Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ
Gold Price Today: ಅಕ್ಷಯ ತೃತೀಯ-2026 ಕೆಲವು ದಿನಗಳ ಮುನ್ನವೇ ಚಿನ್ನಾಭರಣ ಪ್ರಿಯರಿಗೆ ಚಿನ್ನದ ದರ ಏರಿಕೆಯು ಆಘಾತ ನೀಡಿದೆ. ಚಿನ್ನದ ಬೆಲೆಯಲ್ಲಿ ಸಹಜ ಏರಿಳಿತ ಕಂಡು ಬರುತ್ತಿತ್ತು. ಆದರೆ ಇವತ್ತು ಮಂಗಳವಾರ (ಏಪ್ರಿಲ್ 14) ಬಂಗಾರದ ದರದಲ್ಲಿ ಭರ್ಜರಿ ಏರಿಕೆ ಆಗಿದೆ. ನಾಲ್ಕು ಸರಿ ಇಳಿಕೆ ಆಗುವ ದರ ಒಂದೇ ದಿನಕ್ಕೆ ಏರಿಕೆ ಆಗಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಕತ್ತರ ಹಾಕಿದೆ. ಯಾರೆಲ್ಲ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದವರೋ ಅವರ ಯೋಚನೆ ಇಂದಿನ ಹೆಚ್ಚಳ ತಲೆಕೆಳಗೆ ಮಾಡಿದೆ.
ಒಂದೇ ದಿನಕ್ಕೆ 22 ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 135 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನಕ್ಕೆ 147 ರೂಪಾಯಿ ಏರಿಕೆ ಆಗಿದೆ. ನೆನ್ನೆಯವರೆಗೆ ಈ ಹೆಚ್ಚಳವು ಕೇಲವ 35 ರಿಂದ 50ರವರೆಗೆ ಕಂಡು ಬಂದಿತ್ತು. ಇದೀಗ ನೂರಾರು ರೂಪಾಯಿಗಳ ಲೆಕ್ಕದಲ್ಲಿ ಏರಿಕೆ ಆಗಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಬೆಳ್ಳಿಯು ಎರಡು ಬಾರಿ ಹೆಚ್ಚಾಗಿದ್ದು ಬಿಟ್ಟರೆ, ವಾರದಿಂದ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ. ಸದ್ಯದ ಬೆಳವಣಿಗೆ ನೋಡಿದರೆ ಅಕ್ಷಯ ತೃತೀಯ ಏಪ್ರಿಲ್ 19ಕ್ಕೆ ಇದ್ದು, ಆ ಹೊತ್ತಿಗೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗುವ ಆತಂಕ ಶುರುವಾಗಿದೆ.

10 ಗ್ರಾಂ ಚಿನ್ನ ಬೆಲೆಯಲ್ಲಿ ದಾಖಲೆಯ ಏರಿಕೆ
* 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯು ಇಂದು ಒಂದೇ ದಿನಕ್ಕೆ ಬರೋಬ್ಬರಿ 1,350 ರೂಪಾಯಿ ಏರಿಕೆ ಕಾಣುವ ಮೂಲಕ 1,41,100 ರೂಪಾಯಿ ತಲುಪಿದೆ. ಇದರ ಬೆಲೆ ನೆನ್ನೆ ಸೋಮವಾರ 1,39,750 ರೂಪಾಯಿ ಇತ್ತು.
* 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯು 1,470 ರೂಪಾಯಿ ಹೆಚ್ಚಾಗುವ ಮೂಲಕ ಬೆಲೆ 1,53,930 ರೂಪಾಯಿ ಮುಟ್ಟಿದೆ. ಇದರ ಬೆಲೆ ನೆನ್ನೆ 1,52,460 ರೂಪಾಯಿ ಕಂಡಿತ್ತು.
* 18 ಕ್ಯಾರಟ್ ಬಂಗಾರದ ಬೆಲೆಯು 1110 ರೂಪಾಯಿ ಹೆಚ್ಚಾಗುವ ಮೂಲಕ 1,15,450 ರೂ.ತಲುಪಿದ್ದು, ನೆನ್ನೆ ಅದರ ದರ 1,14,340 ರೂಪಾಯಿ ಇತ್ತು ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದಿನ ಆರೇಳು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಅಷ್ಟಾಗಿ ಏರಿಕೆ ಆಗಿರಲಿಲ್ಲ. ತಕ್ಕಮಟ್ಟಿನ ಏರಿಕೆ ಜೊತೆಗೆ ಇಳಿಕೆ ಆಗಿತ್ತು. ಇದೀಗ ದಿಢೀರನೇ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದು ಗ್ರಾಹಕರ ಆತಂಕಕ್ಕೆ ಮತ್ತು ಹೂಡಿಕೆದಾರರಿಗೆ ನೆಮ್ಮದಿ ತಂದಿದೆ.
