Gold Price Today: ಇಂದು ಚಿನ್ನದ ಬೆಲೆ ₹1 ಲಕ್ಷ ಗಡಿಯತ್ತ..! ಬಂಗಾರದ ದರ 2700 ರೂ.ಹೆಚ್ಚಳ
ಬೆಂಗಳೂರು, ಏಪ್ರಿಲ್ 18: ಭಾರತ ದೇಶದಲ್ಲಿ ಚಿನ್ನದ ಬೆಲೆಯಷ್ಟು ವೇಗವಾಗಿ ಮತ್ತ್ಯಾವ ವಸ್ತುಗಳ ಬೆಲೆಗಳು ಏರಿಕೆ ಆಗಿಲ್ಲ. ಅಷ್ಟರ ಮಟ್ಟಿಗೆ ತನ್ನಷ್ಟಕ್ಕೆ ತಾನೇ ಪೈಪೋಟಿ ಬಿದ್ದಂತೆ ಬಂಗಾರದ ದರ ರಾಕೇಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ಬೇಡಿಕೆ ಮಾತ್ರ ಇಳಿಕೆ ಆಗಿಲ್ಲ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಒಂದು ವರ್ಷದ ಹಿಂದೆ ಹೆಚ್ಚಾಗಿತ್ತು. ಅದಾದ ಬಳಿಕ ಈ ವರ್ಷ ಏಪ್ರಿಲ್‌ನಲ್ಲಿ ಕಳೆದ ಕೆಲವು ದಿನಗಳಿಂದ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಇಂದು ಏಪ್ರಿಲ್ 18ರಂದು ಶುಕ್ರವಾರ 22 ಕ್ಯಾರಟ್ 2500 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನಕ್ಕೆ 2700 ರೂಪಾಯಿ ಏರಿಕೆ ಆಗಿದೆ. ಚಿನ್ನ ದರ 1 ಲಕ್ಷ ರೂಪಾಯಿ ಮುಟ್ಟಲು ಕೆಲವೇ ದಿನಗಳು ಬಾಕಿ ಇದ್ದಂತಿದೆ.
ಚಿನ್ನದ ಬೆಲೆ ದಿಢೀರ್ ಏರುಗತಿ ಕಾಣಲು ಇತ್ತೀಚೆಗೆ ಜಾರಿಗೆ ತಂದ ಅಮೆರಿಕ ದೇಶದ ಹೊಸ ಸುಂಕ ನೀತಿ ಹಾಗೂ ದೇಶಗಳ ನಡುವಿನ ಯುದ್ಧವು ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಭಾರತದಲ್ಲಿ ಪ್ರತಿ ಹಬ್ಬಕ್ಕೆ, ಸಮಾರಂಭಗಳಿಗೆ, ಮದುವೆ, ವಾರ್ಷಿಕೋತ್ಸವಗಳಿಗೆ ಚಿನ್ನ ಖರೀದಿ ಆಗುತ್ತಲೇ ಇದೆ. ಚಿನ್ನಕ್ಕೆಂದು ಹಣ ಎತ್ತಿಟ್ಟು ಕೊಂಡು ಧರಿಸುವವರ ಸಂಖ್ಯೆ ಭಾರತದಲ್ಲಿ ಸಾಕಷ್ಟಿದೆ. ಸದ್ಯ ಚಿನ್ನದ ಬೆಲೆ ಕೇಳಿದರೆ ಖರೀದಿಸಬೇಕೋ? ಬೇಡವೋ ಎಂದು ಚಿಂತೆ ಗ್ರಾಹಕರನ್ನು ಕಾಡುತ್ತಿದೆ. ಏಕೆಂದರೆ 01 ಲಕ್ಷ ರೂಪಾಯಿ ಸಮೀಪದಲ್ಲಿರುವ ಚಿನ್ನದ ದರ, ಮುಂದಿನ ದಿನಗಳಲ್ಲಿ ದಿಢೀರ್ 50,000 ರೂಪಾಯಿ ಇಳಿಕೆ ಅಗಬಹುದು ಅಂತಲೂ ಅಂದಾಜಿಸಲಾಗಿದೆ.

ಬೆಂಗಳೂರು ಮತ್ತು ಕರ್ನಾಟಕ ಸೇರಿದಂತೆ ಭಾರತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 18) 22 ಕ್ಯಾರಟ್ ಹತ್ತು ಗ್ರಾಂ ಚಿನ್ನಕ್ಕೆ 250 ರೂಪಾಯಿ ಹೆಚ್ಚಳವಾಗಿದೆ. ಈ ಚಿನ್ನಕ್ಕೆ ಇದೇ ವಾರ ಎರಡು ದಿನಗಳ ಹಿಂದೆ ನಿರಂತರವಾಗಿ 200 ರೂ. ಏರಿಕೆ ಕಂಡಿತ್ತು. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 89,450 ರೂಪಾಯಿ ಇದೆ.
Bengaluru Real Estate: ನಮ್ಮ ಮೆಟ್ರೋ ಸಾಗುವ ಈ ಭಾಗಗಳಲ್ಲಿ ಆಸ್ತಿ ಮೌಲ್ಯ, ಮನೆ ಬಾಡಿಗೆ ಭಾರೀ ಹೆಚ್ಚಳ
24 ಕ್ಯಾರಟ್ನ ಹತ್ತು ಗ್ರಾಂ ಚಿನ್ನಕ್ಕೆ 270 ರೂಪಾಯಿಗೆ ಹೆಚ್ಚಾಗಿದೆ. 24 ಕ್ಯಾರಟ್‌ನ 10 ಗ್ರಾಂ ಬೆಲೆ 97,580 ನಷ್ಟಕ್ಕೆ ಹೆಚ್ಚಾಗಿದೆ. ಇನ್ನೂ ಬೆಳ್ಳಿ ದರ ನೆನ್ನೆಗೆ ಹೋಲಿಕೆ ಮಾಡಿದರೆ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ 100 ಗ್ರಾಂ ಗೆ 10,000 ರೂ. ದರವಿದೆ. ಚಿನ್ನದ ಷೇರುಗಳ ಬೆಲೆಯು ಕೊಂಚ ಏರಿಕೆ ಆಗಿದೆ ಎಂದು ವರದಿ ಆಗಿದೆ.

