Gold Rate: ಚಿನ್ನದ ದರದಲ್ಲಿ 2,700 ರೂಪಾಯಿ ಇಳಿಕೆ- ಇಲ್ಲಿದೆ ಅಂಕಿಅಂಶಗಳ ವಿವರ
Gold Rate: ಇಂದು (ಜುಲೈ 23) ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ಚಿನ್ನದ ದರ ಇಳಿಕೆಯಾಗಿದೆ. ಹಾಗಾದರೆ ಎಷ್ಟು ಭಾರೀ ಇಳಿಕೆಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮಂಗಳವಾರ (ಜುಲೈ 23) ಒಂದೇ ದಿನ 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 2,700 ರೂಪಾಯಿ ಕಡಿಮೆಯಾಗಿದೆ. ಇನ್ನು ನಿನ್ನೆ (ಜುಲೈ 22) 7,38,500 ರೂಪಾಯಿ ಇದ್ದ 100 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ 2,700 ರೂಪಾಯಿ ಕುಸಿತ ಕಂಡಿದ್ದು, 7,35,800 ರೂಪಾಯಿಗೆ ಮಾರಾಟವಾಗುತ್ತಿದೆ. ಮೂಲಕ ಪ್ರತಿ ಗ್ರಾಂ ಚಿನ್ನದ ದರ 27 ರೂಪಾಯಿ ಕಡಿಮೆಯಾಗಿದೆ.

ಸೋಮವಾರ (ಜುಲೈ 22) 6,77,000 ಇದ್ದ 100 ಗ್ರಾಂ ಚಿನ್ನದ (22 ಕ್ಯಾರಟ್) ದರ ಇಂದು 2,500 ರೂಪಾಯಿ ಕುಸಿತ ಕಂಡಿದ್ದು, 6,74,500 ರೂಪಾಯಿಗೆ ಮಾರಾಟ ಆಗುತ್ತಿದೆ. ಇನ್ನು ಪ್ರತಿ ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ 25 ರೂಪಾಯಿ ಕಡಿಮೆಯಾಗಿದೆ.
ಮತ್ತೊಂದೆಡೆ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇಕಡ 6ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಬೆಳ್ಳಿ ದರ (ಕೆ.ಜಿ.)
* ಬೆಂಗಳೂರು - 91,100 ರೂಪಾಯಿ
* ಚೆನ್ನೈ - 91,100 ರೂಪಾಯಿ
* ಮುಂಬೈ - 91,100 ರೂಪಾಯಿ
* ಕೋಲ್ಕತ್ತಾ - 91,100 ರೂಪಾಯಿ
* ನವದೆಹಲಿ - 91,100 ರೂಪಾಯಿ
* ಹೈದರಾಬಾದ್ - 91,010 ರೂಪಾಯಿ












Click it and Unblock the Notifications