Gold Silver Price on 17th December: ಕ್ರಿಸ್ಮಸ್, ಹೊಸ ವರ್ಷಕ್ಕೆ ಚಿನ್ನ ಅಗ್ಗ- ಗ್ರಾಹಕರಿಗೆ ಖುಷಿ ತಂದ ಬಂಗಾರ
ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ಕಳೆದ ಮೂರು ದಿನ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿದೆ. ನವೆಂಬರ್ ಆರಂಭದಲ್ಲಿ ಚಿನ್ನದ ದರ ಗಗನಮುಖಿಯಾಗಿತ್ತು. ಬಳಿಕ ಚಿನ್ನದ ಬೆಲೆ ಇಳಿಮುಖವಾಗಿತ್ತು. ಇದೀಗ ಡಿಸೆಂಬರ್‌ನಲ್ಲೂ ಅದೇ ಆಟ ಮುಂದುವರೆದಿದೆ.
ಹೌದು.. ಕಳೆದ ಮೂರು ದಿನದಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಚಿನ್ನಾಭರಣ ಕೊಳ್ಳುವ ಗ್ರಾಹಕರಿಗೆ ನೆಮ್ಮದಿ ತಂದಿದೆ. ಇಂದು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 10 ರೂಪಾಯಿ ಇಳಿಕೆ ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 11 ರೂಪಾಯಿ ಇಳಿಕೆ ಆಗಿದೆ.

ಹಾಗಾದರೆ ಮಂಗಳವಾರ ಡಿಸೆಂಬರ್ 17 ಚಿನ್ನದ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ನೊಡುವುದಾದರೆ, 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,150 ರುಪಾಯಿ ಇದ್ದರೆ, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,800 ರುಪಾಯಿ ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ 71,500 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಕಡಿಮೆಯಾಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಇಂದು ಹೇಗಿದೆ ಎಂದು ತಿಳಿಯೋಣ.
ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಡಿಸೆಂಬರ್ 17
ಇಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,150 ಇದೆ. ಈ ಬೆಲೆ ಕಳೆದ ದಿನ 7,140 ಆಗಿತ್ತು. ಅಂದರೆ 10 ರೂಪಾಯಿ ಇಳಿಕೆಯಾಗಿದೆ.
8 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 57,200 ಇದೆ. ಈ ಬೆಳೆ ಕಳೆದ ದಿನ 57,120 ಆಗಿತ್ತು. ಇಂದು 80 ರೂಪಾಯಿ ಕಡಿಮೆಯಾಗಿದೆ.
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 71,500 ಆಗಿತ್ತು. ಈ ಬೆಲೆ ಕಳೆದ ದಿನ 71,400 ಆಗಿತ್ತು. ಇಂದು 100 ರೂಪಾಯಿ ಕಡಿಮೆಯಾಗಿದೆ.
100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 7,15,000 ಇದೆ. ಈ ಬೆಲೆ ಕಳೆದ ದಿನ 7,14,000 ಆಗಿತ್ತು. ಇಂದು 1000 ರೂಪಾಯಿ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 92.40 ರೂಪಾಯಿ ಮತ್ತು ಪ್ರತಿ ಕಿಲೋಗ್ರಾಂಗೆ 92,400 ರೂಪಾಯಿ ಇದೆ.

ಕಳೆದ ದಿನದ ಹೋಲಿಕೆ
ಡಿಸೆಂಬರ್ 15, 2024 ರಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,140 ರೂಪಾಯಿ ಇತ್ತು. ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಚಿನ್ನದ ಬೆಲೆ 7,789 ರೂಪಾಯಿ ಇತ್ತು.
ಡಿಸೆಂಬರ್ 16, 2024 ರಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,140 ರೂಪಾಯಿ ಇತ್ತು. ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಚಿನ್ನದ ಬೆಲೆ 7,789 ರೂಪಾಯಿ ಇತ್ತು.
ಡಿಸೆಂಬರ್ 17, 2024 ರಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,150 ರೂಪಾಯಿ ಆಗಿದೆ. ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಚಿನ್ನದ ಬೆಲೆ 7,800 ರೂಪಾಯಿ ಆಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
*ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 78150 ರೂ ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71650 ರೂ ಇದೆ.
*ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 78000 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71500 ರೂ.
*ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 78000 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71500 ರೂ.
*ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 78150 ರೂ.ಗಳಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71650 ರೂ.
*ಲಕ್ನೋದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 78150 ರೂ ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 71650 ರೂ ಇದೆ.












Click it and Unblock the Notifications