Gold Rate: ಹಬ್ಬದ ದಿನವೂ ಆಭರಣ ಪ್ರಿಯರಿಗೆ ಶಾಕ್; ಚಿನ್ನ & ಬೆಳ್ಳಿ ಬೆಲೆ ಎಷ್ಟಾಯ್ತು?
ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದ್ದು ಆಭರಣ ಪ್ರಿಯರ ಜೇಬಿಗೆ ಹೊರೆಯಾಗುತ್ತಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಚಿನ್ನ ಖರೀದಿ ಮಾಡುವ ಉತ್ಸಾಹದಲ್ಲಿದ್ದವರಿಗೆ ಬೆಲೆ ಏರಿಕೆ ಶಾಕ್ ಸಿಕ್ಕಿದೆ. ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡಿದ್ದು ಸಮಾಧಾನ ತರಿಸಿದೆ.
ಶನಿವಾರ 22 ಕ್ಯಾರೆಟ್ ಒಂದು ಗ್ರಾಮ ಚಿನ್ನದ ಬೆಲೆ 25 ರೂಪಾಯಿ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 2,500 ರೂಪಾಯಿ ಏರಿಕೆ ಕಂಡಿದೆ. ಶುಕ್ರವಾರ 7,095 ರೂಪಾಯಿ ಇದ್ದ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ಶನಿವಾರ 7,120 ರೂಪಾಯಿಗೆ ಏರಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ ಒಂದೇ ದಿನ 27 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 7740 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಶನಿವಾರ 7,767 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 77,400 ಇದ್ದ 10 ಗ್ರಾಂ ಶುದ್ಧ ಚಿನ್ನದ ಬೆಲೆ ಶನಿವಾರ 77,670 ರೂಪಾಯಿಗೆ ಏರಿಕೆಯಾಗಿದೆ.
80,000 ತಲುಪುತ್ತಾ ಚಿನ್ನ
ಸದ್ಯ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 77,670 ರೂಪಾಯಿ ಆಗಿದ್ದು, 80,000 ತಲುಪುವ ನಿರೀಕ್ಷೆ ಮಾಡಲಾಗಿದೆ. ಇಸ್ರೇಲ್, ಇರಾನ್ ನಡುವಿನ ಸಂಘರ್ಷಗಳು, ಕಚ್ಛಾ ತೈಲ ಬೆಲೆ ಏರಿಕೆ, ಮಾರುಕಟ್ಟೆ ಕುಸಿತದಂತಹ ಅಂಶಗಳು, ಹೂಡಿಕೆದಾರರಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವಂತೆ ಮಾಡಿದ್ದು, ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ದೀರ್ಘ ಕಾಲದಲ್ಲಿ ಚಿನ್ನದ ಬೆಲೆ ಏರಿಕೆಯಾಗಲೇಬೇಕು. ಮುಂದಿನ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಲೆ ಕುಸಿತವಾದರೂ, ಹೂಡಿಕೆದಾರರ ಚಿನ್ನದ ಮೇಲೆ ನಿಶ್ಚಿಂತೆಯಿಂದ ಹೂಡಿಕೆ ಮಾಡಬಹುದು ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ.
ಬೆಳ್ಳಿ ಬೆಲೆಯಲ್ಲಿ ಕುಸಿತ
ಒಂದು ಕಡೆ ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗಿದ್ದರೆ ಮತ್ತೊಂದು ಕಡೆ ಬೆಳ್ಳಿ ಬೆಲೆ ಕುಸಿತ ಕಂಡಿದೆ. 92,000 ರುಪಾಯಿ ತಲುಪಿದ್ದ ಒಂದು ಕೆಜಿ ಬೆಳ್ಳಿ ಹಲವು ದಿನಗಳಿಂದ ಕುಸಿತ ಕಂಡಿದ್ದು ಸದ್ಯ 84,900 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿಗಳ ಅಲ್ಪ ಕುಸಿತವಾಗಿದೆ.












Click it and Unblock the Notifications