Gold Price: ಸತತ 2ನೇ ದಿನವು ಬಂಗಾರದ ಬೆಲೆ ಭಾರೀ ಏರಿಕೆ, ದಾಖಲೆ ಬರೆದ ಬೆಳ್ಳಿ
Gold and Silver Price Hit Record Today: ಚಿನ್ನದ ಆಭರಣಪ್ರಿಯರಿಗೆ ಮೇಲಿಂದ ಮೇಲೆ ದರ ಏರಿಕೆ ಬರೆ ಬೀಳುತ್ತಿದೆ. ಸತತ ಎರಡನೇ ದಿನವು (ಏಪ್ರಿಲ್ 15) ಬಂಗಾರದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗಿದೆ. ಕನಿಷ್ಠ ಮಟ್ಟದಲ್ಲಿ ಏರಿಕೆ ಆಗುತ್ತಿದ್ದ ಹಳದಿ ಲೋಹದ ಮೌಲ್ಯ ಮತ್ತೆ ಗಗನದತ್ತ ಮುಖ ಮಾಡಿದೆಸ. ಕೆಲವು ದಿನಗಳಿಂದ ತಟಸ್ಥವಾಗಿದ್ದ ಬೆಳ್ಳಿ ದರವು ಸಹ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ.
ಬೆಳ್ಳಿ ದರ 15000 ರೂ. ಏರಿಕೆ!
ಬಿಳಿ ಲೋಹ ಬೆಳ್ಳಿ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಇಂದು ಒಂದೇ ದಿನಕ್ಕೆ (ಬುಧವಾರ) ಒಂದು ಕೆಜಿಗೆ ಬರೋಬ್ಬರಿ 15000 ರೂಪಾಯಿ ಹೆಚ್ಚಾಗಿದೆ. ಹತ್ತು ಗ್ರಾಂಗೆ 1500 ರೂಪಾಯಿ ಏರಿಕೆ ಕಂಡಿದೆ. ಏಪ್ರಿಲ್ 11ರಿಂದ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಒಂದು ಬಾರಿ 5000 ರೂ. ಇಳಿಕೆ ಆಗಿದ್ದು ಬಿಟ್ಟರೆ ಯಥಾ ಸ್ಥಿತಿಯಲ್ಲಿ ದರ ಮುಂದುವರಿದಿತ್ತು.

ಚಿನ್ನದ ಬೆಲೆ ಎಷ್ಟಿದೆ?
ಇಂದು 22 ಕ್ಯಾರಟ್ ಚಿನ್ನದ ಒಂದು ಗ್ರಾಂ ದರವು 14,240 ರೂ. ಇದೆ. ಒಂದೇ ದಿನಕ್ಕೆ ಹತ್ತು ಗ್ರಾಂ ಬಂಗಾರದ ಬೆಲೆ 1300 ರೂಪಾಯಿ ಏರಿಕೆ ಆಗಿದ್ದು, 1,42,400 ರೂಪಾಯಿ ತಲುಪಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಇನ್ನು 24 ಕ್ಯಾರಟ್ ಬಂಗಾರದ ಬೆಲೆ ಒಂದು ಗ್ರಾಂ ಬೆಲೆ 15,535 ರೂ. ಇದೆ. ಇದೇ ಚಿನ್ನದ ಹತ್ತು ಗ್ರಾಂ ದರವು 1420 ರೂಪಾಯಿ ಹೆಚ್ಚಾಗಿದ್ದು, ಬೆಲೆಯು 1,55,350 ರೂಪಾಯಿಗೆ ಮುಟ್ಟಿದೆ.
18 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 11,651 ರೂಪಾಯಿ ಇದ್ದು, ಇವತ್ತಿಗೆ 1060 ರೂಪಾಯಿ ಹೆಚ್ಚಾಗುವ ಮೂಲಕ ಹತ್ತು ಗ್ರಾಂ ಚಿನ್ನವು 1,16,510 ರೂಪಾಯಿಗೆ ತಲುಪಿದೆ.
ನಗರವಾರು 22k 10 ಗ್ರಾಂ ಚಿನ್ನದ ದರ ಪಟ್ಟಿ
ಬೆಂಗಳೂರು: 14,240 ರೂಪಾಯಿ
ಕೇರಳ: 14,240 ರೂಪಾಯಿ
ಚೆನ್ನೈ: 14,320 ರೂಪಾಯಿ
ಮುಂಬೈ: 14,240 ರೂಪಾಯಿ
ದೆಹಲಿ: 14,255 ರೂಪಾಯಿ
ಕೊಲ್ಕತ್ತ: 14,240 ರೂಪಾಯಿ
ಹೈದರಾಬಾದ್: 14,240 ರೂಪಾಯಿ
ಪುಣೆ: 14,240 ರೂಪಾಯಿ
ಗಮನಿಸಬೇಕಾದ ಅಂಶವೆಂದರೆ ನಗರದಿಂದ ನಗರಕ್ಕೆ ಈ ಚಿನ್ನದ ಬೆಲೆಯಲ್ಲಿ ಕೊಂಚ ವ್ಯತ್ಯಾಸಗಳು ಆಗುತ್ತವೆ. ಅಲ್ಲದೇ ಜಿಎಸ್‌ಟಿ, ಮೇಕಿಂಗ್ ಶುಲ್ಕ, ವೇಸ್ಟೇಜ್ ಶುಲ್ಕದಿಂದಾಗಿ ದರದಲ್ಲಿ ಬದಲಾವಣೆ ಕಾಣಬಹುದು.












Click it and Unblock the Notifications