Gold Rate Today: ಭಾರೀ ಏರಿಕೆ ಕಂಡ ಚಿನ್ನದ ದರ, ಬೆಂಗಳೂರಿನಲ್ಲಿ ಇಂದು ಎಷ್ಟಿದೆ?
ಚಿನ್ನದ ದರ ಹಾವು ಏಣಿ ಆಟ ಆಡುತ್ತಿದೆ. ಕಳೆದ ವಾರ ನಿರಂತರವಾಗಿ ಏರಿಕೆ ಕಂಡು, ನಿನ್ನೆ ದಿಢೀರನೆ ಇಳಿಕೆಯಾಗಿದ್ದ ಚಿನ್ನದ ದರವು ಇಂದು ಮತ್ತೆ ಹೆಚ್ಚಳ ಕಂಡಿದೆ. ಮತ್ತೆ ಚಿನ್ನದ ದರ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ನಿನ್ನೆಯ ದರಕ್ಕೂ ಇಂದಿನ ದರಕ್ಕೂ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದ್ದು, ಚಿನ್ನಾಭರಣಪ್ರಿಯರಿಗೆ ಬೇಸರ ತರಿಸಿದೆ. ಇನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರದ ವಿವರ ಇಲ್ಲಿದೆ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ನೋಡುವುದಾದರೆ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 9,868 ರೂಪಾಯಿಗೆ ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನವು ಗ್ರಾಂಗೆ 9,045 ರೂಪಾಯಿ ಆಗಿದೆ. ಉಳಿದಂತೆ 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 7,401 ರೂಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ.ಗೆ 9,045 ರೂಪಾಯಿ ಆಗಿದೆ. ನಿನ್ನೆಗಿಂತ ಗ್ರಾಂ ಮೇಲೆ 30 ರೂಪಾಯಿ ಏರಿಕೆ ಕಂಡಿದೆ. 8 ಗ್ರಾಂ.ಚಿನ್ನವು 72,360 ರೂಪಾಯಿ, 10 ಗ್ರಾಂ ಚಿನ್ನವು 90,450 ರೂಪಾಯಿ ಹಾಗು 100 ಗ್ರಾಂ.ಚಿನ್ನವು 9,04,500 ರೂಪಾಯಿಗೆ ಏರಿದೆ. ಶುಕ್ರವಾರ ಹೋಲಿಸಿದರೆ ಇಂದು ಬರೋಬ್ಬರಿ 3,000 ರೂಪಾಯಿ ಏರಿಕೆ ಕಂಡಿದೆ.
ಇಂದಿನ 24 ಕ್ಯಾರೆಟ್ ಚಿನ್ನದ ದರ ಗ್ರಾಂ.ಗೆ 9,868 ರೂಪಾಯಿ ಆಗಿದ್ದು, ನಿನ್ನೆಗಿಂತ ಗ್ರಾಂ.ಗೆ 33 ರೂಪಾಯಿ ಏರಿದೆ. 8 ಗ್ರಾಂ ಚಿನ್ನವು 78,944 ರೂಪಾಯಿ, 10 ಗ್ರಾಂ ಚಿನ್ನವು 98,680 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 9,86,800 ರೂಪಾಯಿ ಆಗಿದೆ. ಬರೋಬ್ಬರಿ 3,300 ರೂಪಾಯಿ ಒಂದೇ ದಿನಕ್ಕೆ ಜಿಗಿದಿದೆ.

18 ಕ್ಯಾರೆಟ್ ಚಿನ್ನವು ಗ್ರಾಂ.ಗೆ 7,401 ರೂಪಾಯಿ ಆಗಿದ್ದು, ಪ್ರತಿ ಗ್ರಾಂ ಮೇಲೆ 25 ರೂಪಾಯಿ ಹೆಚ್ಚಾಗಿದೆ. 8 ಗ್ರಾಂ.ಗೆ 59,208 ರೂಪಾಯಿ, 10 ಗ್ರಾಂ.ಗೆ 74,010 ರೂಪಾಯಿ ಹಾಗು 100 ಗ್ರಾಂ.ಗೆ 7,40,100 ರೂಪಾಯಿಗೆ ಏರಿದೆ. ನಿನ್ನೆ ದರಕ್ಕಿಂತ 2,500 ರೂಪಾಯಿ ಹೆಚ್ಚಾಗಿದೆ.
ಮೇ ತಿಂಗಳ ಚಿನ್ನದ ದರಪಟ್ಟಿ (ಪ್ರತಿ ಗ್ರಾಂ.ಗೆ)
ಮೇ 10: ₹9,045 ; ₹9,868
ಮೇ 9: ₹9,015 ; ₹9,835
ಮೇ 8: ₹9,130 ; ₹9,960
ಮೇ 7: ₹9,075 ; ₹9,900
ಮೇ 6: ₹9,025 ; ₹9,846
ಮೇ 5: ₹8,775 ; ₹9,573
ಮೇ 4: ₹8,755 ; ₹9,551
ಮೇ 3: ₹8,755 ; ₹9,551
ಮೇ 2: ₹8,755 ; ₹9,551
ಮೇ 1: ₹8,775 ; ₹9,573
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 99 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ 99,000 ರೂಪಾಯಿ ಆಗಿದೆ. ಇಂದು ಪ್ಲಾಟಿನಂ ದರ ಕೂಡ ಏರಿದ್ದು, ಪ್ರತಿ ಗ್ರಾಂಗೆ 2,712 ರೂಪಾಯಿ ಹಾಗೂ 10 ಗ್ರಾಂ.ಗೆ 27,120 ರೂಪಾಯಿ ಆಗಿದೆ.












Click it and Unblock the Notifications