Gold Price: ಚಿನ್ನದ ಬೆಲೆ ಭರ್ಜರಿ ಏರಿಕೆ, ಬಂಗಾರ & ಬೆಳ್ಳಿ ಬೆಲೆ ಈಗ ಎಷ್ಟಿದೆ?
ಚಿನ್ನದ ಬೆಲೆ ಮತ್ತೊಮ್ಮೆ ಭರ್ಜರಿ ಏರಿಕೆ ಕಾಣುತ್ತಿದ್ದು, ಇಂದು ಕೂಡ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಆಷಾಢ ಮಾಸ ಮುಗಿದ ಹಿನ್ನೆಲೆ ಇದೀಗ ಶುಭ ಕಾರ್ಯಗಳು ಶುರುವಾಗಿವೆ. ಇದೇ ಸಮಯದಲ್ಲಿ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಸಂಪೂರ್ಣ ಮಾಹಿತಿಗೆ ಮುಂದೆ ತಿಳಿಯೋಣ ಓದಿ.
ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ, ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕೂಡ ಉಂಟಾಗುತ್ತಿದೆ. ಚಿನ್ನ & ಬೆಳ್ಳಿ ಇಲ್ಲದೆ ಮದುವೆ & ನಿಶ್ಚಿತಾರ್ಥ ಸೇರಿ ಯಾವುದೇ ಶುಭಕಾರ್ಯ ಕೂಡ ನಡೆಯುವುದಿಲ್ಲ. ಯಾಕಂದ್ರೆ ಚಿನ್ನ & ಬೆಳ್ಳಿಯೇ ಆಧಾರ ಶುಭಕಾರ್ಯ ನಡೆಸಲು. ಹೀಗಿದ್ದಾಗಲೇ ಆಷಾಢ ಮಾಸದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇದೀಗ ಆಷಾಢ ಮುಗಿದು ಶ್ರಾವಣ ಶುರುವಾಗಿದ್ದೇ ತಡ ಸತತ 3 ದಿನಗಳಿಂದ ಏರಿಕೆಯನ್ನ ಕಂಡಿದೆ. ಹಾಗಾದ್ರೆ ಇಂದು ಬಂಗಾರ & ಬೆಳ್ಳಿ ಬೆಲೆ ಎಷ್ಟು ಏರಿಕೆ ಕಂಡಿದೆ? ಮುಂದೆ ಓದಿ.

ಚಿನ್ನ & ಬೆಳ್ಳಿ ಬೆಲೆ ಎಷ್ಟು ಏರಿಕೆ?
ಕರ್ನಾಟಕ & ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲೆ ಹೋಗಿದೆ. 100 ಗ್ರಾಂಗೆ 3,300 ರೂಪಾಯಿ ಏರಿಕೆಯನ್ನು ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,06,900 ರೂಪಾಯಿ ಆಗಿದೆ. ಇದರ ಜೊತೆಗೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 70,690 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದರೆ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಎಷ್ಟಿದೆ? ಬೆಳ್ಳಿಯ ಬೆಲೆ ಎಷ್ಟಕ್ಕೆ ಏರಿಕೆ ಆಗಿದೆ?
ಮತ್ತಷ್ಟು ಏರಿಕೆ ಆಗುತ್ತಿದೆ ಬೆಳ್ಳಿ!
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಏರಿಕೆ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 3,000 ರೂಪಾಯಿ ಹೆಚ್ಚಾಗಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 300 ರೂಪಾಯಿ ಏರಿಕೆ ಆಗಿ ಪ್ರತಿ 10 ಗ್ರಾಂಗೆ 64800 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದ್ಕಡೆ ಬೆಳ್ಳಿ ಬೆಲೆಯಲ್ಲಿ 1500 ರೂಪಾಯಿ ಏರಿಕೆ ಕಂಡಿದ್ದು ಈಗ 86,000 ರೂಪಾಯಿಗೆ ಮಾರಾಟ ಆಗುತ್ತಿದೆ ಬೆಳ್ಳಿ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ, ಬೆಳ್ಳಿ ಬೆಲೆ ಕೂಡ ಮತ್ತೊಮ್ಮೆ 1 ಲಕ್ಷ ರೂಪಾಯಿ ತಲುಪುವ ನಿರೀಕ್ಷೆ ಇದೆ.












Click it and Unblock the Notifications