Gold Rate Today: ಭಾರತದಲ್ಲಿ ಚಿನ್ನದ ಉತ್ಪಾದನೆ ಅರ್ಧದಷ್ಟು ಕುಸಿತ! ಕಾರಣವೇನು?

Gold Price Today: ಚಿನ್ನದ ಬೆಲೆ ಭಾರತದಲ್ಲಿ ಗಗನಕ್ಕೇರಿದೆ. ಮೊದ ಮೊದಲು ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಆಮೇಲೆ ದುಬಾರಿ ಚಿನ್ನ ಖರೀದಿದಾರರ ಸಂಖ್ಯೆ ಕ್ಷೀಣಿಸಿತು. ಆಭರಣಕಾರರು ಚಿನ್ನದ ಉತ್ಪಾಚನೆಯನ್ನು ಕಡಿಮೆ ಮಾಡಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ಇನ್ನು ಕಡಿಮೆ ಬೆಲೆಯ 14 ಕ್ಯಾರಟ್ ಚಿನ್ನದ ಉತ್ಪಾದನೆ ಕೊಂಚ ಹೆಚ್ಚಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಇದೇ ವರ್ಷ ಕಳೆದ ಜೂನ್‌ ತಿಂಗಳಲ್ಲಿ ಚಿನ್ನದ ಮಾರಾಟ 2024ಕ್ಕಿಂತಲೂ ಕಡಿಮೆ ಅಂಧರೆ ಶೇಕಡಾ 60 ರಷ್ಟು ಕುಸಿತಗೊಂಡಿತ್ತು. ಅಲ್ಲಿಂದ ಉತ್ಪಾದನೆ ಕೊಂಚ ಇಳಿಕೆ ಆಯಿತು. ಪ್ರಮಾಣ 35 ಟನ್‌ಗಳಿಗೆ ತಲುಪಿತು. ಕೊರೊನಾ ವ್ಯಾಪಿಸಿದ್ದ ಕಾಲದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಚಿನ್ನ ಖರೀದಿ ಹಾಗೂ ಉತ್ಪಾದನೆ ಆಗಿತ್ತು. ಅದಾದ ಬಳಿಕ ಜೂನ್ ತಿಂಗಳಲ್ಲಿಯೇ ಇಷ್ಟೊಂದು ಕಡಿಮೆ ಆಗಿರುವುದು ಅಂಕಿ ಸಂಖ್ಯೆಗಳಿಂದ ಗೊತ್ತಾಗಿದೆ. ನಿರಂತರವಾಗಿ ಚಿನ್ನದ ದರ ಏರಿಕೆ ಕಾರಣ ಹಾಗೂ ಅಸ್ಥಿರ ಬೆಲೆ ಹಿನ್ನೆಲೆ ಚಿನ್ನಾಭರಣ ಪ್ರಿಯರು ಖರೀದಿಸಲು ಮುಂದೆ ಬಂದಿಲ್ಲ ಎಂದು ಇಂಡಿಯಾ ಬುಲಿಯನ್ ಮತ್ತು ಆಭರಣಕಾರರ ಸಂಘ (IBJA) ಮಾಹಿತಿ ನೀಡಿದೆ.

Gold Production 50 Percent Cutting Down in Acorss India For This Reason

ಚಿನ್ನದ ಬೆಲೆಯ ಏರಿಳಿತ ಮುಂದುವರಿಕೆ

ಸದ್ಯ ಜುಲೈ ತಿಂಗಳಲ್ಲಿ ನಿರಂತರವಾಗಿ ಏರಿಕೆ ಆಗಿದ್ದ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನ ಏರಿಳಿತ ಮುಂದುವರಿದಿದೆ. ಒಂದು ಲಕ್ಷ ರೂಪಾಯಿ ದಾಟಿದ್ದ ಚಿನ್ನ ಇಂದು ಜುಲೈ 15ರಂದು ಇಳಿಕೆ ಕಂಡಿದೆ. ನೆನ್ನೆ ಸೋಮವಾರ (ಜುಲೈ 14) 10 ಗ್ರಾಂ ಬಂಗಾರವು 600 ರೂಪಾಯಿ ಏರಿಕೆ ಆಗಿದ್ದು, 98,000 ರೂಪಾಯಿ ಇದೆ. ಕೇವಲ ಹತ್ತು ಗ್ರಾಂ (ಚಿಲ್ಲರೆ ಖರೀದಿ) ಮಾತ್ರ ಚಿನ್ನ ಖರೀದಿಸುವವರು ಆ ಹಣದ (98,000 ರೂಪಾಯಿ) ಮೇಲೆ ಅಂದರೆ ವೇಸ್ಟೇಜ್, ಶೇ.3 ಸೇರಿ ಜಿಎಸ್‌ಟಿ ಇತರ ಶುಲ್ಕ ಸೇರಿ ಒಟ್ಟು 10 ಗ್ರಾಂಗೆ ರೂ.1,00,997 ಪಾವತಿಸಬೇಕಾಗುತ್ತದೆ. ಇದು ಸಹ ಚಿನ್ನಾಭರಣ ಪ್ರಿಯರನ್ನು ಹೈರಾಣಾಗಿಸಿದೆ.

