Gold Price: ಚಿನ್ನದ ಬೆಲೆ ಭಾರಿ ಕುಸಿತ, ಮದುವೆ ಸೀಸನ್ ಆರಂಭಕ್ಕೂ ಮೊದಲೇ 1,00,000 ರೂಪಾಯಿಗೆ ಇಳಿಕೆ ಸಾಧ್ಯತೆ...

ಚಿನ್ನ ಜಾಗತಿಕ ಮಟ್ಟದ ಸಂಪತ್ತು ಆಗಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡಲು ಜನ ಕಾಯುತ್ತಿದ್ದರು. ಹೀಗಿದ್ದಾಗ ಬಂಗಾರದ ಬೆಲೆಯು ಮತ್ತೆ ಭಾರಿ ಕುಸಿತ ಕಂಡಿದೆ, ಈ ಮೂಲಕ ಚಿನ್ನ ಕೊಳ್ಳಲು ಭರ್ಜರಿ ಚಾನ್ಸ್ ಸಿಕ್ಕಂತಾಗಿದೆ. ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಇಳಿಕೆ ಕಾಣುತ್ತಿರುವ ರೀತಿ ನೋಡಿ ಆಭರಣ ಪ್ರಿಯರು ಹಾಗೂ ಇನ್ನೇನು ಮದುವೆ ಫಿಕ್ಸ್ ಆಗಿರುವವರು ಸಂತೋಷದಿಂದ ಕಾಯುತ್ತಿದ್ದಾರೆ. ಕಳೆದ 1 ದಶಕದಲ್ಲಿ ಚಿನ್ನದ ಬೆಲೆ ಸಾಕಷ್ಟು ಬದಲಾವಣೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಷ್ಟೆಲ್ಲದರ ನಡುವೆ ಕುಸಿತ ಕಂಡಿರುವ ಚಿನ್ನದ ಬೆಲೆ ಇದೀಗ ಎಷ್ಟಿದೆ ಗೊತ್ತೆ?

ಚಿನ್ನದ ಬೆಲೆಯು ಮತ್ತೊಮ್ಮೆ ಭಾರಿ ಕುಸಿತ ಕಂಡಿದ್ದು, ಹೀಗಾಗಿ ಚಿನ್ನ ಖರೀದಿ ಮಾಡಲು ಸುವರ್ಣಾವಕಾಶ ಒದಗಿ ಬಂದಿದೆಯಾ? ಅನ್ನೋ ಚರ್ಚೆ ಕಳೆದ ಕೆಲವು ದಿನಗಳಿಂದ ಶುರುವಾಗಿದೆ. ಯಾಕಂದ್ರೆ ಕಳೆದ ಕೆಲ ತಿಂಗಳಿಂದ ಚಿನ್ನದ ಬೆಲೆ ಭಾರಿ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಭಾರಿ ಚಿಂತೆ ತರಿಸಿತ್ತು, ಈ ಮೂಲಕ ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಬಗ್ಗೆ ಕೂಡ ಚರ್ಚೆ ಶುರುವಾಗಿತ್ತು. ಆದರೆ ಅದೆಲ್ಲವನ್ನೂ ಮೀರಿ ಇದೀಗ ಚಿನ್ನದ ಬೆಲೆಯು ಭರ್ಜರಿ ಕುಸಿತ ಕಂಡಿದೆ. ಹಾಗಾದ್ರೆ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ಈಗ ಕರ್ನಾಟಕದಲ್ಲಿ ಎಷ್ಟಿದೆ ಚಿನ್ನದ ಬೆಲೆ?

Gold Price Once Again Decreased On July 25 Of 2025

ಚಿನ್ನದ ಬೆಲೆ 1,00,000 ರೂಪಾಯಿಗೆ ಇಳಿಕೆ ಸಾಧ್ಯತೆ...

ಹೌದು, ಚಿನ್ನ ಬಹು ಬೇಡಿಕೆ ಇರುವ ವಸ್ತು. ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ ಹತ್ತಿರ ಹತ್ತಿರ 1 ಲಕ್ಷ ರೂಪಾಯಿ ದಾಟಿ, 1,50,000 ರೂಪಾಯಿ ಕಡೆಗೆ ಮುಂದೆ ನುಗ್ಗುತ್ತಿತ್ತು. ಆದರೆ ಇದೀಗ ಚಿನ್ನ & ಬೆಳ್ಳಿ ಎರಡೂ ಅಮೂಲ್ಯ ವಸ್ತುಗಳ ಬೆಲೆ ಕೂಡ ಕುಸಿತ ಕಂಡಿದೆ...

ಚಿನ್ನದ ಬೆಲೆ ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣುವ ಮೂಲಕ ಈಗ ಭರ್ಜರಿ ಸುದ್ದಿಯನ್ನ ನೀಡುತ್ತಿದೆ. ಅಷ್ಟಕ್ಕು ಇದೀಗ 24 ಕ್ಯಾರೆಟ್ ಅಂದರೆ ಶುದ್ಧ ಚಿನ್ನದ ಬೆಲೆ, ಪ್ರತಿ 10 ಗ್ರಾಂಗೆ 1,00,470 ರೂಪಾಯಿಗೆ ಭರ್ಜರಿ ಇಳಿಕೆ ಕಂಡಿದೆ. ಹಾಗೇ 22 ಕ್ಯಾರೆಟ್ ಚಿನ್ನ ಬೆಲೆ ಅಂದ್ರೆ ಆಭರಣ ಚಿನ್ನದ ಬೆಲೆ 92,090 ರೂಪಾಯಿಗೆ ಇಳಿಕೆ ಕಾಣುವ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು & ಚಿನ್ನ ಖರೀದಿಗೆ ಅಂತಾನೇ ಕಾಯುತ್ತಿದ್ದವರಿಗೆ ಸಖತ್ ಸುದ್ದಿ ಕೊಟ್ಟಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡು ಬಂದಿದ್ದು, ಇದೀಗ ಬೆಳ್ಳಿಯ ಬೆಲೆ 1,18,000 ರೂಪಾಯಿ ಪ್ರತಿ 1 ಕೆಜಿಗೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+