Gold Rate: ಒಂದೇ ದಿನ 8200 ರೂಪಾಯಿ ಹೆಚ್ಚಾದ ಚಿನ್ನದ ಬೆಲೆ
ಕಳೆದ ಒಂದು ವಾರದಿಂದ ಸತತವಾಗಿ ಕುಸಿತ ಕಂಡು ಚಿನ್ನಾಭರಣ ಪ್ರಿಯರ ಮೊಗದಲ್ಲಿ ಸಂತಸ ಮೂಡಿಸಿದ್ದ ಚಿನ್ನದ ಬೆಲೆ, ಶುಕ್ರವಾರ ಒಂದೇ ದಿನ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಮೂಲಕ ಶಾಕ್ ಕೊಟ್ಟಿದೆ. ಸೋಮವಾರ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಶುಕ್ರವಾರ ಭಾರಿ ಚೇತರಿಕೆ ಕಂಡಿದ್ದು 800 ಕ್ಕಿಂತ ಅಧಿಕ ಅಂಕಗಳಷ್ಟು ಏರಿಕೆಯಾಗಿದೆ.
ಆಗಸ್ಟ್ 3ರಿಂದ ಕೆಲವು ದಿನ ಕುಸಿತ ಕಂಡಿದ್ದ ಚಿನ್ನದ ಬೆಲೆ ಮತ್ತೆ ಕೆಲವು ದಿನ ಸ್ಥಿರತೆ ಕಾಯ್ದುಕೊಂಡಿತ್ತು. ಆಗಸ್ಟ್ 3ರ ಬಳಿಕ ಇದೇ ಮೊದಲ ಬಾರಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಷೇರು ಮಾರುಕಟ್ಟೆ ಕೂಡ ಸುಧಾರಣೆ ಕಂಡಿದ್ದು, ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ.

ಒಂದೇ ದಿನ 8200 ರೂಪಾಯಿ ಹೆಚ್ಚಳ
ಇನ್ನು ಶುಕ್ರವಾರ ಒಂದೇ ದಿನ 100 ಗ್ರಾಂ ಶುದ್ದ ಚಿನ್ನದ ಬೆಲೆ 8200 ರೂಪಾಯಿ ಏರಿಕೆಯಾಗಿದೆ. ಅಂದರೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 82 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ 6,927 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಶುಕ್ರವಾರ 7,009 ರೂಪಾಯಿಗಳಿಗೆ ಹೆಚ್ಚಾಗಿದೆ.
ಆಭರಣ ಚಿನ್ನದ ಬೆಲೆ ಕೂಡ ಒಂದು ಗ್ರಾಂಗೆ 75 ರೂಪಾಯಿ ಹೆಚ್ಚಾಗಿದೆ. ಗುರುವಾರ 6,350 ರೂಪಾಯಿ ಇದ್ದ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಶುಕ್ರವಾರ 6,425 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆ 750 ರೂಪಾಯಿ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಬೆಲೆ ಏರಿಕೆ ಶಾಕ್ ಕೊಟ್ಟಿದೆ.
ಬೆಳ್ಳಿ ಬೆಲೆ ಕುಸಿತ
ಒಂದು ಕಡೆ ಚಿನ್ನದ ಬೆಲೆ ಏರಿಕೆಯಾದರೆ ಬೆಳ್ಳಿ ಬೆಲೆ ಕುಸಿತ ಕಂಡಿದೆ. ಶುಕ್ರವಾರ ಒಂದು ಕೆಜಿ ಬೆಳ್ಳಿ ಬೆಲೆ 5,750 ರೂಪಾಯಿಗಳಷ್ಟು ಕುಸಿತ ಕಂಡಿದೆ. ಈ ಮೂಲಕ ಒಂದು ಕೆಜಿ ಬೆಳ್ಳಿ ಬೆಲೆ 80,000 ರೂಪಾಯಿ ಸನಿಹಕ್ಕೆ ಬಂದಿದೆ. ಗುರುವಾರ ಬೆಂಗಳೂರಿನಲ್ಲಿ ಒಂದು ಕೆಜಿ ಚಿನ್ನದ ಬೆಲೆ 86,500 ರೂಪಾಯಿ ಇದ್ದರೆ ಇಂದು 80,750 ರೂಪಾಯಿಗೆ ಕುಸಿದಿದೆ.
ಷೇರು ಮಾರುಕಟ್ಟೆ ಸುಧಾರಣೆ
ಸೋಮವಾರ ಬೃಹತ್ ಪ್ರಮಾಣದಲ್ಲಿ ಕುಸಿತ ಕಂಡು ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ನಷ್ಟಕ್ಕೆ ಕಾರಣವಾಗಿದ್ದ ಷೇರು ಮಾರುಕಟ್ಟೆ ಬಳಿಕ ಸುಧಾರಣೆ ಕಾಣುತ್ತಿದೆ. ಶುಕ್ರವಾರ ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್ 780 ಅಂಕಗಳಷ್ಟು ಏರಿಕೆಯಾಗಿದೆ. ಇದು ಹೂಡಿಕೆದಾರರಲ್ಲಿ ನೆಮ್ಮದಿ ತರಿಸಿದೆ.












Click it and Unblock the Notifications