Gold Price Aug 05: ಚಿನ್ನ ಪ್ರಿಯರಿಗೆ ಮತ್ತೆ ಆಘಾತ; ಬೆಳ್ಳಿಯೂ ದುಬಾರಿ, ಆರ್‌ಬಿಐನಿಂದ ಭರ್ಜರಿ ಗುಡ್‌ನ್ಯೂಸ್

Gold Price Aug 05: ಚಿನ್ನ ಪ್ರಿಯರಿಗೆ ಭಾರೀ ಶಾಕ್ ಎದುರಾಗಿದೆ. ಈ ನಡುವೆ ಆರ್‌ಬಿಐನಿಂದ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಚಿನ್ನದ ಬೆಲೆಯು ಕಳೆದ ಒಂದು ವಾರದಿಂದಲೂ ಇಳಿಕೆಯಾಗುತ್ತಿತ್ತು. ಇದೀಗ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಚಿನ್ನದ ಬೆಲೆಯು ಆಗಸ್ಟ್‌ 5ರಂದು ಭಾರೀ ಹೆಚ್ಚಳವಾಗಿದೆ. 18,22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯು ಆಗಸ್ಟ್‌ 5ರ ಬುಧವಾರ ಭಾರೀ ಹೆಚ್ಚಳವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಾಗಿದೆ ಹಾಗೂ ಆರ್‌ಬಿಐನ ಹೊಸ ಗೈಡ್‌ಲೈನ್ಸ್‌ನಲ್ಲಿ ಏನಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 10,931 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,09,310 ರೂಪಾಯಿ ಆಗಿದೆ. 2026ರ ಆಗಸ್ಟ್‌ 4ಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 131 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,310 ರೂಪಾಯಿ ಹೆಚ್ಚಳವಾಗಿದೆ.

Gold Price

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನಲ್ಲೂ 18 ಕ್ಯಾರೆಟ್‌ನಂತೆಯೇ ಬೆಲೆ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 13,360 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,33,600 ರೂ. ಆಗಿದೆ. 2026ರ ಆಗಸ್ಟ್‌ 4ರ ಮಂಗಳವಾರಕ್ಕೆ ಹೋಲಿಕೆ ಮಾಡಿದರೆ, 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 160 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,600 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 18 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯಂತೆಯೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 14,575 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,45,750 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 175 ರೂಪಾಯಿ ಹಾಗೂ 10 ಗ್ರಾಂಗೆ 1,750 ರೂಪಾಯಿ ಹೆಚ್ಚಳವಾಗಿದೆ.

Gold Price: ಬೆಳ್ಳಿ ಬೆಲೆಯಲ್ಲೂ ಭರ್ಜರಿ ಹೆಚ್ಚಳ!

ಇನ್ನು ಆಗಸ್ಟ್‌ 5ರ ಬುಧವಾರ ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 240 ರೂಪಾಯಿ ಹಾಗೂ ಒಂದು ಕೆಜಿಗೆ 2,40,000 ರೂ. ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂನ ಮೇಲೆ 5 ರೂಪಾಯಿ ಹಾಗೂ ಒಂದು ಕೆ.ಜಿಯ ಮೇಲೆ 5,000 ರೂಪಾಯಿ ಹೆಚ್ಚಳವಾಗಿದೆ.

ಆರ್‌ಬಿಐನಿಂದ ಗುಡ್‌ನ್ಯೂಸ್: ರೆಪೊ ದರ ಯಥಾಸ್ಥಿತಿ!

ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹಣಕಾಸು ನೀತಿ ಸಮಿತಿಯು ಹೊಸ ರೆಪೊ ದರವನ್ನು 5.25% ನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. RBI ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಆಗಸ್ಟ್‌ 5ರ ಬುಧವಾರ ಹೊಸ ರೆಪೊ ದರದ ಬಗ್ಗೆ ಅಪ್ಡೇಟ್ಸ್‌ ಕೊಟ್ಟಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಎದುರಾದ ಉದ್ವಿಗ್ನತೆ ಹಾಗೂ ಭೌಗೋಳಿಕ ರಾಜಕೀಯ ಅನಿಶ್ಚಿತತೆ ನಡುವೆಯೂ ರೆಪೊ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಚ್ಚಾ ತೈಲ ಬೆಲೆಯ ಏರಿಳಿತವನ್ನು ಪರಿಗಣಿಸಿ, ಆಗಸ್ಟ್‌ನಲ್ಲಿ ನಡೆದ ಸಭೆಯ ನಂತರ RBI ರೆಪೊ ದರವನ್ನು 5.25% ನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+