Gold Rate: ಕೇಂದ್ರದ ಮಹತ್ವದ ನಿರ್ಧಾರ; ಶೀಘ್ರದಲ್ಲೇ ಚಿನ್ನದ ಬೆಲೆ ಮತ್ತಷ್ಟು ಏರಿಕೆ?
ಈಗಾಗಲೇ ಚಿನ್ನದ ಬೆಲೆ ಏರಿಕೆ ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯಾಗುತ್ತಿದ್ದರೂ ಆಭರಣ ಕೊಳ್ಳುವವರ, ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಚಿನ್ನ ಸೇರಿದಂತೆ ಹಲವು ವಸ್ತಗಳ ಮೇಲಿನ ಕಸ್ಟಮ್ಸ್ ಸುಂಕಗಳನ್ನು ಪರಿಷ್ಕರಣೆ ಮಾಡಲು ಪರಿಶೀಲನೆ ಮಾಡುತ್ತಿದೆ. ಇತ್ತೀಚೆಗೆ ಹಲವು ವಸ್ತುಗಳ ಮೇಲೆ ಆಮದು ಸುಂಕ ಕಡಿಮೆ ಮಾಡಿದ್ದು, ದೇಶೀಯವಾಗ ಮೌಲ್ಯ ಸೇರ್ಪಡೆ ನೀತಿ ಉದ್ದೇಶ ಸಾಧಿಸುವ ಬದಲು ವಸ್ತುವಿನ ಬಳಕೆಯನ್ನು ಹೆಚ್ಚಿಸಿದೆ ಎಂದು ಕಂಡುಬಂದರೆ ಮತ್ತೆ ಸುಂಕವನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಚಿನ್ನದ ಮೇಲಿನ ಆಮದು ಸುಂಕ ಕಡಿಮೆ ಮಾಡಿದ ಬಳಿಕ ಚಿನ್ನದ ಬೇಡಿಕೆ ಹೆಚ್ಚಾಗಿದ್ದು ಕೇಂದ್ರ ಸರ್ಕಾರ ಆಮದು ಸುಂಕವನ್ನು ಮತ್ತೆ ಹೆಚ್ಚಿಸುವ ಬಗ್ಗೆ ಯೋಜಿಸಬಹುದು ಎಂದು ವರದಿಯಾಗಿದೆ. ಹಣದುಬ್ಬರದಿಂದ ಜನತೆಯನ್ನು ರಕ್ಷಿಸಲು ಅಗತ್ಯ ವಸ್ತುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದೊಂದು ವಾರ್ಷಿಕ ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕಗಳಲ್ಲಿ ಬದಲಾವಣೆ ಮಾಡಲಾಗುತ್ತದೆ.
ಚಿನ್ನದ ಆಮದು ಹೆಚ್ಚಳ
2024ರ ಜುಲೈನಲ್ಲಿ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿತ್ತು. ಆಮದು ಸುಂಕ ಕಡಿಮೆಯಾಗುತ್ತಿದ್ದಂತೆ ಚಿನ್ನದ ಆಮದು ಪ್ರಮಾಣ ಹೆಚ್ಚಾಯಿತು. ಆದರೆ ಭಾರತದ ರತ್ನ ಮತ್ತು ಆಭರಣಗಳಂತ ಸಿದ್ಧಪಡಿಸಿದ ರಫ್ತುಗಳ ಪ್ರಮಾಣ ಕಡಿಮೆಯಾಗಿದೆ ಎಂದು ವಿಶ್ವಸನೀಯ ಮೂಲವೊಂದು ತಿಳಿಸಿರುವುದಾಗಿ ಎಚ್‌ಟಿ ವರದಿ ಮಾಡಿದೆ.
2024ರ ಜುಲೈ 23ರಂದು ಮಂಡಿಸಲಾದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬಾರ್ ಮೇಲಿನ ಕಸ್ಟಮ್ಸ್ ಸುಂಕವನ್ನು 15% ರಿಂದ 6% ಗೆ ಕಡಿಮೆ ಮಾಡಲಾಗಿತ್ತು. ಪ್ಲಾಟಿನಂ, ಪಲ್ಲಾಡಿಯಮ್, ಆಸ್ಮಿಯಮ್, ರುಥೇನಿಯಮ್, ಇರಿಡಿಯಮ್ ಮೇಲಿನ ಆಮದು ಸುಂಕವನ್ನು 15.4% ರಿಂದ 6.4%ಕ್ಕೆ ಕಡಿತಗೊಳಿಸಿತ್ತು.
ಚಿನ್ನದ ಮೇಲಿನ ಆಮದು ಸುಂಕ ಕಡಿಮೆಯಾಗುತ್ತಿದ್ದಂತೆ 2024ರ ಆಗಸ್ಟ್‌ನಲ್ಲಿ ಚಿನ್ನದ ಆಮದು ಪ್ರಮಾಣ 104% ಹೆಚ್ಚಾಗಿತ್ತು. ಚಿನ್ನದ ಆಮದು ಮೌಲ್ಯ $10.06 ಶತಕೋಟಿಗೆ ಹೆಚ್ಚಾಗಿದ್ದರೆ, ಭಾರತದ ರತ್ನ ಮತ್ತು ಆಭರಣದ ರಫ್ತಿನಲ್ಲಿ 23% ಕ್ಕಿಂತ ಕಡಿಮೆಯಾಗಿ $1.99 ಶತಕೋಟಿಗೆ ತಲುಪಿತ್ತು. ಚಿನ್ನವನ್ನು ರತ್ನ ಮತ್ತು ಆಭರಣಗಳ ಉತ್ಪಾದನೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದರೂ, ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ.












Click it and Unblock the Notifications