Gold Price: ಬೆಲೆ ₹1 ಲಕ್ಷ ಮುಟ್ಟಿದರೂ ಚಿನ್ನದ ಬುಕ್ಕಿಂಗ್ ಹೆಚ್ಚಳ, ₹2000 ಕೋಟಿ ವಹೀವಾಟು ನಿರೀಕ್ಷೆ
ಬೆಂಗಳೂರು, ಏಪ್ರಿಲ್ 27: ಚಿನ್ನದ ಗ್ರಾಹಕರಿಗೆ ಅದರ ದರ ಶಾಕ್ ನೀಡಿದ್ದರೂ ಸಹಿತ ಖರೀದಿ, ಬುಕ್ಕಿಂಗ್ ಭರಾಟೆ ಜೋರಾಗಿದೆ. ಅಕ್ಷಯ ತೃತೀಯಾ (ಏಪ್ರಿಲ್ 30) ಹಬ್ಬಕ್ಕೂ ಮೊದಲೇ ಚಿನ್ನ ಬುಕ್ಕಿಂಗ್ ಪ್ರಮಾಣ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ದರ ಏರಿಕೆ ಪ್ರಮಾಣವು ಏರಿಕೆ ಆಗಿದೆ. ಜನರು ಹೂಡಿಕೆಯ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ.
ಈ ಹಿಂದೆ ಒಂದು ಗ್ರಾಂ ಚಿನ್ನದ ಬೆಲೆಯು ಪ್ರತಿ ವರ್ಷಕ್ಕೆ ಚಿನ್ನದ ದರವು 50ರಿಂದ 100 ರೂಪಾಯಿ ಹೆಚ್ಚಾಗುತ್ತಿತ್ತು. ಇದೀಗ ಪ್ರತಿ ವರ್ಷಕ್ಕೆ 8000 ರಿಂದ 10000 ರೂಪಾಯಿಯಷ್ಟು ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಮತ್ತಷ್ಟು ಹೆಚ್ಚಳ ಸಾಧ್ಯತೆ ಇರುವ ಕಾರಣ ಅಕ್ಷಯ ತೃತೀಯ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯ ಜನರು ಖರೀದಿಗೆ ಬುಕ್ಕಿಂಗ್ ಮಾಡಿದ್ದಾರೆ. ಈ ಪ್ರಮಾಣ ಹಿಂದಿನ ವರ್ಷದ ಹಬ್ಬದ ಸಂದರ್ಭಕ್ಕಿಂತ ಶೇಕಡಾ 10 ರಷ್ಟು ಹೆಚ್ಚಾಗಿದೆ ಎಂದು ವರದಿ ಆಗಿದೆ.

ಮುಂಗಡ ಅಧಿಕ ಬುಕ್ಕಿಂಗ್, 2000 ಕೋಟಿ ರೂ. ವಹೀವಾಟು..
ಅಕ್ಷಯ ತೃತಿಯಾಗೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಚಿನ್ನ ವಹೀವಾಟು ನಡೆಯುವ ನಿರೀಕ್ಷೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಸುಮಾರು ಎರಡು ವಾರಗಳ ಮೊದಲೇ ಅಕ್ಷಯ ತೃತೀಯ ಹಬ್ಬಕ್ಕೆ ಮುಂಗಡ ಚಿನ್ನ ಬುಕ್ಕಿಂಗ್ ಮಾಡಲಾಗಿದೆ. ಲಾಭದ ಹೂಡಿಕೆ ಹಿನ್ನೆಲೆಯ ಚಿನ್ನ ಖರೀದಿ ಏರಿಕೆ ಆಗಿದೆ ಎಂದು ತಿಳಿಸಲಾಗಿದೆ.
ಭಾರತದ ಸೇರಿದಂತೆ ವಿವಿಧ ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಭಾರತದಲ್ಲಿ ವಿವಿಧ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಈ ಬಾರಿ ಹಬ್ಬಕ್ಕೆ 2000 ಕೋಟಿ ರೂಪಾಯಿ ವಹೀವಾಟು ನಡೆಯುವ ಸಾಧ್ಯತೆ ಇದೆ ಎಂದು ಚಿನ್ನಾಭರತ ವರ್ತಕರ ಸಂಘಗಳು ತಿಳಿಸಿವೆ.
{embed-poll}
ಈ ಬಾರಿ ಧರಿಸುವ ಚಿನ್ನದ ಆಭರಣಗಳ ಜೊತೆಗೆ ಲಕ್ಷ್ಮೀ, ಗಣಪ, ಬಾಲರಾಮ ಹೀಗೆ ವಿವಿಧ ಪೆಂಡೆಂಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಖರೀದಿಯು ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ. ಒಂದು ಲಕ್ಷ ರೂಪಾಯಿ ಆಸು ಪಾಸಿನಲ್ಲಿದೆ. ಮತ್ತೆ ಬೆಲೆ ಹೆಚ್ಚಾದರೂ ಅಚ್ಚರಿ ಇಲ್ಲ. ಸದ್ಯಕ್ಕೆ ಚಿನ್ನದ ದರ ಇಳಿಕೆ ಆಗುವ ಲಕ್ಷಣಗಳು ಇಲ್ಲ. ಯಾವುದರ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಚಿನ್ನದ ಬೆಲೆ ಮತ್ತೆ ಏರಿಕೆ ಆಗುತ್ತಾ..?
ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ಸುಂಕ ನೀತಿ, ಇತರ ಕಾರಣಗಳಿಂದಾಗಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಚಿನ್ನದ ಬೆಲೆ 1 ಲಕ್ಷ ರೂಪಾಯಿ ಏರಿಕೆ ಆಗುತ್ತಿದ್ದಂತೆ ಈವರೆಗೆ ಹೂಡಿಕೆ ಮತ್ತು ಲಾಭ ದೃಷ್ಟಿಯಿಂದ ಚಿನ್ನ ಖರೀದಿಸಿದ್ದ ಇಲ್ಲವೇ ಹೂಡಿಕೆ ಮಾಡಿದ್ದ ಹೂಡಿಕೆದಾರರು ದಿಢೀರನೇ ಮಾರಾಟಕ್ಕೆ ಮುಂದಾದರು. ಹೀಗಾಗಿ ಚಿನ್ನದ ದರದಲ್ಲಿ ಕೊಂಚ ಇಳಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿಯಲಿದೆ. ಮದುವೆ ಸೀಸನ್ ಆಗಿರುವ ಚಿನ್ನಕ್ಕೆ ಬೇಡಿಕೆ ಸಾಮಾನ್ಯವಾಗಿ ಇದ್ದೆ ಇರುತ್ತದೆ. ಗ್ರಾಹಕರು ಸದ್ಯ ಚಿನ್ನ ಖರೀದಿಸಬೇಕೋ ಬೇಡವೋ? ಎಂಬ ಗೊಂದಲದಲ್ಲಿದ್ದಾರೆ. ಕೆಲವರು ಚಿನ್ನದ ಬೆಲೆ ಇಳಿಕೆಗೆ ಕಾಯುತ್ತಿದ್ದಾರೆ.












Click it and Unblock the Notifications