Gold Rate: ಚಿನ್ನದ ಬೆಲೆ ಮತ್ತೆ 20,000 ರೂಪಾಯಿ ಕುಸಿತ?
ಶನಿವಾರ ಒಂದೇ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಬರೋಬ್ಬರಿ 20,800 ರೂಪಾಯಿ ಕುಸಿಯುವ ಮೂಲಕ ಆಭರಣ ಪ್ರಿಯರಿಗೆ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಖುಷಿ ತಂದಿತ್ತು. ಈಗ ಸೋಮವಾರ ಚಿನ್ನದ ಬೆಲೆ ಮತ್ತಷ್ಟು ಕುಸಿಯುತ್ತಾ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಚುನಾವಣಾ ಫಲಿತಾಂಶದ ದಿನ 7000 ರೂಪಾಯಿ ಏರಿಕೆಯಾಗಿದ್ದ 100 ಗ್ರಾಂ ಚಿನ್ನದ ಬೆಲೆ ಬಳಿಕ ಮರುದಿನ 4000 ರೂಪಾಯಿ ಕುಸಿತ ಕಂಡಿತ್ತು. ಅದಾದ ಬಳಿಕ ಮುಂದಿನ ಎರಡು ದಿನಗಳಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 11,000 ರೂಪಾಯಿ ಕುಸಿತ ಕಂಡಿತ್ತು.

ಇದೇನಪ್ಪಾ ಚಿನ್ನದ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ ಎನ್ನುವಾಗಲೆ, ಶನಿವಾರ ಒಂದೇ ದಿನ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 20,800 ರೂಪಾಯಿ ಕುಸಿದು ಆಭರಣ ಪ್ರಿಯರು ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಸೋಮವಾರ ಕೂಡ ಕುಸಿತ
ಶನಿವಾರ ಮತ್ತು ಭಾನುವಾರ 1 ಗ್ರಾಂ ಆಭರಣ (22 ಕ್ಯಾರೆಟ್) ಚಿನ್ನದ ಬೆಲೆ 6,570 ರೂಪಾಯಿಗೆ ಮಾರಾಟವಾಗಿದೆ (100 ಗ್ರಾಂ ಬೆಲೆ 6,57,000). 1 ಗ್ರಾಂ ಶುದ್ಧ ಚಿನ್ನ (24 ಕ್ಯಾರೆಟ್) ಚಿನ್ನದ ಬೆಲೆ 7,167 ರೂಪಾಯಿಗೆ ಮಾರಾಟವಾಗಿದೆ (100 ಗ್ರಾಂಗೆ 7,16,700 ರೂಪಾಯಿ).
ಸೋಮವಾರ ಚಿನ್ನದ ಬೆಲೆ ಮತ್ತಷ್ಟು ಕುಸಿಯುತ್ತದೆ ಎಂದು ಅಂದಾಜು ಮಾಡಲಾಗಿದೆ. ಶನಿವಾರದಂತೆ ಮತ್ತೆ ಒಂದೇ ದಿನ 100 ಗ್ರಾಂ ಚಿನ್ನದ ಬೆಲೆ 20,000 ಕುಸಿತ ಕಂಡರೆ ಆಭರಣ ಪ್ರಿಯರ ಖುಷಿ ಮತ್ತಷ್ಟು ಹೆಚ್ಚಲಿದೆ.
ಆದರೆ ಚಿನ್ನದ ಬೆಲೆ ಏರಿಳಿತವನ್ನು ನಿಖರವಾಗಿ ಹೇಳಲು ಆಗದು. ಡಾಲರ್ ಮೌಲ್ಯ, ಷೇರು ಮಾರುಕಟ್ಟೆ, ರಾಜಕೀಯ ಏರಿಳಿತ ಸೇರಿದಂತೆ ಹಲವು ಅಂಶಗಳು ಚಿನ್ನದ ಬೆಲೆಯ ಏರಿಳಿತವನ್ನು ನಿರ್ಧರಿಸಲಿವೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಯೋಜಿಸುವವರು ಕೂಡ ಹೂಡಿಕೆಗೆ ಸೂಕ್ತ ಸಮಯಕ್ಕೆ ಕಾಯುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡುವುದು ಕಡಿಮೆ ರಿಸ್ಕ್ ಮತ್ತು ಗ್ಯಾರಂಟಿ ಲಾಭದಾಯಕ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ.












Click it and Unblock the Notifications