Gold Price: ಒಂದೇ ದಿನ ಚಿನ್ನದ ಬೆಲೆ ದಾಖಲೆಯ ಹೆಚ್ಚಳ, ಶೀಘ್ರವೇ ₹1.20 ಲಕ್ಷಕ್ಕೆ ಏರಿಕೆ ನಿರೀಕ್ಷೆ

ಒಂದೇ ದಿನಕ್ಕೆ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿದೆ. ನೆನ್ನೆ ಗರಿಷ್ಠ ಪ್ರಮಾಣದಲ್ಲಿ ಇಳಿಕೆ ಆಗಿದ್ದ ಬಂಗಾರದ ದರವು ಇಂದು ಇಳಿಕೆಗಿಂತಲೂ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ದಸರಾ ಹಬ್ಬಕ್ಕು ಮುನ್ನ ಚಿನ್ನದ ಬೆಲೆ ಏರಿಕೆ ಆಘಾತ ಕೊಡುವ ಮುನ್ಸೂಚನೆ ನೀಡಿದೆ. ಈಗಾಗಲೇ ನಿರಂತರವಾಗಿ 13 ತಿಂಗಳಿನಿಂದ ಹೆಚ್ಚಾಗುತ್ತಿರುವ ದರ ಮತ್ತೆ ತನ್ನ ಏರುಗತಿಯ ಓಟ ಮುಂದುವರಿಸಿದೆ.

ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ಇಂದು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಆಗಿದೆ. 22 ಕ್ಯಾರಟ್ ಚಿನ್ನ 10 ಗ್ರಾಂಗೆ ಬರೋಬ್ಬರಿ 1,250 ರೂಪಾಯಿ ಹೆಚ್ಚಾಗಿದ್ದು, ಇಂದು 1,01,100 ರೂಪಾಯಿ ದರವಿದೆ. ಇತ್ತ 24 ಕ್ಯಾರಟ್ ಬಂಗಾರದ ದರವು 10 ಗ್ರಾಂ 1,360 ರೂಪಾಯಿ ಏರಿಕೆ ಆಗಿದ್ದು, ಇಂದು ಅದರ ಬೆಲೆ 1,10,290 ರೂಪಾಯಿ ಇದೆ.

Gold Price Surges on September 09 May Touch Rs 1 20 Lakh by Year-End 2025

ಬಂಗಾರದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಮೊದಲು 24 ಕ್ಯಾರಟ್ ಚಿನ್ನ ಮಾತ್ರ ಒಂದು ಲಕ್ಷ ರೂಪಾಯಿ ದಾಟಿತ್ತು. ಇದೀಗ ಆಭರಣ ಚಿನ್ನ 22 ಕ್ಯಾರಟ್ ಬಂಗಾರವು ಸಹ ಒಂದು ಲಕ್ಷ ರೂಪಾಯಿ ದಾಟಿದೆ. ಇನ್ನೂ ಬೆಳ್ಳಿ ದರ 100 ಗ್ರಾಂಗೆ 12,700 ರೂಪಾಯಿಯಿಂದ ₹13,000 ಕ್ಕೆ ಹೆಚ್ಚಾಗಿದ್ದು, ಒಂದೇ ದಿನಕ್ಕೆ 300 ರೂ. ಹೆಚ್ಚಿಸಿಕೊಂಡಿದೆ. ಒಂದು ಕೆ.ಜಿ, ಬೆಳ್ಳಿಗೆ ಬರೋಬ್ಬರಿ 3000 ರೂಪಾಯಿ ಏರಿಕೆ ಆಗಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.

ಚಿನ್ನದ 10 ಗ್ರಾಂ ದರವು ₹1.20 ಲಕ್ಷಕ್ಕೆ ಏರಿಕೆ?

ಇತ್ತೀಚೆಗೆ ಚಿನ್ನದ ಬೆಲೆ ನಿರಂತರ ಇಳಿಕೆ ಕಂಡರು ಸಹಿತ, ಕಡಿಮೆಯಾಗಿದ್ದಕ್ಕಿಂತ ಒಂದೇ ಬಾರಿಗೆ ದಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಳವಾಗುವ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದು ಹೀಗೆ ಮುಂದುವರಿದರೆ ಇದೇ ವರ್ಷಾಂತ್ಯಕ್ಕೆ ಅಂದರೆ 2025 ಡಿಸೆಂಬರ್ ಹೊತ್ತಿಗೆ ಚಿನ್ನದ 10 ಗ್ರಾಂ ದರವು 1.20ಲಕ್ಷಕ್ಕೆ ರೂ.ಗೆ ಹೆಚ್ಚಾದರೂ ಆಗಬಹುದೆಂದು ಊಹಿಸಲಾಗುತ್ತಿದೆ. ಸದ್ಯ ನಗರವಾರು ಚಿನ್ನದ ಮಾಹಿತಿ ಇಲ್ಲಿದೆ.

ಇಂದಿನ 24k ಚಿನ್ನದ ಬೆಲೆ ಪಟ್ಟ (10 ಗ್ರಾಂ) ದರಪಟ್ಟಿ

* ಬೆಂಗಳೂರು- ₹1,10,290

* ದೆಹಲಿ- ₹1,09,150

* ಹೈದರಾಬಾದ್- ₹1,09,510

* ಕೋಲ್ಕತ್ತಾ- ₹1,09,200

* ಅಹಮದಾಬಾದ್ -₹1,09,490

* ಚೆನ್ನೈ -₹1,09,660

* ಪುಣೆ -₹1,09,340

* ಸೂರತ್- ₹1,09,490

* ಮುಂಬೈ- ₹1,09,340

ಇಂದಿನ 22k (10 ಗ್ರಾಂ) ಬಂಗಾರದ ಬೆಲೆ ಪಟ್ಟಿ

* ಮುಂಬೈ- ₹1,10,290

* ದೆಹಲಿ- ₹1,00,054.2

* ಬೆಂಗಳೂರು- ₹99,455

* ಚೆನ್ನೈ- ₹1,10,290

* ಹೈದರಾಬಾದ್- ₹1,10,290

* ಕೋಲ್ಕತ್ತಾ- ₹1,00,100

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+