Gold Price: ಚಿನ್ನದ ಬೆಲೆ ಒಂದೇ ದಿನ 2,200 ರೂಪಾಯಿ ಏರಿಕೆ
ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದ್ದು, ಕಳೆದ ಕೆಲವು ದಿನಗಳಿಂದ ನಿರಂತರ ಕುಸಿತದಿಂದ ಹೊರಗೆ ಬಂದಿದೆ. ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಉಂಟಾಗುತ್ತಿದೆ. ಯಾಕಂದ್ರೆ ಇದೀಗ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಶುಭ ಸಮಾರಂಭಗಳು ಕೂಡ ಹತ್ತಿರವೇ ಬರುತ್ತಿವೆ. ಹೀಗಿದ್ದಾಗ ಚಿನ್ನದ ಬೆಲೆ ಇಂದು ದಿಢೀರ್ 2,200 ರೂಪಾಯಿ ಏರಿಕೆ ಕಂಡಿದೆ. ಹಾಗಾದ್ರೆ ಬೆಂಗಳೂರು & ಕರ್ನಾಟಕದಲ್ಲಿ ಎಷ್ಟಿದೆ ಬಂಗಾರದ ಬೆಲೆ? ಬನ್ನಿ ತಿಳಿಯೋಣ.
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾನೇ ಇಷ್ಟ. ಅದರಲ್ಲೂ ಆಭರಣಗಳನ್ನು ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡ್ತಾರೆ. ಹೀಗಾಗಿ, ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ ಹೀಗಿದ್ದಾಗ ಇತ್ತೀಚೆಗೆ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂದು ಕೂಡ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಹಾಗಾದ್ರೆ ಇಂದು ಬೆಂಗಳೂರು & ಕರ್ನಾಟಕದಲ್ಲಿ ಎಷ್ಟಿದೆ ಚಿನ್ನದ ಬೆಲೆ? ಬಂಗಾರದ ಬೆಲೆ & ಬೆಳ್ಳಿ ಬೆಲೆ ತಿಳಿಯಲು ಮುಂದೆ ಓದಿ.

10 ಗ್ರಾಂಗೆ 67,300 ರೂಪಾಯಿ!
22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಕಂಡಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2000 ರೂಪಾಯಿ ಏರಿಕೆ ಕಂಡು ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆಯಲ್ಲಿ 350 ರೂ. ಏರಿಕೆ ಕಂಡಿದೆ. ಆಭರಣ ಚಿನ್ನ ಬೆಲೆ ಏರಿಕೆ ನಂತರ ಪ್ರತಿ 10 ಗ್ರಾಂಗೆ 67,300 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಏರಿಕೆ ಕಂಡಿದ್ದು, ಚಿನ್ನ ಖರೀದಿಗೆ ಕಾಯುತ್ತಿದ್ದ ಜನರಿಗು ಶಾಕ್ ಕೊಟ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,200 ರೂಪಾಯಿ ಕುಸಿತ ಕಂಡಿದೆ. ಹಾಗಾದರೆ ಇದೀಗ ಬೆಳ್ಳಿ ಬೆಲೆ ಎಷ್ಟಿದೆ? ಮುಂದೆ ಓದಿ.
ಬೆಳ್ಳಿ ಬೆಲೆ ಎಷ್ಟಿದೆ ಈಗ?
24 ಕ್ಯಾರೆಟ್ ಚಿನ್ನದ ಬೆಲೆ ಇದೀಗ 73,420 ರೂಪಾಯಿ ಆಗಿದ್ದು, 18 ಕ್ಯಾರೆಟ್‌ನ ಚಿನ್ನದ ಬೆಲೆ ಕೂಡ ಪ್ರತಿ 100 ಗ್ರಾಂಗೆ 1,600 ರೂಪಾಯಿ ಏರಿಕೆ ಕಂಡಿದೆ. ಹೀಗೆ ಹಳದಿ ಲೋಹದ ಬೆಲೆಯು ಮುಗಿಲು ಮುಟ್ಟುತ್ತಿದೆ. ಇದರ ಜೊತೆಗೆ ಬೆಳ್ಳಿ ಬೆಲೆ ಏರಿಕೆ ಕಂಡಿದ್ದು, ಬೆಳ್ಳಿಯ ಬೆಲೆ ಸುಮಾರು 250 ರೂಪಾಯಿ ಪ್ರತಿ ಕೆಜಿಗೆ ಏರಿಕೆಯನ್ನು ಕಂಡು ಈಗ 94,750 ರೂಪಾಯಿ ಪ್ರತಿ ಕೆಜಿಗೆ ಬೆಳ್ಳಿ ಮಾರಾಟ ಆಗ್ತಿದೆ.
ಚಿನ್ನ ಇಲ್ಲದೆ ಏನೂ ನಡೆಯಲ್ಲ!
ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಎಂದರೆ, ಚಿನ್ನವು ಇಲ್ಲದೆ ಏನೂ ನಡೆಯಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ, ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿದಂತೆ, ಹಲವು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಕೂಡ ಚಿನ್ನ ಬೇಕೆ ಬೇಕಾಗುತ್ತೆ. ಹೀಗಾಗಿಯೇ ಚಿನ್ನ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿದೆ. ಹೀಗೆಯೇ, ಎಲ್ಲಾ ಕಡೆಯಿಂದ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ, ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದ್ದು. ಮುಂದೆ ಇನ್ನಷ್ಟು ಏರಿಳಿತ ಕಾಣಬಹುದು ಅಂತಾರೆ ತಜ್ಞರು.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.
ಬೆಲೆ ಏರಿಕೆಗೆ ಕಾರಣ ಏನು?
ಚಿನ್ನಕ್ಕೆ ಸಖತ್ ಡಿಮ್ಯಾಂಡ್ ಬಂದಿದ್ದಕ್ಕೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದ್ದು. ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಿದ್ದಾರೆ ಕೂಡ. ಏಪ್ರಿಲ್ ತಿಂಗಳಲ್ಲಿ, ಇತಿಹಾಸ ಬರೆದಿತ್ತು ಚಿನ್ನದ ಬೆಲೆ. ಹೀಗಿದ್ದಾಗ ಚಿನ್ನದ ಬೆಲೆ ನಂತರ ಹಾದಿಗೆ ಮರಳಿತ್ತು, ಅದರಲ್ಲೂ ತನ್ನ ಗರಿಷ್ಠ ಬೆಲೆಯಿಂದ ಚಿನ್ನದ ಬೆಲೆ ಮತ್ತೆ ಕೆಳಗೆ ಇಳಿಯುತ್ತಿತ್ತು. ಆದ್ರೆ ಈಗ ಶುಭ ಕಾರ್ಯಗಳು ಮತ್ತೆ ಆರಂಭ ಆಗಲಿರುವ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ ಎನ್ನಲಾಗಿದೆ. ಯಾಕಂದ್ರೆ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಚಿನ್ನವೇ ಮೊದಲ ಆಯ್ಕೆ. ಹೀಗಾಗಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications