Gold Price: ಡಿಸೆಂಬರ್ 15ರ ಸಂಜೆ ಏಕಾಏಕಿ ಹೊಸ ದಾಖಲೆ ಬರೆದ ಚಿನ್ನದ ಬೆಲೆ!
Gold Price: ದೇಶದಾದ್ಯಂತ ಚಿನ್ನದ ಬೆಲೆಯು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಡಿಸೆಂಬರ್ 15ರ ಸಂಜೆ ಚಿನ್ನದ ಬೆಲೆಯು ಭರ್ಜರಿ ಹೆಚ್ಚಳವಾಗಿದ್ದು, ಚಿನ್ನ ಪ್ರಿಯರಿಗೆ ಭಾರೀ ಶಾಕ್ ಎದುರಾಗಿದೆ. ಚಿನ್ನದ ಬೆಲೆಯು 2025ನೇ ಸಾಲಿನಲ್ಲಿ ಭರ್ಜರಿ ಏರಿಕೆ ಕಂಡಿತ್ತು. 2026ನೇ ಸಾಲಿನಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ಬರೋಬ್ಬರಿ 3 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಚಿನ್ನದ ಬೆಲೆಯು ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದೆ. ಇಷ್ಟಕ್ಕೂ ಸೋಮವಾರ ಸಂಜೆ ಚಿನ್ನದ ಬೆಲೆ ಎಷ್ಟು ಹೆಚ್ಚಳವಾಗಿದೆ ಎನ್ನುವ ವಿವರ ನೋಡೋಣ.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದೆ. ಅದರಲ್ಲೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ಹಾಗೂ ನಿರಂತರ ಸುಂಕದಲ್ಲಿನ ಏರಿಕೆ, ಡಾಲರ್‌ನ ಮುಂದೆ ನಿರಂತರವಾಗಿ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಹಾಗೂ ಇದೀಗ ಮೆಕ್ಸಿಕೋ ದೇಶವೂ ಸಹ ಭಾರತದ ಮೇಲೆ ಶೇ 50ರಷ್ಟು ಸುಂಕವನ್ನು ಜನವರಿಯಿಂದ ವಿಧಿಸುವುದಾಗಿ ಹೇಳಿರುವುದು ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ.

ಇದೀಗ ಸೋಮವಾರ ಡಿಸೆಂಬರ್ 15ರ ಸಂಜೆ ಏಕಾಏಕಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಇದೀಗ ಬಂದ ಅಪ್ಡೇಟ್ಸ್‌ನ ಪ್ರಕಾರ ಚಿನ್ನದ ಬೆಲೆಯು ಡಿಸೆಂಬರ್ 15 ಸಂಜೆ 440 ರೂ.ಗಳಷ್ಟು ಏರಿಕೆಯಾಗಿದ್ದು, ಹಳದಿ ಲೋಹವು ಪ್ರತಿ ಗ್ರಾಂಗೆ (8 ಗ್ರಾಂ) 1,00,120 ರೂಪಾಯಿಗಳಿಗೆ ಮತ್ತು ಪ್ರತಿ ಗ್ರಾಂಗೆ 12,515 ರೂ.ಗಳಿಗೆ ತಲುಪಿದೆ. ಹಿಂದಿನ ಅವಧಿಗಿಂತ 55 ರೂ.ಗಳಷ್ಟು ಏರಿಕೆಯಾಗಿದೆ. ಇದು ಈಗ ಈ ವರ್ಷ ದಾಖಲಾದ ಅತ್ಯಧಿಕ ಬೆಲೆಯಾಗಿದೆ ಎಂದು ಹೇಳಲಾಗಿದೆ.
ಇನ್ನು ಚಿನ್ನದ ಬೆಲೆಯು ಹೊಸ ದಾಖಲೆಯ ಬೆಲೆಗೆ ಜಿಗಿತ ಕಾಣುತ್ತಿರುವುದು ಇದು ವರ್ಷದಲ್ಲಿ ಮೂರನೇ ಬಾರಿಯಾಗಿದೆ. ಇದಕ್ಕೂ ಮೊದಲು ಅಕ್ಟೋಬರ್ 17 ರಂದು ಲೋಹವು ತನ್ನ ಹಿಂದಿನ ವಾರ್ಷಿಕ ಗರಿಷ್ಠ 97,600 ರೂ.ಗಳನ್ನು (ಪ್ರತಿ ಗ್ರಾಂಗೆ 12,200 ರೂ.ಗಳು) ತಲುಪಿತ್ತು. ಇದೇ ವರ್ಷ, 2025ನೇ ಸಾಲಿನ ಜನವರಿ 1 ರಂದು, ಪ್ರತಿ ಪೌಂಡ್‌ಗೆ 57,200 ರೂ.ಗಳಷ್ಟಿದ್ದ (ಪ್ರತಿ ಗ್ರಾಂಗೆ 7,150 ರೂ.ಗಳು) ಚಿನ್ನದ ಬೆಲೆಯು ಇದೀಗ ಪ್ರತಿ ಪೌಂಡ್‌ಗೆ 1,00,120 ರೂ.ಗಳಿಗೆ ಏರಿಕೆ ಕಂಡಿದೆ. ಚಿನ್ನದ ಬೆಲೆಯು ನಿರಂತರ ಹೆಚ್ಚಳವು 42,920 ರೂ.ಗಳಷ್ಟು ಅಥವಾ ಒಟ್ಟಾರೆ 75% ರಷ್ಟು ಹೆಚ್ಚಾದಂತೆ ಆಗಿದೆ.
ಮೂರು ಲಕ್ಷ ರೂಪಾಯಿ ಆಗಲಿದೆಯೇ ಚಿನ್ನದ ಬೆಲೆ ?
ಇನ್ನು 2026ನೇ ಸಾಲಿನ ಅಂತ್ಯದ ವೇಳೆಗೆ ಭಾರತದಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ಅಂದಾಜು ಮೂರು ಲಕ್ಷ ರೂಪಾಯಿ ಅಥವಾ ಶೇ 15%ರಿಂದ ಶೇ 30% ಪ್ರತಿಶತ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ವಿವಿಧ ಬೆಳವಣಿಗೆಗಳ ಕಾರಣಕ್ಕಾಗಿ ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಳ ಸಾಧ್ಯತೆ: ಚಿನ್ನದ ಬೆಲೆಯು ಡಿಸೆಂಬರ್ 15ರಂದು ಏಕಾಏಕಿ ಒಂದೇ ದಿನ 4,000 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಭವಿಷ್ಯದಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.












Click it and Unblock the Notifications