ಚಿನ್ನದ ದರ ₹2700 ಏರಿಕೆ, ಶೀಘ್ರವೇ ₹01 ಲಕ್ಷ ತಲುಪುತ್ತೆ..
ಹೌದು 100 ಗ್ರಾಂ 22 ಕ್ಯಾರಟ್ ಚಿನ್ನವು ಭಾರತದ ಮಾರುಕಟ್ಟೆಯಲ್ಲಿ ಇಂದು 2500 ರೂಪಾಯಿ ಹೆಚ್ಚಿಸಿಕೊಂಡಿದೆ. ಇತ್ತ 24 ಕ್ಯಾರಟ್ 100 ಚಿನ್ನದ ಬೆಲೆಯು 2700 ರೂಪಾಯಿಗೆ ಏರಿಕೆ ಕಂಡಿದೆ. ಡೊನಾಲ್ಡ್ ಟ್ರಂಪ್ ನೀತಿ ಹೀಗೆ ಕೆಲವು ಕಾರಣಗಳಿಂದ ಚಿನ್ನಕ್ಕೆ ಬೆಲೆ ಏರಿಕೆ ಆದರೂ ಸಹಿತ ಅದರ ಖರೀದಿ, ಬೇಡಿಕೆ ಇಳಿಕೆ ಆಗಿಲ್ಲ. ಇದೆಲ್ಲ ನೋಡಿದರೆ ಇನ್ನೊಂದು ತಿಂಗಳಲ್ಲಿ ಚಿನ್ನದ ದರ 1 ಲಕ್ಷ ರೂಪಾಯಿ ತಲುಪುವುದರದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ.
ಚಿನ್ನದ ಬೆಲೆ 50 ಸಾವಿರ ರೂ.ಕುಸಿಯುತ್ತೆ? ಇದು ನಿಜವೇ?
ಹೌದು, ಚಿನ್ನದ ಬೆಲೆ ಈಗಿರುವ ಬೆಲೆಯ ಅರ್ಧದಷ್ಟು ಕುಸಿಯಲಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಅಮೆರಿಕಾದಲ್ಲಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ತಮ್ಮಲ್ಲಿರುವ ಎಲ್ಲ ಚಿನ್ನದ ಸಂಗ್ರಹವನ್ನು ಮಾರಾಟ ಮಾಡುವುದಾಗಿ, ಸಾಕಷ್ಟು ಬಿಟ್ ಕಾಯಿನ್ ಖರೀದಿಸುವುದಾಗಿ ಹೇಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನ ಏಕಾಎಕಿ ಮಾರುಕಟ್ಟೆ ಪ್ರವೇಶಿಸಿದರೆ ಅದರ ಬೆಲೆ ಕಡಿಮೆ ಆಗುತ್ತದೆ. ಆಗ 45 ರಿಂದ 50 ಸಾವಿರ ರೂಪಾಯಿಗೆ 10 ಗ್ರಾಂ ಚಿನ್ನ ಸಿಗುವ ಸಾಧ್ಯತೆ ಇದೆ. ಹೀಗಾಗಿ ಕೆಲವರು ಚಿನ್ನದ ದರ ಇಳಿಕೆ ಆದ ಮೇಲೆಯೇ ಖರೀದಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.

ದೇಶದ ವಿವಿಧ ನಗರಗಳ ಚಿನ್ನದ ಬೆಲೆ ಪಟ್ಟಿ (22 ಕ್ಯಾರಟ್ 10 ಗ್ರಾಂ)
ಬೆಂಗಳೂರು- 89,450 ರೂಪಾಯಿ
ದೆಹಲಿ - 89,600 ರೂಪಾಯಿ
ಮುಂಬೈ - 89,450 ರೂಪಾಯಿ
ಚೆನ್ನೈ - 89,450 ರೂಪಾಯಿ
ಜೈಪುರ - 89,600 ರೂಪಾಯಿ
ಕೋಲ್ಕತ್ತಾ - 89,450 ರೂಪಾಯಿ
ಕೇರಳ ನಗರ - 89,450 ರೂಪಾಯಿ
ಅಹಮದಾಬಾದ್ - 89,500 ರೂಪಾಯಿ












Click it and Unblock the Notifications