಗಿ ಗ್ರಾಹಕರು ನಾಳೆಗೆ ಕಾಯದೇ ಕೈಗೆಟಕುವ ಬೆಲೆಯಲ್ಲಿ ಚಿನ್ನಾಭರಣ ಬೆಲೆ ಇದ್ದಾಗಲೇ ಖರೀದಿಗೆ ಮುಂದಾಗಿದ್ದಾರೆ. ಹಾಗಾದರೆ ಇಂದು ಬೆಂಗಳೂರು ಸೇರಿದಂತೆ ಭಾರತದ ಇತರ ಪ್ರಮುಖ ನಗರಪ್ರದೇಶಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ಎಂದು ಈಗ ತಿಳಿಯೋಣ.

ಹತ್ತು ದಿನಗಳ ಹಿಂದಿನ ಬೆಲೆಗಳಿಗೆ ಹೋಲಿಸಿದರೆ ಚಿನ್ನದ ಬೆಲೆ ಶೇ.1.7 ರಷ್ಟು ಏರಿಕೆಯಾಗಿದ್ದರೆ, ಬೆಳ್ಳಿ ಬೆಲೆ ಶೇ.0.4 ರಷ್ಟು ಏರಿಕೆಯಾಗಿದೆ. ಡಾಲರ್ ಮೌಲ್ಯದ ಏರಿಕೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಬೆಲೆ ಏರಿಕೆ ಕಂಡುಬಂದಿದೆ. ಹಾಗಾದರೆ ಭಾರತದ ಪ್ರಮುಖ ನಗರಪ್ರದೇಶಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೋಣ.

gold rate today 29th january 2025

ಜನವರಿ 29 ರಂದು ಚಿನ್ನ ಮತ್ತು ಬೆಳ್ಳಿ ದರಗಳು

ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ದರ ಜನವರಿ 29 ರಂದು 10 ಗ್ರಾಂಗೆ 80,550 ರೂ.ಗಳಾಗಿದ್ದು, ಜನವರಿ 28ರ ದರಕ್ಕೆ ಹೋಲಿಸಿದರೆ 670 ರೂ.ಗಳ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 8,055 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ ದರವು 10 ಗ್ರಾಂಗೆ 73,838 ರೂ.ಗಳಷ್ಟಿದೆ.

ಕಳೆದ ಏಳು ದಿನಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯು 0.9% ರಷ್ಟು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಇದರ ಬೆಲೆ 1.7% ರಷ್ಟು ಏರಿಕೆಯಾಗಿದೆ. ಜೊತೆಗೆ ಬೆಳ್ಳಿಯ ಬೆಲೆಯಲ್ಲಿ ಬದಲಾವಣೆ ಕಂಡುಬಂದಿದೆ. ಇದು ಇಂದು ಭಾರತೀಯ ಗ್ರಾಹಕರಿಗೆ ಪ್ರತಿ ಕಿಲೋಗ್ರಾಂಗೆ 91,160 ರೂ.ಗಳ ಬೆಲೆಯಲ್ಲಿ ಲಭ್ಯವಿದೆ.

ಜನವರಿ 29 ರಂದು ಮುಂಬೈನಲ್ಲಿ ಚಿನ್ನದ ದರ

ಮುಂಬೈನಲ್ಲಿ ಇಂದು 10 ಗ್ರಾಂ ಚಿನ್ನದ ದರ 80,550 ರೂ ಇದೆ. ಜನವರಿ 28 ರಂದು ಚಿನ್ನವು 79,880/10 ಗ್ರಾಂಗೆ ಲಭ್ಯವಿತ್ತು. ಒಂದು ವಾರದ ಹಿಂದೆ ಜನವರಿ 22ರಂದು, ಚಿನ್ನವು 10 ಗ್ರಾಂಗೆ 79,800 ರೂ.ಗೆ ಮಾರಾಟವಾಗಿತ್ತು. ಮುಂಬೈನಲ್ಲಿ ಬೆಳ್ಳಿಯ ದರ ಜನವರಿ 29 ರಂದು ಕೆಜಿಗೆ 91,160 ರೂ. ಇದೆ. ಆದರೆ ಒಂದು ವಾರದ ಹಿಂದೆ ಬೆಲೆ 90,360 ರೂ. ಇತ್ತು.

