Gold Price: ಕೊನೆಗೂ ಕುಸಿತ ಕಂಡ ಚಿನ್ನದ ಬೆಲೆ! ಇಂದು ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ?
ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಸೋಮವಾರ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. 80,000 ಸಾವಿರ ರೂಪಾಯಿ ಮುಟ್ಟುವ ಸನಿಹದಲ್ಲಿರುವ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ, ಆಭರಣ ಪ್ರಿಯರ ಜೇಬಿಗೆ ಹೊರೆಯಾಗಿದೆ. ಜಾಗತಿಕ ಮಟ್ಟದಲ್ಲಿ ಹಳದಿ ಲೋಹಕ್ಕೆ ಬೇಡಿಕೆ ಹೆಚ್ಚುತ್ತಿರುವುದು, ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆಗೆ ಆಸಕ್ತಿ ತೋರಿಸುತ್ತಿರುವುದು ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಲು ಕಾರಣವಾಗಿದೆ.
ಸೋಮವಾರ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಕೇವಲ 5 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 5 ರೂಪಾಯಿಗಳಷ್ಟು ಕಡಿಮೆಯಾಗಿದೆ. ವಾರದ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಬೆಲೆ ಕಡಿಮೆಯಾಗಿರುವುದು. ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗುವ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಭಾನುವಾರ 7120 ರೂಪಾಯಿ ಇದ್ದ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 7115 ರೂಪಾಯಿಗೆ ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆ 50 ರೂಪಾಯಿ ಕಡಿಮೆಯಾಗಿದೆ. ಭಾನುವಾರ 7,767 ರೂಪಾಯಿ ಇದ್ದ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ, 7,762 ರೂಪಾಯಿಗೆ ಕಡಿಮೆಯಾಗಿದೆ.
ಬೆಳ್ಳಿ ಬೆಲೆ ಎಷ್ಟಿದೆ?
ಇನ್ನು ಬೆಳ್ಳಿ ಬೆಲೆ ಸತತ ಕುಸಿತ ಕಂಡ ನಂತರ ಸ್ಥಿರತೆ ಕಾಯ್ದುಕೊಂಡಿದೆ. ಭಾನುವಾರ 1 ಕೆಜಿ ಬೆಳ್ಳಿ ಬೆಲೆ 93,500 ರೂಪಾಯಿ ಇದ್ದರೆ ಇಂದು ಕೂಡ ಅದೇ ಬೆಲೆಯಲ್ಲಿ ಧಾರಣೆಯಾಗಿದೆ. ಅಕ್ಟೋಬರ್ 12ರಂದು 84,900 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಅಕ್ಟೋಬರ್ 13ರಂದು 8600 ರೂಪಾಯಿಗಳ ಭರ್ಜರಿ ಏರಿಕೆ ಕಂಡಿದ್ದು, 93,500 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ?
ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆಯಾಗುತ್ತಿದೆ, ಇಂತಹ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ ಎನ್ನುವ ಅನುಮಾನ ಕಾಡುತ್ತದೆ. ಅಕಸ್ಮಾತ್ ಚಿನ್ನದ ಬೆಲೆ ಕುಸಿದರೆ ಎನ್ನುವ ಯೋಚನೆ ಕೂಡ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ವಿಶ್ಲೇಷಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದು ಉತ್ತಮ ಸಮಯ ಎಂದಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟು, ಯುದ್ಧದ ಭೀತಿಯಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿದೆ, ಮುಂದಿನ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡರು, ಭವಿಷ್ಯದಲ್ಲಿ ಚಿನ್ನದ ದರ ಏರಿಕೆಯಾಗುತ್ತಲೇ ಹೋಗುತ್ತದೆ ಎಂದಿದ್ದಾರೆ.
2025ರ ದೀಪಾವಳಿ ವೇಳೆಗೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 80,000 ದಾಟಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ ಈಗ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ರೀತಿಯನ್ನು ಗಮನಿಸಿದರೆ ಅಂದುಕೊಂಡಿದ್ದಕ್ಕಿಂತ ಮೊದಲೇ ಚಿನ್ನದ ಬೆಲೆ ಗ್ರಾಂಗೆ 8000 ದಾಟುವ ಸಾಧ್ಯತೆ ಇದೆ.












Click it and Unblock the Notifications