Gold Rate: ಬೆಲೆ ಏರಿಕೆಗಿಲ್ಲ ಬ್ರೇಕ್; ₹ 80,000 ಸನಿಹಕ್ಕೆ ಬಂದೇಬಿಡ್ತು ಬಂಗಾರದ ಬೆಲೆ!
ಚಿನ್ನದ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಬಂಗಾರದ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿಲ್ಲ, ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 80,000 ರೂಪಾಯಿ ಸನಿಹಕ್ಕೆ ಬಂದು ನಿಂತಿದೆ. ಶನಿವಾರ ಒಂದೇ ದಿನ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 4,400 ರೂಪಾಯಿ ಏರಿಕೆಯಾಗಿದೆ.
ನಾಲ್ಕು ದಿನಗಳಲ್ಲಿ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 202 ರೂಪಾಯಿ ಏರಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ. ಶುಕ್ರವಾರ ಒಂದೇ ದಿನ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 87 ರೂಪಾಯಿ ಏರಿಕೆಯಾಗುವ ಮೂಲಕ ಶಾಕ್ ಕೊಟ್ಟಿತ್ತು. ಶನಿವಾರ ಕೂಡ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 44 ರೂಪಾಯಿ ಏರಿಕೆಯಾಗಿದೆ.

ಶುಕ್ರವಾರ 7,898 ರೂಪಾಯಿ 1 ಗ್ರಾಂ ಇದ್ದ 24 ಕ್ಯಾರಟ್ ಚಿನ್ನದ ಬೆಲೆ ಶನಿವಾರ 7,942 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ ಶುಕ್ರವಾರ 78,980 ರೂಪಾಯಿ ಇದ್ದರೆ ಶನಿವಾರ 79,420 ರೂಪಾಯಿಗೆ ಏರಿಕೆಯಾಗಿದೆ. ಇದು ಭಾರತದಲ್ಲಿ ಚಿನ್ನದ ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ. ಇನ್ನು 580 ರೂಪಾಯಿ ಏರಿಕೆಯಾದರೆ 10 ಗ್ರಾಂ ಶುದ್ಧ ಚಿನ್ನದ ಬೆಲೆ 80,000 ರೂಪಾಯಿ ಗಡಿ ದಾಟಲಿದೆ.
ಆಭರಣ (22 ಕ್ಯಾರಟ್) ಚಿನ್ನದ ಬೆಲೆ ಕೂಡ ಸಾರ್ವಕಾಲಿಕ ಗರಿಷ್ಠ ದರವನ್ನು ತಲುಪಿದೆ. ಶುಕ್ರವಾರ 7,240 ರೂಪಾಯಿ ಇದ್ದ ಇಂದು ಗ್ರಾಂ ಚಿನ್ನದ ಬೆಲೆ ಶನಿವಾರ 40 ರೂಪಾಯಿ ಹೆಚ್ಚಾಗಿದ್ದ 7,280 ರೂಪಾಯಿಗೆ ತಲುಪಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆ 72,400 ರೂಪಾಯಿಗಳಿಂದ 72,800 ರೂಪಾಯಿಗೆ ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ ಕೂಡ ಭರ್ಜರಿ ಏರಿಕೆ ಕಂಡಿದೆ. ಶುಕ್ರವಾರ 5,924 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಶನಿವಾರ 5,957 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 330 ರೂಪಾಯಿ ಏರಿಕೆಯಾಗಿದ್ದು, 59,240 ರೂಪಾಯಿಗಳಿಂದ 59,570 ರೂಪಾಯಿಗೆ ಏರಿಕೆಯಾಗಿದೆ.
ಸ್ಥಿರತೆ ಕಾಯ್ದುಕೊಂಡ ಬೆಳ್ಳಿ ಬೆಲೆ
ಒಂದು ಕಡೆ ಚಿನ್ನದ ಬೆಲೆಯಲ್ಲಿ ಪ್ರತಿದಿನ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಅಕ್ಟೋಬರ್ 18 ರಂದು ಒಂದೇ ದಿನ ಒಂದು ಬೆಳ್ಳಿ ಬೆಲೆಯಲ್ಲಿ 8000 ರೂಪಾಯಿ ಕುಸಿತ ಕಂಡಿತ್ತು. 94000 ರೂಪಾಯಿ ಇದ್ದ ಬೆಳ್ಳಿ ಧಾರಣೆ ಶುಕ್ರವಾರ 8,000 ರೂಪಾಯಿ ಕುಸಿದು 86,000 ರೂಪಾಯಿಗೆ ತಲುಪಿತ್ತು. ಶನಿವಾರ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.












Click it and Unblock the Notifications