• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ಜೂನ್ 4ರ ದರ ಇಲ್ಲಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆ ಮತ್ತಷ್ಟು ತಗ್ಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 45,300 ರುಪಾಯಿಗೆ ಇಳಿಕೆಯಾಗಿದೆ. ಶುದ್ಧ ಚಿನ್ನವು 10 ಗ್ರಾಂ 46,500 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 400 ರುಪಾಯಿ ತಗ್ಗಿದ್ದು, 48,500 ರುಪಾಯಿ ದಾಖಲಾಗಿದೆ.

      ಚೈನ್ ಕದಿಯಲು ಮಹಿಳೆಯ ಕುತ್ತಿಗೆಗೆ ಕೈ ಹಾಕಿದ ಕಳ್ಳರು.... ನಂತರ ನಡೆದಿದ್ದೇನು? | Oneindia Kannada

      ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಹೆಚ್ಚಾದರೂ, ಒಂದು ವಾರದಲ್ಲಿ ಈಕ್ವಿಟಿಗಳು ಆರ್ಥಿಕತೆಯ ಪುನರಾರಂಭದ ಮೇಲೆ ತಮ್ಮ ಲಾಭವನ್ನು ವಿಸ್ತರಿಸಿದ್ದರಿಂದ ಅವುಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಯುಎಸ್-ಚೀನಾ ಉದ್ವಿಗ್ನತೆ ಮತ್ತು ಕೇಂದ್ರ ಬ್ಯಾಂಕುಗಳಿಂದ ಹೆಚ್ಚಿನ ಪ್ರಚೋದನೆಯ ನಿರೀಕ್ಷೆಗಳು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.

      ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

      ದೇಶದ ಪ್ರಮುಖ ನಗರಗಳ ಚಿನ್ನದ ದರ ಹೀಗಿದೆ:

      ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 250 ರುಪಾಯಿ ತಗ್ಗಿದ್ದು, 43,550 ರುಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾಂ 690 ರುಪಾಯಿ ಇಳಿಕೆಯಾಗಿದ್ದು, 47,510 ರುಪಾಯಿ ತಲುಪಿದೆ.

      ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,560 ರುಪಾಯಿ, 24 ಕ್ಯಾರೆಟ್ ಚಿನ್ನ 48,640 ರುಪಾಯಿಗೆ ತಗ್ಗಿದೆ.

      ಹೈದ್ರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,560 ರುಪಾಯಿ ಹಾಗೂ ಶುದ್ಧ ಚಿನ್ನವು 10 ಗ್ರಾಂ 48,640 ರುಪಾಯಿಗೆ ಇಳಿಕೆಯಾಗಿದೆ.

      ರಾಮನಗರ: ಹಾಡಹಗಲೇ ಮಹಿಳೆಯ ಚಿನ್ನದ ಸರ ಕದ್ದು ಪರಾರಿ

      ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,100 ರುಪಾಯಿ ಹಾಗೂ 24 ಕ್ಯಾರೆಟ್ ಚಿನ್ನ 10 ಗ್ರಾಂ 46,100 ರುಪಾಯಿಗೆ ತಗ್ಗಿದೆ.

      ಜೈಪುರದಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,300 ರುಪಾಯಿ ಹಾಗೂ ಶುದ್ಧ ಶುದ್ಧ ಚಿನ್ನವು 10 ಗ್ರಾಂ 46,500 ರುಪಾಯಿಗೆ ತಲುಪಿದೆ.

      ಚಂಡೀಗಡದಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 850 ರುಪಾಯಿ ಕಡಿಮೆಯಾಗಿದ್ದು, 45,100 ರುಪಾಯಿ ಹಾಗೂ 24 ಕ್ಯಾರೆಟ್ ಚಿನ್ನ 47,100 ರುಪಾಯಿನಷ್ಟಿದೆ.

      English summary
      Gold prices Slide on Thursday (june 4) in Indian markets. India's major cities latest rates here.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X