Gold Price Today: ಗಗನಕ್ಕೇರಿದೆ ಹಳದಿ ಲೋಹದ ಬೆಲೆ, ಕೊಳ್ಳುವ ಮುನ್ನ ಇರಲಿ ಜೇಬಿನ ಬಗ್ಗೆ ಗಮನ!
ಬೆಳ್ಳಿ ಬಂಗಾರ ಭಾರತೀಯರ ಎಲ್ಲಾ ಶುಭ ಸಮಾರಂಭಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಕಳೆದ ವರ್ಷದಿಂದ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದ್ದು, ಈಗಾಗಲೇ ಆರು ಸಾವಿರದ ಗಡಿ ದಾಟಿದೆ. ಇದೆ ಸಮಯದಲ್ಲಿ ಮತ್ತೊಂದು ಬೇಸರದ ಸುದ್ದಿ ಹೊಬಿದ್ದಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಮಾರ್ಚ್ 21, 2024 ರಂದು ರೂ.1090 ಏರಿಕೆಯಾಗಿದೆ.
ಹೌದು... ದಿನ ಕಳೆದಂತೆ ಬಂಗಾರ ಬಲು ದುಬಾರಿಯಾಗುತ್ತಿದೆ. ಯುಎಸ್ ಫೆಡರಲ್ ರಿಸರ್ವ್ 5.25-5.5% ನಲ್ಲಿ ಸ್ಥಿರವಾದ ಬಡ್ಡಿದರವನ್ನು ಕಾಯ್ದುಕೊಳ್ಳುವ ನಿರ್ಧಾರ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಮಿಶ್ರ ಪ್ರವೃತ್ತಿ ನಂತರ ಮಾರ್ಚ್ 21 ರಂದು ಭಾರತದಲ್ಲಿ ಚಿನ್ನದ ಬೆಲೆಗಳು ಭಾರಿ ಜಿಗಿತ ಕಂಡಿವೆ. ಗುರುವಾರ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆಯನ್ನು ದಾಖಲಿಸಿವೆ.

10 ಗ್ರಾಂ 22K ಚಿನ್ನದ ಬೆಲೆ 61,800 ರೂಪಾಯಿಗೆ ಏರಿಕೆಯಾಗಿದೆ ಮತ್ತು 10 ಗ್ರಾಂ 24K ಹಳದಿ ಲೋಹದ ಬೆಲೆಯು ಮಾರ್ಚ್ 21, 2024 ರಂದು 1090 ರೂ. ಏರಿಕೆ ಕಂಡು 67,420 ರೂಪಾಯಿಗೆ ಕ್ಕೆ ತಲುಪಿದೆ. ಈಗ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6,18,000 ರೂಪಾಯಿ. 100 ಗ್ರಾಂ 24 ಕ್ಯಾರೆಟ್ ಹಳದಿ ಲೋಹದ ಬೆಲೆ 6,74,200 ರೂಪಾಯಿಯಾಗಿದೆ. ಇದಲ್ಲದೆ ಮಾರ್ಚ್ 21 ರಂದು ಬೆಳ್ಳಿ ಬೆಲೆಯಲ್ಲಿಯೂ ತೀವ್ರ ಏರಿಕೆಯಾಗಿದೆ.
ಮಾರ್ಚ್ 21, 2024 ರಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆಗಳು
ಬೆಂಗಳೂರು: ಮಾರ್ಚ್ 21 ರಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 61,900 ರೂ. ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 69,065 ರೂಪಾಯಿ ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ 75,400 ರೂಪಾಯಿ.

ಚೆನ್ನೈ: ಮಾರ್ಚ್ 21 ರಂದು ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 62,350 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 68,020 ರೂಪಾಯಿ ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ 81,500 ರೂಪಾಯಿ.
ಮುಂಬೈ: ಮಾರ್ಚ್ 21 ರಂದು ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 61,800 ರೂಪಾಯಿ ಮತ್ತು 24 ಕ್ಯಾರೆಟ್ ಹಳದಿ ಲೋಹದ 10 ಗ್ರಾಂ ಬೆಲೆ 67,420 ರೂಪಾಯಿ. ಬೆಳ್ಳಿ ಪ್ರತಿ ಕೆಜಿಗೆ 78,500 ರೂಪಾಯಿ.
ನವದೆಹಲಿ: ಮಾರ್ಚ್ 21 ರಂದು ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆ 61,950 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 67,420 ರೂಪಾಯಿ. ಬೆಳ್ಳಿ ಪ್ರತಿ ಕೆಜಿಗೆ 78,500 ರೂಪಾಯಿ.
ಕೋಲ್ಕತ್ತಾ: ಮಾರ್ಚ್ 21, 2024 ರಂದು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆ 61,800 ರೂ ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,330 ರೂಪಾಯಿಯಿದೆ. ಬೆಳ್ಳಿ ಪ್ರತಿ ಕೆಜಿಗೆ 78,500 ರೂಪಾಯಿ.












Click it and Unblock the Notifications