Gold Rate today: ಈ ಕಾರಣಕ್ಕೇ ಚಿನ್ನದ ದರ ₹50,000 ಇಳಿಯುತ್ತೆ! ಖರೀದಿಗೆ ಆತುರ ಬೇಡ: ನಟಿ ಸಲಹೆ
Gold Price Today: ಬೆಂಗಳೂರು, ಕರ್ನಾಟಕ ಸೇರಿದಂತೆ ಭಾರತದಲ್ಲಿ ಚಿನ್ನದ ದರ ತಿಂಗಳಿಂದ ತಿಂಗಳಿಗೆ ಏರಿಕೆ ಆಗುತ್ತಲೇ ಬಂದಿದೆ. 2022 ರಲ್ಲಿ 50,000 ರೂಪಾಯಿ ಆಸು ಪಾಸಿನಲ್ಲಿದ್ದ 10 ಗ್ರಾಂ ಚಿನ್ನದ ದರ ಸದ್ಯ (2025ರಲ್ಲಿ) 91,000 ರೂಪಾಯಿ ದಾಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಚಿನ್ನದ ಮೇಲೆ ಬಂಡವಾಳ ಹೂಡಿಕೆ ಮಾಡುವವರು, ಚಿನ್ನ ಖರೀದಿಸುವವರು ಆತುರ ಪಡಬೇಡಿ. ಏಕೆಂದರೆ ಚಿನ್ನದ ಬೆಲೆ ಅಪಾರ ಪ್ರಮಾಣದಲ್ಲಿ ಇಳಿಕೆ ಆಗಲಿದೆ ಎಂದು ನಟಿ ಕಾವ್ಯಾ ಶಾಸ್ತ್ರಿ ಅವರು ಸಲಹೆ ನೀಡಿದ್ದಾರೆ.
ಗ್ರಹಣ, ಯುಪಿಐ, ಅಮವಾಸ್ಯೆ, ಗಿಬಿಲಿ ಇಮೇಜ್, ಮೊಸಳೆ ಕಣ್ಣೀರು, ಹೆಣ್ಣಿನ ಪ್ರೀತಿಗಿರುವ ಶಕ್ತಿ ಸೇರಿದಂತೆ ಕೆಲವು ವಿಷಯಗಳು, ಆಯಾ ಸನ್ನಿವೇಶದ ಸಂಗತಿಗಳ ಕುರಿತು ನಟಿ ಕಾವ್ಯಾ ಶಾಸ್ತ್ರಿ ಅವರು ವಿಡಿಯೋ ಮಾಡಿ ಜನರಿಗೆ ಮಾಹಿತಿ ನೀಡುತ್ತಿರುತ್ತಾರೆ. ಇದೀಗ ನಟಿ ಚಿನ್ನದ ಬೆಲೆ ಬರೋಬ್ಬರಿ 50,000 ರೂಪಾಯಿಗೆ ಕುಸಿಯುವ ಸಂಗತಿಯನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ. ದುಬಾರಿ ಬೆಲೆಗೆ ಚಿನ್ನ ಖರೀದಿಸುವ ಮುನ್ನ ಆತುರ ಪಡಬೇಡಿ ಎಂದು ಸಲಹೆ ನೀಡಿದ್ದಾರೆ. ಅವರ ವಿಡಿಯೋ ಹೆಚ್ಚು ಶೇರ್ ಆಗುತ್ತಿದೆ.

ಚಿನ್ನದ ದರ ಕುಸಿಯಲು ಕಾರಣವೇನು?
ದೇಶದಲ್ಲಿ ಚಿನ್ನದ ಬೆಲೆ 50 ಸಾವಿರ ರೂ. ಆಸುಪಾಸಿನಿಂದ ಇಂದು 90 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ 50,000 ರೂ.ನಷ್ಟು ಇಳಿಕೆ ಆಗಲಿದೆ. ಆದ್ದರಿಂದ ಸಾರ್ವಜನಿಕರು ಚಿನ್ನ ಖರೀದಿಸುವವರಿದ್ದ ಕೊಂಚ ಕಾಯುವುದು ಒಳ್ಳೆಯದು.