ಭಾರತದಲ್ಲಿ ಚಿನ್ನದ ಆಭರಣ ತಯಾರಕರು ಚಿನ್ನದ ಆಭರಣ ಉತ್ಪಾದನೆಯನ್ನು ಅರ್ಧದಷ್ಟು ಕಡಿಮೆ ಮಾಡಿದ್ದಾರೆ. ಹೀಗಾಗಿ ಮಾರಾಟದಲ್ಲಿ ತತಕ್ಷಣಕ್ಕೆ ಯಾವ ಏರಿಕೆ ಕಾಣುತ್ತಿಲ್ಲ ಎಂದು ಐಬಿಜೆಎ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಅವರು ಮಾಹಿತಿ ನೀಡಿದ್ದಾರೆ. ಹಬ್ಬಗಳು ಬಂತೆಂದು ಉಚಿತ ಕೊಡುಗೆ, ರಿಯಾಯಿತಿ ನೀಡಿದರೂ ಸಹಿತ ಬೇಡಿಕೆ ಹೆಚ್ಚಾಗಿಲ್ಲ, ಚಿನ್ನಾಭರಣ ಮಾರಾಟದ ಕಳೆ ಕುಂದಿದೆ ಎಂದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುರೋಪಿಯನ್ ಒಕ್ಕೂಟ ಮತ್ತು ಮೆಕ್ಸಿಕೊದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಆಗಿವೆ. ಮುಂದಿನ ತಿಂಗಳು ಆಗಸ್ಟ್ 1 ರವರೆಗೆ ಮಾತುಕತೆಗಳಿಗೆ ಅವಕಾಶ ನೀಡಿದ್ದರೂ ಸಹ ಬೆಲೆ ತ್ವರಿತ ಏರಿಕೆ ಆಗುತ್ತಲೇ ಇದೆ. ಇತ್ತ ಆಭರಣ ತಯಾರಕರು, ತಮ್ಮ ಘಟಕಗಳಲ್ಲಿ ದುಬಾರಿ ಬೆಲೆಯ ಚಿನ್ನಕ್ಕೆ ಬದಲಾಗಿ 14-ಕ್ಯಾರೆಟ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದರ ಬಳಕೆ, ಮಾರಾಟ ಹೆಚ್ಚಾಗಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಬಂಗಾರ ತಯಾರಿಕೆ ಇಳಿಕೆ ಕಂಡಿದೆ.

9 ಕ್ಯಾರೆಟ್ ಚಿನ್ನಕ್ಕೆ ಹಾಲ್‌ಮಾರ್ಕಿಂಗ್?

ಆಭರಣ ವ್ಯಾಪಾರಿಗಳು 14-ಕ್ಯಾರೆಟ್ ಚಿನ್ನದ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಗ್ರಾಹಕರಿಗೆ ಇದು ಬದಲಿ ಆಯ್ಕೆ ಆಗಿದೆ. ಇತ್ತೀಚೆಗೆ ಕಡಿಮೆ ಬೆಲೆ, ಹಗುರ ತೂಕದ ಚಿನ್ನದ ಟ್ರೆಂಡ್ ಜಾಸ್ತಿ ಆಗಿದೆ. ಈ ಪ್ರವೃತ್ತಿ ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತು 9 ಕ್ಯಾರೆಟ್ ಚಿನ್ನಕ್ಕೆ ಹಾಲ್‌ಮಾರ್ಕಿಂಗ್ ಸೌಲಭ್ಯಕ್ಕಾಗಿ ಚಿನ್ನದ ವ್ಯಾಪಾರಿಗಳ ಸಂಘವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಬೇಡಿಕೆ ಇಟ್ಟಿದೆ. ಈ ಸಂಬಂಧ ಮಾತುಕತೆ ನಡೆಸಿದೆ. ಸದ್ಯ 24 ಕ್ಯಾರಟ್, 22 ಕ್ಯಾರಟ್, 18ಕ್ಯಾರಟ್ ಮತ್ತು 14 ಕ್ಯಾರೆಟ್ ಚಿನ್ನದ ಆಭರಣಗಳಿಗೆ ಹಾಲ್ ಮಾರ್ಕಿಂಗ್ ಸೌಲಭ್ಯ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+