Gold Rate on May 22: ಚಿನ್ನದ ಬೆಲೆಯಲ್ಲಿ ಅಚ್ಚರಿಯ ಬದಲಾವಣೆ; ಎಷ್ಟಿದೆ ಇಂದಿನ ಚಿನ್ನ & ಬೆಳ್ಳಿ ಬೆಲೆ ?!

Gold Rate on May 22: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು ಸತತ ಮೂರನೇ ದಿನವೂ ಚಿನ್ನದ ಬೆಲೆ ಏರಿಕೆಯಾದಂತೆ ಆಗಿದೆ. ಕಳೆದ ಒಂದು ವಾರದಿಂದಲೂ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದೀಗ ಮತ್ತೆ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ಸಮೀಪಕ್ಕೆ ಬಂದಿದೆ. ಚಿನ್ನದ ಬೆಲೆಯ ಜೊತೆ ಜೊತೆಗೆ ಬೆಳ್ಳಿಯ ಬೆಲೆ ಸಹ ಏರಿಕೆಯಾಗುತ್ತಿದೆ. ಈಗ ಮದುವೆ ಹಾಗೂ ವಿಶೇಷ ಕಾರ್ಯಕ್ರಮಗಳ ಸೀಸನ್ ಇದ್ದು ಇದೇ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆಯಾಗಿರುವುದು ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರಿಗೆ ಸಂಕಷ್ಟ ಎದುರಾಗಿದೆ. ಮೇ 22ರ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಹಾಗೂ ನೆನ್ನೆಗಿಂತ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು ವ್ಯತ್ಯಾಸವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬಂಗಾರದ ಬೆಲೆಯು ಮತ್ತೆ ಕಳೆದ ಎರಡು ಮೂರು ತಿಂಗಳುಗಳ ಹಿಂದಿದ್ದ ಬೆಲೆಗೆ ಮರಳುತ್ತಿದ್ದು. ಚಿನ್ನ ಪ್ರಿಯರು ಹಾಗೂ ಬಂಗಾರ ಖರೀದಿ ಮಾಡಬೇಕು ಎಂದು ಕೊಂಡಿರುವವರಿಗೆ ಶಾಕ್‌ ಎದುರಾಗಿದೆ. ಕೆಲವೇ ದಿನಗಳ ಹಿಂದೆ 90,000 ಸಾವಿರದ ಸಮೀಪದಲ್ಲಿದ್ದ ಚಿನ್ನದ ಬೆಲೆಯು ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮೊತ್ತದಲ್ಲಿ ಹೆಚ್ಚಳವಾಗುತ್ತಿದ್ದು. ಮತ್ತೆ ಎಲ್ಲಿ 1 ಲಕ್ಷ ರೂಪಾಯಿಗಿಂತ ಹೆಚ್ಚಾಗಲಿದೆಯೋ ಎನ್ನುವ ಆತಂಕ ಬಂಗಾರ ಪ್ರಿಯರಲ್ಲಿ ಎದುರಾಗಿದೆ. ಮೇ 22ರ ಚಿನ್ನ ಮತ್ತು ಬೆಳ್ಳಿ ಬೆಲೆ ಏನಿದೆ ಅಂತ ನೋಡೋಣ.

Gold Rate on May 22 gold and silver Price on May 22 in Bengaluru amp amp karnataka

18 ಕ್ಯಾರೆಟ್‌ ಚಿನ್ನದ ಬೆಲೆ: ಮೇ 22ರ 18 ಕ್ಯಾರೆಟ್‌ ಚಿನ್ನದ ಬೆಲೆಯು 1 ಗ್ರಾಂಗೆ 7,334 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 73,440 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ ಚಿನ್ನದ ಬೆಲೆಯು ಬರೋಬ್ಬರಿ 370 ರೂಪಾಯಿ ಹೆಚ್ಚಳವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಬೆಲೆ ಭಾರೀ ಹೆಚ್ಚಳವಾಗಿದೆ.

22 ಕ್ಯಾರೆಟ್‌ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ ಚಿನ್ನದ ಬೆಲೆಯು ಮೇ 22ರಂದು ಪ್ರತಿ ಗ್ರಾಂಗೆ 8,975 ರೂಪಾಯಿ ಆಗಿದೆ. 10 ಗ್ರಾಂಗೆ 89,750 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ, 22 ಕ್ಯಾರೆಟ್‌ ಚಿನ್ನದ 10 ಗ್ರಾಂನ ಬೆಲೆಯು 450 ರೂಪಾಯಿ ಜಾಸ್ತಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ: ಮೇ 22ರಂದು 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 9,791 ರೂಪಾಯಿ ಇತ್ತು. 10 ಗ್ರಾಂನ ಬೆಲೆಯು 97,910 ರೂಪಾಯಿ ಇದೆ. ನೆನ್ನೆಗೆ ಹೋಲಿಕೆ ಮಾಡಿದರೆ 490 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ ಎಷ್ಟಿದೆ ?

ಚಿನ್ನದ ಬೆಲೆಯಲ್ಲಿ ಮಾತ್ರವಲ್ಲ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 101 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 1 ಲಕ್ಷದ 1 ರೂಪಾಯಿ ಆಗಿದೆ. ಸಾಮಾನ್ಯವಾಗಿ ಬೆಳ್ಳಿಯ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬರುತ್ತಿರಲಿಲ್ಲ. ಇದೀಗ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+