ಇಷ್ಟು ಪ್ರಮಾಣದಲ್ಲಿ ಬಂಗಾರದ ಬೆಲೆ ಇಳಿಯುತ್ತೆ ಎಂದರೆ ನಂಬಲಸಾಧ್ಯ, ಆದರೆ ನಂಬಲೇಬೇಕು. ದರ ಕುಸಿತಕ್ಕೆ ಕಾರಣ ತಿಳಿಸಿರುವ ನಟಿ, ಅಮರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೈಗೊಂಡ ಆ ಒಂದು ನಿರ್ಧಾರಿಂದ ಭವಿಷ್ಯದಲ್ಲಿ ಚಿನ್ನ ಮೌಲ್ಯ ಇಳಿಕೆ ಆಗಲಿದೆ ಎನ್ನಲಾಗುತ್ತಿದೆ.

ಟನ್‌ಗಟ್ಟಲೇ ಚಿನ್ನ ಮಾರಾಟ: ಬೆಲೆ ಇಳಿಕೆ! ಹೂಡಿಕೆದಾರರ ಕಥೆ..
ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ಸೇರಿ ಅನೇಕ ರಾಷ್ಟ್ರಗಳು ಪೇಪರ್ ಕರೆನ್ಸಿಗಿಂತ ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳಿತೆಂದು ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ಚಿನ್ನ ಹೂಡಿಕೆಗೆ ನಂಬಿಕೆಗೆ ಅರ್ಹ ಎಂದು ಭಾವಿಸಿದ್ದಾರೆ. ಏಕೆಂದರೆ ಚಿನ್ನದ ದರ ಹೆಚ್ಚಾದಂತೆ ಹೂಡಿಕೆಗೆ ಒಳ್ಳೆಯ ರಿಟರ್ನ್ ಸಿಗಲಿದೆ. ಅವರ ಹಣ ಸೇಫ್ ಎಂಬ ಲೆಕ್ಕಾಚಾರ ಅವರದ್ದು. ಆದರೆ ಯುಎಸ್ ತನ್ನ ಕಡೆ ಇರುವ ಟನ್‌ಗಟ್ಟಲೇ ಚಿನ್ನ ಮಾರಾಟ ಮಾಡುವುದಾಗಿ ಘೋಷಿಸಿದೆ. ಹೀಗಾಗಿ ಚಿನ್ನದ ದರ 50000 ರೂಪಾಯಿ ಕುಸಿಯುವ ಸಾಧ್ಯತೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಶ್ವದಲ್ಲೇ ಅತ್ಯಧಿಕ ಚಿನ್ನದ ರಿಸರ್ವ್ US ನಲ್ಲಿದೆ!
ಮೂಲಗಳ ಪ್ರಕಾರ, ವಿಶ್ವದಲ್ಲೇ ಅತೀ ಹೆಚ್ಚು ಚಿನ್ನದ ರಿಸರ್ವ್ ಅಂದರೆ 8300 ಲಕ್ಷ ಮೆಟ್ರಿಕ್ ಟನ್ ಚಿನ್ನ ಕೇವಲ ಅಮೆರಿಕ ದೇಶದಲ್ಲಿದೆ. ಅಮೆರಿಕಾ ಬಿಟ್ಟು ಬೇರೆಲ್ಲೂ ಇಷ್ಟು ಪ್ರಮಾಣದ ಚಿನ್ನ ಇಲ್ಲ ಎನ್ನಲಾಗುತ್ತಿದೆ. ಸದ್ಯ ಚಿನ್ನದ ದರ ಗಗನ ಮುಟ್ಟಿದೆ. ಹೀಗಿರುವ ಡೊನಾಲ್ಡ್ ಟ್ರಂಪ್ ತನ್ನ ಎಲ್ಲ ರಿಸರ್ವ್ ಚಿನ್ನ ಮಾರಾಟ ಮಾಡುವುದಾಗಿ ಘೊಷಿಸಿದ್ದಾರೆ. ಅದರಿಂದ ಬಿಟ್ ಕಾಯಿನ್ ಸ್ಟಾಟರ್ಜಿಕ್ ರಿಸರ್ವ್ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಈಗಿನ ಚಿನ್ನದಂತೆ ಬಿಟ್ ಕಾಯಿನ್ಸ್ ಮತ್ತು ಕ್ರಿಪ್ಟೋ ಕರೆನ್ಸಿಗಳು ಭವಿಷ್ಯ ಆಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ನಟಿ ವಿವರಿಸಿದ್ದಾರೆ.