ದೆಹಲಿಯಲ್ಲಿ ಜನವರಿ 29 ರಂದು ಚಿನ್ನದ ದರ

ಜನವರಿ 29 ರಂದು ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂಗೆ 80,410 ರೂ. ಇದೆ. ಜನವರಿ 28 ರಂದು ಚಿನ್ನದ ಬೆಲೆ 10 ಗ್ರಾಂಗೆ 79,740 ಇತ್ತು. ಒಂದು ವಾರದ ಹಿಂದೆ 24 ಕ್ಯಾರೆಟ್ ಚಿನ್ನದ ದರ 79,660/10 ಗ್ರಾಂ ಆಗಿತ್ತು. ಇನ್ನೂ ಇಂದು ದೆಹಲಿಯಲ್ಲಿ ಬೆಳ್ಳಿ ದರ ಕೆಜಿಗೆ 91,000 ರೂ. ಇದೆ. ಜನವರಿ 28 ರಂದು ಬೆಳ್ಳಿ ಬೆಲೆ ಕೆಜಿಗೆ 90,210 ರೂ. ಇತ್ತು. ಒಂದು ವಾರದ ಹಿಂದೆ, ಬೆಳ್ಳಿ ಕೆಜಿಗೆ 91,930 ರೂ.ಗೆ ಮಾರಾಟವಾಗಿತ್ತು.

ಜನವರಿ 29 ರಂದು ಕೋಲ್ಕತ್ತಾದಲ್ಲಿ ಚಿನ್ನದ ದರ

ಇಂದು ಕೋಲ್ಕತ್ತಾದಲ್ಲಿ ಚಿನ್ನದ ದರ 10 ಗ್ರಾಂಗೆ 80,450 ರೂ. ಇದೆ. ನಿನ್ನೆ ಈ ಹೊಳೆಯುವ ಲೋಹ 10 ಗ್ರಾಂಗೆ 79,770 ರೂ. ಗೆ ಮಾರಾಟವಾಗುತ್ತಿತ್ತು ಮತ್ತು ಕಳೆದ ವಾರ 10 ಗ್ರಾಂಗೆ 79,690 ರೂ. ಇತ್ತು. ಇನ್ನೂ ಇಂದು ಕೋಲ್ಕತ್ತಾದಲ್ಲಿ ಬೆಳ್ಳಿ ದರ ಕೆಜಿಗೆ 91,030 ರೂ. ಇದೆ. ಜನವರಿ 28 ರಂದು ಬೆಳ್ಳಿ ಬೆಲೆ ಕೆಜಿಗೆ 90,240 ರೂ. ಇತ್ತು. ಕಳೆದ ವಾರ ಜನವರಿ 22 ರಂದು ಈ ಲೋಹ 91,970 ರೂ.ಗೆ ಮಾರಾಟವಾಗಿತ್ತು.

ಜನವರಿ 29 ರಂದು ಚೆನ್ನೈನಲ್ಲಿ ಚಿನ್ನದ ದರ

ಜನವರಿ 29 ರಂದು ಚೆನ್ನೈನಲ್ಲಿ ಚಿನ್ನದ ದರ 10 ಗ್ರಾಂಗೆ 80,790 ಇದೆ. ಜನವರಿ 28 ರಂದು ಇದು 10 ಗ್ರಾಂಗೆ 80,110 ರೂ.ಗೆ ಮಾರಾಟವಾಗಿತ್ತು. ಒಂದು ವಾರದ ಹಿಂದೆ ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂ 80,030 ಆಗಿತ್ತು. ಇಂದು ಚೆನ್ನೈನಲ್ಲಿ ಬೆಳ್ಳಿ ದರ ಕೆಜಿಗೆ 91,420 ರೂ ಇದೆ. ಜನವರಿ 28 ರಂದು ಬೆಳ್ಳಿಯ ಬೆಲೆ ಕೆಜಿಗೆ 90,630 ಇತ್ತು. ಒಂದು ವಾರದ ಹಿಂದೆ ಗ್ರಾಹಕರಿಗೆ 92,360 ಬೆಲೆಗೆ ಲಭ್ಯವಿತ್ತು.

ಜನವರಿ 29 ರಂದು ಬೆಂಗಳೂರಿನಲ್ಲಿ ಚಿನ್ನದ ದರ

ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 76,250 ರೂ. ಇದ್ದರೆ. ಕಳೆದ ದಿನ ಈ ಬೆಲೆ 76,550 ರೂ.ಇತ್ತು. ಇನ್ನೂ 24 ಕ್ಯಾರೆಟ್ 10 ಗ್ರಾಮ್ ಚಿನ್ನದ ಬೆಲೆ 80,060 ರೂ. ಇದ್ದರೆ, ಕಳೆದ ದಿನ 80,380 ರೂಪಾಯಿ ಇತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+