Gold Rate: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್!
Gold Rate on Aug 11: ನಿರಂತರವಾಗಿ ಕಳೆದ ವಾರ ಪೂರ್ತಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಏರಿಕೆಯ ಹಾದಿಯಲ್ಲಿತ್ತು. ಇದೀಗ ಆಗಸ್ಟ್ 11ರ ಸೋಮವಾರ ಕೊನೆಗೂ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ಇದು ಚಿನ್ನ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹುಚ್ಚು ಆರ್ಥಿಕ ನೀತಿ ಹಾಗೂ ದುಬಾರಿ ಆಮದು ವಸ್ತುಗಳ ಮೇಲೆ ತೆರಿಗೆಯಿಂದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಳವಾಗಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಆದರೆ, ಈ ನಡುವೆ ಕೇಂದ್ರ ಸರ್ಕಾರದ ಮಾಸ್ಟರ್ ಪ್ಲ್ಯಾನ್ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ವಿವರ ಇಲ್ಲಿದೆ.
ಹೌದು ಕೇಂದ್ರ ಸರ್ಕಾರವು ಅಮೆರಿಕದ ಶಾಕ್‌ನ ನಡುವೆಯೇ ಹೊಸದೊಂದು ಹಾಗೂ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಅದೇ ರಷ್ಯಾ - ಚೀನಾ ಹಾಗೂ ಭಾರತ ಒಂದಾಗುವ ಪ್ಲ್ಯಾನ್. ಆರ್ಥಿಕವಾಗಿ ಸದೃಢವಾಗಿರುವ ಈ ಮೂರು ರಾಷ್ಟ್ರಗಳು ಒಂದಾಗುತ್ತಿರುವುದು ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಭಾರತದಾದ್ಯಂತ ಚಿನ್ನದ ಬೆಲೆಯು ಸ್ಥಿರವಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಆಗಿದೆ. ಇಂದಿನ ಚಿನ್ನದ ಬೆಲೆ ಹೇಗಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.

18 ಕ್ಯಾರೆಟ್ ಚಿನ್ನದ ಬೆಲೆ: ಇನ್ನು ಆಗಸ್ಟ್ 11ರಂದು ವಿವಿಧ ಕ್ಯಾರೆಟ್‌ನ ಚಿನ್ನದ ಬೆಲೆಯು ನೆನ್ನೆಗಿಂತಲೂ ಭರ್ಜರಿ ಇಳಿಕೆ ಕಂಡಿದೆ. ಇಂದಿನ 18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಈ ರೀತ ಇದೆ.
18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,671 ರೂಪಾಯಿ ಆಗಿದೆ. ಪ್ರತಿ 10 ಗ್ರಾಂಗೆ 76,710 ರೂಪಾಯಿ ಇದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂ ಚಿನ್ನದ ಬೆಲೆಯು 57 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು ಬರೋಬ್ಬರಿ 570 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಆಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆಯು 9,375 ರೂಪಾಯಿ ಆಗಿದ್ದು. 10 ಗ್ರಾಂಗೆ 93,750 ರೂಪಾಯಿ ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಬೆಲೆ 70 ರೂಪಾಯಿ ಹಾಗೂ 10 ಗ್ರಾಂಗೆ 700 ರೂಪಾಯಿ ಇಳಿಕೆ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಭರ್ಜರಿ ಇಳಿಕೆಯಾಗಿದೆ. ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10,228 ರೂಪಾಯಿ ಹಾಗೂ 10 ಗ್ರಾಂಗೆ 1,02,280 ರೂಪಾಯಿ ಆಗಿದೆ. ಭಾನುವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂಗೆ 76 ರೂಪಾಯಿ ಹಾಗೂ 10 ಗ್ರಾಂಗೆ 760 ರೂಪಾಯಿ ಕಡಿಮೆಯಾಗಿದೆ. ಉಳಿದಂತೆ ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದಿವರಿದಿದೆ.
ಬೆಳ್ಳಿ ಬೆಲೆ: ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 117 ರೂಪಾಯಿ ಹಾಗೂ ಒಂದು ಕೆ.ಜಿಗೆ 1,17,000 ಸಾವಿರ ರೂಪಾಯಿ ಆಗಿದೆ.












Click it and Unblock the Notifications