Gold Price On November 29: ಚಿನ್ನ ಖರೀದಿದಾರರಿಗೆ ಅದೃಷ್ಟ ಖುಲಾಯಿಸಿತೇ? ಇಂದಿನ ದರ ವಿವರ ಇಲ್ಲಿದೆ
ಚಿನ್ನವು ದಿನೇ ದಿನೇ ದುಬಾರಿಯಾಗುತ್ತಲೇ ಇದೆ. ಶುಕ್ರವಾರ ಕೂಡ ಚಿನ್ನದ ಬೆಲೆಗಳಲ್ಲಿ ಭಾರೀ ಏರಿಕೆ ಕಾಣುವ ಮೂಲಕ ಖರೀದಿದಾರರನ್ನು ಕಂಗಾಲಾಗುವಂತೆ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದಲೂ ಚಿನ್ನದ ದರಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ನವೆಂಬರ್ 29ರ ಶನಿವಾರವಾದ ಈ ದಿನದಂದು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಇಂದು ಕೂಡ ಚಿನ್ನದ ಬೆಲೆಗಳು ಮತ್ತೆ ಏರಿಕೆ ಕಂಡಿವೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,982, 22 ಕ್ಯಾರೆಟ್ ಚಿನ್ನಕ್ಕೆ ₹11,900 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,737 ದರ ಇದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ₹12,982 ಇದ್ದು, ಬರೋಬ್ಬರಿ ₹136 ಏರಿಕೆಯಾಗಿದೆ. 8 ಗ್ರಾಂ ಚಿನ್ನದ ದರ ₹1,03,856, 10 ಗ್ರಾಂ.ಚಿನ್ನದ ದರ ₹1,29,820, 100 ಗ್ರಾಂ ಚಿನ್ನದ ದರ ₹12,98,200 ಇದ್ದು, ₹13,600 ಹೆಚ್ಚಾಗಿದೆ.

22 ಕ್ಯಾರೆಟ್ ಚಿನ್ನವು ಒಂದು ಗ್ರಾಂ.ಗೆ ₹11,900 ಆಗಿದ್ದು, ₹125 ಹೆಚ್ಚಾಗಿದೆ. 8 ಗ್ರಾಂ ಚಿನ್ನದ ದರ ₹95,200, 10 ಗ್ರಾಂ ಚಿನ್ನದ ದರ ₹1,19,000 ಹಾಗೂ 100 ಗ್ರಾಂ ಚಿನ್ನದ ದರವು ₹11,90,000 ಆಗಿದೆ. 18 ಕ್ಯಾರೆಟ್ ಚಿನ್ನಕ್ಕೆ ಒಂದು ಗ್ರಾಂಗೆ ₹9,737 ಇದ್ದು, ಗ್ರಾಂ ಮೇಲೆ ₹103 ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ದರವು ₹77,896, 10 ಗ್ರಾಂ ಚಿನ್ನದ ದರ ₹97,370, 100 ಗ್ರಾಂ ಚಿನ್ನದ ದರ ₹9,73,700 ಇದ್ದು ನಿನ್ನೆಗಿಂತ ₹10,300 ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ದರಗಳು ಏರುತ್ತಲೇ ಇವೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ನವೆಂಬರ್ 29, ₹12,982 ; ₹11,900
ನವೆಂಬರ್ 28, ₹12,846 ; ₹11,775
ನವೆಂಬರ್ 27, ₹12,775 ; ₹11,710
ನವೆಂಬರ್ 26, ₹12,791 ; ₹11,725
ನವೆಂಬರ್ 25, ₹12,704 ; ₹11,645
ನವೆಂಬರ್ 24, ₹12,513 ; ₹11,470
ನವೆಂಬರ್ 23, ₹12,584 ; ₹11,535
ನವೆಂಬರ್ 22, ₹12,584 ; ₹11,535
ನವೆಂಬರ್ 21, ₹12,398 ; ₹11,365
ನವೆಂಬರ್ 20, ₹12,426 ; ₹11,390
ಬೆಳ್ಳಿ ದರವೂ ಏರಿಕೆ
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹185 ಮತ್ತು ಪ್ರತಿ ಕಿಲೋಗ್ರಾಂಗೆ ₹1,85,000 ಆಗಿದೆ. ಗ್ರಾಂ ಮೇಲೆ 9 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹4,753 ಮತ್ತು 10 ಗ್ರಾಂಗೆ ₹47,530 ಆಗಿದೆ. ನಿನ್ನೆಗಿಂತ ಗ್ರಾಂ ಮೇಲೆ 33 ರೂಪಾಯಿ ಏರಿಕೆ ಕಂಡಿದೆ. ಮುಂದಿನ ವಾರದ ವೇಳೆಗೆ ದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications