Gold Price: ಚಿನ್ನದ ಬೆಲೆಯಲ್ಲಿ 2200 ಕುಸಿತ: ಒಂದೇ ದಿನ 7,500 ರೂಪಾಯಿ ಕುಸಿದ ಬೆಳ್ಳಿ ಬೆಲೆ
ಸೋಮವಾರ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಈ ವಾರ ಮತ್ತಷ್ಟು ಕುಸಿಯುವ ಮುನ್ಸೂಚನೆ ಕೊಟ್ಟಿತ್ತು. ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದ್ದು, 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 2,200 ರೂಪಾಯಿ ಕುಸಿತವಾಗಿದೆ. ಬೆಳ್ಳಿ ಬೆಲೆ ಒಂದು ಕೆಜಿಗೆ ಒಂದೇ ದಿನ 7,500 ರೂಪಾಯಿ ಕುಸಿತ ಕಂಡಿದೆ.
ಸೋಮವಾರ 7,115 ರೂಪಾಯಿ ಇದ್ದ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 20 ರೂಪಾಯಿ ಕುಸಿತ ಕಂಡಿದ್ದು, 7095 ರೂಪಾಯಿಗಳಂತೆ ಮಾರಾಟವಾಗುತ್ತಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಕುಸಿತ ಕಂಡಿದೆ. ಸೋಮವಾರ 71,150 ರೂಪಾಯಿ ಇದ್ದ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 70,950 ರೂಪಾಯಿಗೆ ಕುಸಿದಿದೆ.

ಸೋಮವಾರ 7,762 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 22 ರೂಪಾಯಿ ಕಡಿಮೆಯಾಗಿದ್ದು, ಮಂಗಳವಾರ 7,740 ರೂಪಾಯಿಯಂತೆ ಮಾರಾಟವಾಗುತ್ತಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 220 ರೂಪಾಯಿ ಕಡಿಮೆಯಾಗಿದೆ.
18 ಗ್ರಾಂ ಚಿನ್ನದ ಬೆಲೆ ಕೂಡ ಪ್ರತಿ ಗ್ರಾಂಗೆ 17 ರೂಪಾಯಿ ಕುಸಿತವಾಗಿದೆ. ಸೋಮವಾರ 5,822 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 5,805 ರೂಪಾಯಿಗೆ ಕುಸಿತ ಕಂಡಿದೆ.
ಚಿನ್ನದ ಬೆಲೆ ಮತ್ತೆ ಕುಸಿಯುತ್ತಾ?
ಈಗಾಗಲೇ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ದರವನ್ನು ಮುಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 5-7% ಕುಸಿತವನ್ನು ನಿರೀಕ್ಷೆ ಮಾಡಲಾಗಿದೆ. ಈ ಕುಸಿತದ ಅವಧಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಸಕಾಲವೆಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೀಪಾವಳಿ ಹಬ್ಬ ಬರುತ್ತಿರುವ ಕಾರಣ ಬಂಗಾರಕ್ಕೆ ಮತ್ತಷ್ಟು ಬೇಡಿಕೆ ಬರುವ ಸಾಧ್ಯತೆ ಇದ್ದು, ದರ ಹೆಚ್ಚುವ ಸಾಧ್ಯತೆ ಇದೆ.
ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ
ಸೋಮವಾರ ಸ್ಥಿರತೆ ಕಾಯ್ದುಕೊಂಡಿದ್ದ ಬೆಳ್ಳಿ ಬೆಲೆ ಮಂಗಳವಾರ ಭರ್ಜರಿ ಕುಸಿತ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆ ಒಂದೇ ದಿನ 7,500 ರೂಪಾಯಿ ಕುಸಿತ ಕಂಡಿದೆ. ಅಕ್ಟೋಬರ್ 13 ರಂದು ಬೆಳ್ಳಿ ಬೆಲೆ ಒಂದೇ ದಿನ 8600 ರೂಪಾಯಿ ಏರಿಕೆಯಾಗಿ 93,500 ರೂಪಾಯಿ ತಲುಪಿತ್ತು, ಇಂದು 7,500 ರೂಪಾಯಿ ಕುಸಿತ ಕಂಡಿದ್ದು 86,000 ರೂಪಾಯಿಗೆ ಮಾರಾಟವಾಗುತ್ತಿದೆ.












Click it and Unblock the Notifications