Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಹೆಚ್ಚಳ, ನಿಮ್ಮೂರಿನಲ್ಲಿ ಎಷ್ಟಿದೆ?

Gold Price on July 30: ಚಿನ್ನಾಭರಣಗಳು ಮತ್ತೆ ದುಬಾರಿ ಹಾದಿಯತ್ತ ಮುಖ ಮಾಡಿವೆ. ಕಳೆದೊಂದು ವಾರದಿಂದ ಇಳಿಕೆಯತ್ತ ಮುಖ್ಯ ಮಾಡಿದ್ದ ಚಿನ್ನ ಇಂದು ಒಂದೇ ದಿನಕ್ಕೆ ಭಾರೀ ಹೆಚ್ಚಾಗಿದೆ. ಕರ್ನಾಟಕ, ಭಾರತ ಸೇರಿದಂತೆ ವಿದೇಶಗಳಲ್ಲೂ ಚಿನ್ನದ ದರ ಏರಿಕೆಯು ಗ್ರಾಹಕರಿಗೆ ಶಾಕ್ ನೀಡಿದೆ. ಹಬ್ಬಗಳ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕು ಎಂದುಕೊಂಡವರಿಗೆ ಆಘಾತವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈಗಾಗಲೇ ಒಂದು ಲಕ್ಷ ರೂಪಾಯಿ ತಲುಪಿರುವ ಚಿನ್ನದ ಬೆಲೆಯಲ್ಲಿ ದಿನೇ ದಿನೇ ಮಹತ್ವದ ಏರಿಳಿತಗಳು ಸಂಭವಿಸುತ್ತಿವೆ. ಈವರೆಗೆ 24 ಕ್ಯಾರೆಟ್ ಚಿನ್ನವು 1,00,000 ರೂಪಾಯಿ ದಾಟಿದೆ. ಸದ್ಯ 90,000 ರೂಪಾಯಿ ಆಸುಪಾಸಿನಲ್ಲಿರುವ 22 ಕ್ಯಾರೆಟ್ ಸಹ ಒಂದು ಲಕ್ಷ ರೂಪಾಯಿ ದಾಟಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹಾಗಾದರೆ ಇಂದು ಜುಲೈ 30ರಂದು ಬುಧವಾರ ಚಿನ್ನ, ಬೆಳ್ಳಿ ದರದಲ್ಲಿ ಆದ ಬದಲಾವಣೆ, ಯಾವ್ಯಾವ ನಗರಗಳಲ್ಲಿ ಎಷ್ಟಿದೆ ದರ, ಪಟ್ಟಿ ತಿಳಿಯಿರಿ.

Gold Prices Surge Rs 660 on July 30 Across India Know Citywise Rate list

ಇಂದು ಬೆಳ್ಳಿ ದರ ಸಹ 100 ಗ್ರಾಂಗೆ 100 ರೂಪಾಯಿ ಏರಿಕೆ ಆಗಿದೆ. ಚಿನ್ನ 22 ಕ್ಯಾರಟ್ ಚಿನ್ನದ 10ಗ್ರಾಂ ದರ ₹600 ಹೆಚ್ಚಾಗಿದ್ದು, ಇಂದು ಬೆಲೆ 92,100 ರೂ.ನಷ್ಟಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 660 ರೂಪಾಯಿ ಹೆಚ್ಚಾಗಿದ್ದು, ಇಂದಿನ ದರ ₹1,00,480 ರಷ್ಟಿದೆ. ದರ ಏರಿಕೆಯಿಂದ ವರ ಮಹಾಲಕ್ಷ್ಮೀ ಹಬ್ಬಕ್ಕೆ ಚಿನ್ನ ಖರೀದಿ ಪ್ಲಾನ್ ಮಾಡಿದವರಿಗೆ ಆರ್ಥಿಕ ಹೊರೆ ಉಂಟಾಗಲಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ 10ಗ್ರಾಂ 92,110 ರೂಪಾಯಿ ಇದೆ. 24 ಕ್ಯಾರಟ್ ಬಂಗಾರದ ದರ ₹1,00,480 ರೂಪಾಯಿ ಇದೆ. ಬೆಳ್ಳಿ ದರ ಒಂದು ಕೆ.ಜಿ.ಗೆ 1,000 ರೂ.ಹೆಚ್ಚಾಗಿದ್ದು, ಇಂದು ಅದರ ಬೆಲೆ 1,17,000 ರೂಪಾಯಿನಷ್ಟಿದೆ. ಶೀಘ್ರವೇ 22 ಕ್ಯಾರಟ್ ಚಿನ್ನಕ್ಕೂ ಬೇಡಿಕೆ ಹೆಚ್ಚಾಗಿ ಅದರ ದರವು ಒಂದು ಲಕ್ಷ ರೂಪಾಯಿ ತಲುಬಹುದು ಎಂಬ ನಿರೀಕ್ಷೆ ಇದೆ.

ಇಂದಿನ 22k 10 ಗ್ರಾಂ ಚಿನ್ನದ ದರ ಪಟ್ಟಿ

* ಬೆಂಗಳೂರು: 92,110 ರೂಪಾಯಿ

* ಹೈದರಾಬಾದ್: 90,603 ರೂಪಾಯಿ

* ಚೆನ್ನೈ: 90,723 ರೂಪಾಯಿ

* ಮುಂಬೈ: 90,457 ರೂಪಾಯಿ

* ದೆಹಲಿ: 90,301 ರೂಪಾಯಿ

* ಪುಣೆ: 90,457 ರೂಪಾಯಿ

* ಜೈಪುರ: 90,448 ರೂಪಾಯಿ

* ಲಕ್ನೋ: 90,484 ರೂಪಾಯಿ

* ಕೋಲ್ಕತ್ತಾ: 90,338 ರೂಪಾಯಿ

* ಅಹಮದಾಬಾದ್: 90,576 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+