ಅಪಾರ ಪ್ರಮಾಣದ ಚಿನ್ನ ಮಾರಾಟವಾದರೆ, ಪೂರೈಕೆ ಹೆಚ್ಚಾದಂತಾಗುತ್ತದೆ. ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿಯಲು ಇದು ಕಾರಣವಾಗುತ್ತದೆ. ಇದರಿಂದ ಯುಎಸ್ ಡಾಲರ್ ಮೌಲ್ಯ ಸಹ ಕುಸಿಯಬಹುದು. ಇದರಿಂದ ಯುಎಸ್‌ಗೆ ಯಾವ ತೊಂದರೆ ಆಗುವುದಿಲ್ಲ ಎಂದು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ.
ಯುಎಸ್ ಚಿನ್ನ ಮಾರಿ ತಾನು ಅಂದುಕೊಂಡಂತೆ ಮಾಡಲಿದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡಿದರು, ದುಬಾರಿ ಬೆಲೆಗೆ ಈಗಾಗಲೇ ಬಂಗಾರ ಖರೀದಿಸಿದವರ ಕತೆ ಏನಾಗುತ್ತದೆ? ಎಂಬ ಆಲೋಚಿಸಬೇಕಿದೆ. ಇನ್ನು ಹೊಸದಾಗಿ ಚಿನ್ನ ಖರೀದಿಸುವವರು ಕಾಯ್ದರೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ ಸಿಗುವ ಭರವಸೆ ಇದೆ. ಭಾರತದಂತಹ ದೇಶದಲ್ಲಿ ಚಿನ್ನಕ್ಕೆ ಅಪಾರ ಬೇಡಿಕೆ ಇದೆ. ಒಂದು ವೇಳೆ ಚಿನ್ನದ ದರ ಕುಸಿತವಾದಲ್ಲಿ ಮಧ್ಯಮ ಹಾಗೂ ಬಡವರಿಗೂ ಚಿನ್ನ ಕೈಗೆಟುಕುವ ದರಕ್ಕೆ ಸಿಗಲಿದೆ. ಈ ಬದಲಾವಣೆ ಆರ್ಥಿಕತೆ ಮೇಲೆ ಹೊಡೆತ ಉಂಟು ಮಾಡುವ ಸಾಧ್ಯತೆಯೂ ಇದೆ.

ಇಂದಿನ (2025 ಏಪ್ರಿಲ್ 09) ಚಿನ್ನದ ದರ
* 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 91,205 ರೂಪಾಯಿ
* 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 83,400 ರೂಪಾಯಿ
* ಬೆಳ್ಳಿ ಒಂದು ಗ್ರಾಂ ಬೆಲೆ: 102 ರೂಪಾಯಿ
* ಬೆಳ್ಳಿ 100 ಗ್ರಾಂ 1020 ರೂಪಾಯಿ ಇದೆ.
ಗ್ರಾಹಕರಿಗೆ ವಿಶೇಷ ಸೂಚನೆ ಏನೆಂದರೆ ಈ ಚಿನ್ನಾಭರಣಗಳ ದರವು ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ಕೊಂಚ ಭಿನ್ನವಾಗಿರುತ್ತದೆ. ಮಳಿಗೆಗಳಲ್ಲಿ ವೇಸ್ಟೇಜ್, ಇತರ ಶುಲ್ಕ ಸೇರಿ ಕೊಂಚ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಅದನ್ನು ಗಮನಿಸಿ ನೀವು ಕೊಳ್ಳಬೇಕಿದೆ.
ಮುಂದಿನ ದಿನಗಳಲ್ಲಿ ಆಗುವ ಚಿನ್ನದ ದರದಲ್ಲಿನ ಬದಲಾವಣೆ ಗಮನಿಸಿ ನೀವು ಚಿನ್ನ ಖರೀದಿಸುವುದು ಉತ್ತಮ ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications