ಚಿನ್ನದ ಬೆಲೆ ದಿಢೀರ್ 55,000 ಸಾವಿರಕ್ಕೆ ಇಳಿಕೆ ಸಾಧ್ಯತೆ: ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್!

ಚಿನ್ನದ ಬೆಲೆಯು ಈಗಾಗಲೇ ಒಂದು ಲಕ್ಷ ರೂಪಾಯಿಗೆ ಸಮೀಪಿಸಿದೆ. ಚಿನ್ನದ ಬೆಲೆಯು ನಾಳೆ ಅಥವಾ ಮುಂದಿನ ವಾರದಲ್ಲಿ ಒಂದು ಲಕ್ಷಕ್ಕೆ ತಲುಪಬಹುದು ಅಂತಲೂ ಹೇಳಲಾಗುತ್ತಿದೆ. ಆದರೆ, ಕೆಲವೇ ದಿನಗಳಲ್ಲಿ ಚಿನ್ನದ ಬೆಲೆಯು 55,000 ಸಾವಿರ ರೂಪಾಯಿಯಿಂದ 70,000 ಸಾವಿರ ರೂಪಾಯಿ ಒಳಗೆ ಕುಸಿತ ಕಾಣಲಿದೆ ಎಂದು ಹೇಳಲಾಗುತ್ತಿದೆ. ಇದು ಚಿನ್ನ ಪ್ರಿಯರಲ್ಲಿ ಹೊಸ ಆಸೆ ಮೂಡಿಸಿದೆ. ಯಾವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆ ಆಗಲಿದೆ. ಆರ್‌ಬಿಐ ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ನಿರ್ಧಾರವೇನು ಎನ್ನುವ ವಿವರ ಇಲ್ಲಿದೆ.

ಚಿನ್ನದ ಬೆಲೆಯು ಏರಿಕೆ ಆಗುತ್ತಲ್ಲೇ ಇದೆ. ಜುಲೈ 11ರಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಬರೋಬ್ಬರಿ 99,000 ಸಾವಿರ ರೂಪಾಯಿಗೆ ಬಂದು ತಲುಪಿದೆ. ಒಂದು ಲಕ್ಷ ರೂಪಾಯಿಗೆ ಇನ್ನು ಒಂದು ಸಾವಿರ ರೂಪಾಯಿ ಮಾತ್ರ ಬಾಕಿ ಉಳಿದಿದೆ. ಆದರೆ ಇನ್ನು ಕೆಲವೇ ದಿನಗಳಲ್ಲಿ ಅಥವಾ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು 55,000 ಸಾವಿರ ರೂಪಾಯಿಯಿಂದ 70,000 ಸಾವಿರ ರೂಪಾಯಿ ಒಳಗೆ ಕುಸಿತ ಕಾಣಲಿದೆ ಎಂದು ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಆರ್‌ಬಿಐನ ನಿರ್ಧಾರ. ಸಾಮಾನ್ಯವಾಗಿ ಎಲ್ಲಾ ದೇಶಗಳು ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡಿ ಇರಿಸಿಕೊಳ್ಳುತ್ತವೆ.

Gold Rate Gold price likely to drop to Rs 55 000 suddenly Good news for gold lovers

ಆರ್ಥಿಕ ಸಂಕಷ್ಟ ಅಥವಾ ವಿದೇಶಿ ಹಣಕಾಸು ವಿನಿಮಯಕ್ಕೆ ಚಿನ್ನವನ್ನು ಬಳಕೆ ಮಾಡಿಕೊಳ್ಳಬಹುದು ಎನ್ನುವುದು ಇದರ ಲೆಕ್ಕಾಚಾರವಾಗಿದೆ. ಭಾರತವೂ ಸಹ ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡಿತ್ತು. ಆದರೆ, ಇದೀಗ ಭಾರತ ಸರ್ಕಾರ & ಆರ್‌ಬಿಐ ಚಿನ್ನ ಖರೀದಿ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ಹೇಳಲಾಗಿದ್ದು. ಇದರಿಂದ ಚಿನ್ನದ ಬೆಲೆಯು ಬರೋಬ್ಬರಿ 55,000 ಸಾವಿರ ರೂಪಾಯಿಗೆ ಕುಸಿತ ಕಾಣಲಿದೆ ಅಂತಲೇ ಹೇಳಲಾಗುತ್ತಿದೆ. ಇನ್ನು ಕಳೆದ ಮೂರು ವರ್ಷಗಳ ಹಿಂದೆ ಚಿನ್ನದ ಬೆಲೆಯು 50,000 ಸಾವಿರದಿಂದ 55,000 ಸಾವಿರ ರೂಪಾಯಿ ಒಳಗೆಯೇ ಇತ್ತು. ಇದೇ ಮಾದರಿಯಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದೆ. ಇದೇ ಕಾರಣಕ್ಕೆ ಬೇರೆ ಎಲ್ಲಾ ದೇಶಗಳು ಮುಗಿಬಿದ್ದು ಚಿನ್ನ ಖರೀದಿ ಮಾಡಿದರೂ ಭಾರತ ಮಾತ್ರ ಚಿನ್ನ ಖರೀದಿಯನ್ನು ಮಾಡುತ್ತಿಲ್ಲ ಎಂದು ಹೇಳಲಾಗಿದೆ.

ಕೆಲವು ತಿಂಗಳುಗಳ ಹಿಂದೆ ಚಿನ್ನದ ಬೆಲೆಯು 55,000 ಸಾವಿರ ರೂಪಾಯಿಯಿಂದ 60,000 ಸಾವಿರ ರೂಪಾಯಿಗೆ ಇಳಿಕೆ ಆಗಲಿದೆ ಎಂದು ಅಮೆರಿಕದ ಮಾರ್ನಿಂಗ್‌ ಸ್ಟಾರ್‌ನ ವಿಶ್ಲೇಷಕರಾದ ಜಾನ್‌ ಮಿಲ್ಸ್‌ ಹೇಳಿದ್ದರು. ಇದು ಈಗ ಸತ್ಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿಯನ್ನು ಆರ್‌ಬಿಐ ಇಲ್ಲಿಯ ವರೆಗೆ ಹಂಚಿಕೊಂಡಿಲ್ಲ.

ಚಿನ್ನದ ಬೆಲೆ ಭರ್ಜರಿ ಇಳಿಕೆ: ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಚಿನ್ನವನ್ನು ಖರೀದಿ ಮಾಡದೆ ಇರಬಹುದು ಎಂದೂ ಹೇಳಲಾಗಿದೆ. ಆದರೆ ಈ ಗುಟ್ಟನ್ನು ಆರ್‌ಬಿಐ ಬಿಟ್ಟುಕೊಟ್ಟಿಲ್ಲ. ಒಟ್ಟಾರೆ ಚಿನ್ನದ ಬೆಲೆ ಹೇಗಾದರೂ ಇಳಿದರೆ ಸಾಕು ಎಂದು ಚಿನ್ನ ಪ್ರಿಯರು ನಿರೀಕ್ಷೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+