Gold Rate: ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ!
ಕೇಂದ್ರ ಸರ್ಕಾರ ಶನಿವಾರ 2025-2026ನೇ ಸಾಲಿನ ಬಜೆಟ್ ಮಂಡನೆ ಮಾಡಿದೆ. ತೆರಿಗೆದಾರರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ವಾರ್ಷಿಕ 12 ಲಕ್ಷ ರೂಪಾಯಿ ಆದಾಯ ಹೊಂದಿರುವವರೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಭಾರತೀಯರು ಇಷ್ಟಪಡುವ ಚಿನ್ನದ ಬೆಲೆ ಕಡಿಮೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇತ್ತಾದರೂ ಅದು ಸುಳ್ಳಾಗಿದ್ದು ಬಜೆಟ್ ದಿನ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಮೂಲಕ ಶಾಕ್ ಕೊಟ್ಟಿದೆ.
ಶನಿವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 84,490 ರೂಪಾಯಿ ತಲುಪಿದ್ದು ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಶುಕ್ರವಾರ 84,490 ರೂಪಾಯಿ ಇದ್ದ 10 ಗ್ರಾಂ ಶುದ್ಧ ಚಿನ್ನದ ಬೆಲೆ ಶನಿವಾರ 160 ರೂಪಾಯಿ ಏರಿಕೆ ಕಂಡಿದ್ದು 84,490 ರೂಪಾಯಿಯಲ್ಲಿ ವಹಿವಾಟು ನಡೆಸಿತು.

ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ದರ ತಲುಪಿದರೆ, ಬೆಳ್ಳಿಯ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ ಶುಕ್ರವಾರ ಒಂದು ಕೆಜಿ ಬೆಳ್ಳಿಯ ಬೆಲೆ 1000 ರೂಪಾಯಿ ಏರಿಕೆಯ ಕಂಡು 99500 ರೂಪಾಯಿಯಲ್ಲಿ ವಹಿವಾಟು ನಡೆಸಿದ್ದು, ಶನಿವಾರ ಕೂಡ ಅದೇ ದರ ಕಾಯ್ದುಕೊಂಡಿದೆ.
ಚಿನ್ನದ ಬೆಲೆ ಎಷ್ಟಿದೆ?
22 ಕ್ಯಾರೆಟ್ (ಆಭರಣ ಚಿನ್ನ)ದ ಬೆಲೆ ಪ್ರತಿ ಗ್ರಾಂಗೆ 15 ರೂಪಾಯಿ ಏರಿಕೆ ಕಂಡಿದೆ. ಶುಕ್ರವಾರ 7730 ರೂಪಾಯಿ ಇದ್ದ ಒಂದು ಗ್ರಾಂ ಆಭರಣ ಚಿನ್ನದ ಬೆಲೆ 7745 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಆಭರಣದ ಚಿನ್ನದ ಬೆಲೆ 77300 ರೂಪಾಯಿಗಳಿಂದ 77450 ರೂಪಾಯಿಗೆ ಹೆಚ್ಚಾಗಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ 16 ರೂಪಾಯಿ ಏರಿಕೆ ಕಂಡಿದೆ. ಶುಕ್ರವಾರ 8433 ರೂಪಾಯಿ ಇದ್ದ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಶನಿವಾರ 8449 ರೂಪಾಯಿಗೆ ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 12 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 6325 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಶನಿವಾರ 6337 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರ 63,250 ಇದ್ದರೆ ಶನಿವಾರ 120 ರೂಪಾಯಿ ಏರಿಕೆ ಕಂಡು 63,370 ರೂಪಾಯಿಯಲ್ಲಿ ವಹಿವಾಟು ನಡೆಸಿದೆ.












Click it and Unblock the Notifications