ಒಂದೇ ವಾರದಲ್ಲಿ ಚಿನ್ನ-ಬೆಳ್ಳಿ ದರ ಏರಿಕೆಯತ್ತ..
ಜಾಗತಿಕ ಯುದ್ಧ, ಯುಎಸ್ ಡಾಲರ್ ಮೌಲ್ಯ ಕುಸಿತ, ಆರ್ಥಿಕ ಅನಿಶ್ಚಿತತೆ ಹಾಗೂ ರಾಜತಾಂತ್ರಿಕ ಅಂಶಗಳು ಸೇರಿದಂತೆ ಇನ್ನಿತರ ಕಾರಣಗಳಿಂದ ದರದಲ್ಲಿ ಏರಿಳಿತ ಮುಂದುವರಿದಿತ್ತು. ನಿರಂತರ ಗರಿಷ್ಠ ಏರಿಕೆ ಕಂಡಿದ್ದ ಬಂಗಾರ ಮತ್ತು ಬೆಳ್ಳಿ ಬೆಲೆಗಳು ಫೆಬ್ರವರಿ ಮೊದಲ ವಾರದಿಂದ ಕುಸಿಯಲು ಆರಂಭಿಸಿವು. ಏಪ್ರಿಲ್ 08ರಂದು ಯುಎಸ್ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲಿನ ಜಂಟಿ ಯುದ್ಧವನ್ನು ತಾತ್ಕಾಲಿಕವಾಗಿ ಎರಡು ವಾರಗಳ ನಿಲ್ಲಿಸುವುದಾಗಿ ತಿಳಿಸುತ್ತಿದ್ದಂತೆ ಷೇರುಪೇಟೆ ಜಿಗಿತ ಕಂಡಿತ್ತು. ಮತ್ತೊಂದೆಡೆ ಇಳಿಕೆಯ ಹಾದಿ ಹಿಡಿದಿದ್ದ ಹಳದಿ ಹಾಗೂ ಬಿಳಿ ಲೋಹಗಳು ಇದೀಗ ಒಂದೇ ವಾರದಲ್ಲಿ ಭರ್ಜರಿ ಏರಿಕೆಯತ್ತ ಹೆಜ್ಜೆ ಇಟ್ಟಿವೆ.
ಇಂದಿನ ಬೆಳ್ಳಿ ದರ ಎಷ್ಟಿದೆ? ವಾರದಲ್ಲಿ ಇಳಿಕೆ ಆಗಿದ್ದೆಷ್ಟು?
ಬೆಳ್ಳಿ ದರವು ಕಳೆದೊಂದು ವಾರದಲ್ಲಿ ಎರಡು ಬಾರಿ ಮಾತ್ರವೇ ಏರಿಕೆ ಆಗಿದ್ದು ಬಿಟ್ಟರೆ ನಿರಂತರವಾಗಿ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದೆ. ಇಂದು ಏಪ್ರಿಲ್ 14ರಂದು ಮಂಗಳವಾರ ಶ್ವೇತ ಲೋಹದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಒಂದು ಕೆಜಿ ಬೆಳ್ಳಿಯ ದರ ಇಂದು 2,55,00 ರೂಪಾಯಿ ಇದೆ. ಕಳೆದ ಒಂದು ವಾರದಲ್ಲಿ 5,000 (ಏಪ್ರಿಲ್ 10ರಂದು) ಮತ್ತು 10,000 (ಏಪ್ರಿಲ್ 08 ರಂದು) ರೂಪಾಯಿ ಹೆಚ್ಚಾಗಿತ್ತು. ನಂತರ ಒಮ್ಮೆ 5000 (ಏಪ್ರಿಲ್ 13ರಂದು) ಇಳಿಕೆ ಆಗಿತ್ತು.
ಪ್ರಮುಖ ನಗರಗಳಲ್ಲಿ 10ಗ್ರಾಂ 22k ಬಂಗಾರದ ಬೆಲೆ
* ಬೆಂಗಳೂರು: 14,110 ರೂ.
* ಚೆನ್ನೈ: 14,220 ರೂ.
* ಮುಂಬೈ: 14,110 ರೂ.
* ಕೇರಳ: 14,110 ರೂ.
* ಪುಣೆ: 14,110 ರೂ.
* ದೆಹಲಿ: 14,125 ರೂ.
* ಕೊಲ್ಕತ್ತಾ: 14,110 ರೂ.
* ಅಹಮದಾಬಾದ್: 14,115 ರೂ.
* ಹೈದರಾಬಾದ್: 14,110 ರೂ.












Click it and Unblock the Notifications