Gold Price Today: ಚಿನ್ನದ ಬೆಲೆ ₹12,600 ಏರಿಕೆ: ಬೆಳ್ಳಿ ದರ ₹6900 ಹೆಚ್ಚಳ, ಇಂದಿನ ದರಪಟ್ಟಿ
Gold Silver Price Hike: ಚಿನ್ನ-ಬೆಳ್ಳಿ ಎಂದರೆ ಯಾರಿಗೆತಾನೆ ಇಷ್ಟವಾಗಲ್ಲ, ಎಲ್ಲರಿಗೆ ಇಷ್ಟವಾಗುತ್ತವೆ. ಅದರಲ್ಲೂ ಚಿನ್ನ ಖರೀದಿಸಲು ಗ್ರಾಹಕರು ಕಾಯುತ್ತಿರುತ್ತಾರೆ. ಹಣ ಹೊಂದಿಸಿ, ಸಾಲ ಮಾಡಿಯಾದರೂ ಸರಿಯೇ ಚಿನ್ನ ಖರೀದಿಸುವ ಸಂಸ್ಕೃತಿ ಇದೆ. ಚಿನ್ನಕ್ಕೆ ಹೆಚ್ಚಿನ ಬೇಡಿಕೆ ದೇಶದಲ್ಲಿದೆ. ಆದರೆ ಇತ್ತೀಚೆಗೆ ಚಿನ್ನ ಹಾಗೂ ಬೆಳ್ಳಿ ಎರಡು ದರಗಳು ಪೈಪೋಟಿ ರೀತಿಯಲ್ಲಿ ಹೆಚ್ಚಾಗುತ್ತಿವೆ. ಈ ಬೆಲೆ ಏರಿಕೆ ಆಘಾತದಿಂದ ಜನರು ಕಂಗಾಲಾಗಿದ್ದಾರೆ.
ಸರಣಿ ಹಬ್ಬಗಳು ಎದುರಾದ ವೇಳೆ ಸುದಿನದಂದು ಬಂಗಾರ ಖರೀದಿಸಬೇಕು ಎಂದುಕೊಂಡ ಗ್ರಾಹಕರು ನಿರಂತರವಾಗಿ ಬೆಲೆ ಏರಿಕೆ ಆಘಾತ ನೀಡುತ್ತಿದೆ. ಕಳೆದ ಒಂದೇ ವಾರದಲ್ಲಿ ಚಿನ್ನ ಬೆಲೆಯು ಗಗನಕ್ಕೇರಿಸಿದೆ. 22 ಕ್ಯಾರಟ್ ಚಿನ್ನ ಸಹ ಈಗಾಗಲೇ ಒಂದು ಲಕ್ಷ ರೂಪಾಯಿ ದಾಟಿದೆ. ನೆನ್ನೆ ಸೋಮವಾರಕ್ಕಿಂತಲೂ ಇಂದು ಮಂಗಳವಾರ ಸೆಪ್ಟಂಬರ್ 23ರಂದು ಚಿನ್ನ ಬೆಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ.

ಚಿನ್ನದ ಬೆಲೆ 12,600 ರೂಪಾಯಿ ಏರಿಕೆ
24 ಕ್ಯಾರಟ್ ಚಿನ್ನದ 10ಗ್ರಾಂಗೆ ನೆನ್ನೆ 430 ರೂಪಾಯಿ ಹೆಚ್ಚಾಗಿದ್ದರೆ ಇಂದು 1,260 ರೂಪಾಯಿ ಏರಿಕೆ ಕಂಡಿದೆ. ಇಂದು ಚಿನ್ನದ ದರ ₹1,14,330ಕ್ಕೇರಿಸಿದೆ. ಇದೇ 100 ಗ್ರಾಂ ಚಿನ್ನದ ಬೆಲೆಯು ಇವತ್ತು ಬರೋಬ್ಬರಿ 12,600 ರೂಪಾಯಿಗೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ಅಂಕಿ ಸಂಖ್ಯೆಗಳು ತಿಳಿಸಿವೆ.
ಇನ್ನೂ 22 ಕ್ಯಾರಟ್ ಬಂಗಾರಕ್ಕೆ ನೆನ್ನೆ 400 ರೂಪಾಯಿ ಏರಿಕೆ ಆಗಿದ್ದು, ಇಂದು ಮತ್ತಷ್ಟು ಹೆಚ್ಚಾಗಿದೆ. ಮಂಗಳವಾರ 10 ಗ್ರಾಂ ಗೆ ₹1,150 ರೂಪಾಯಿ ಹೆಚ್ಚಾಗಿದೆ. ಈ ಮೂಲಕ ಇವತ್ತು ಬಂಗಾರದ ಬೆಲೆ 1,04,800 ರೂಪಾಯಿಗೆ ಹೆಚ್ಚಾಗಿದೆ. ಇದೇ ಚಿನ್ನದ 100 ಗ್ರಾಂ ದರವು ಭರ್ಜರಿ ₹11,500 ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಚಿನ್ನ ಬೆಲೆ ಗಗನಕ್ಕೇರುತ್ತಿದೆ.
ಬೆಳ್ಳಿ ದರ 6900 ರೂ.ಏರಿಕೆ
ಚಿನ್ನ ಮಾತ್ರವಲ್ಲದೇ ಬೆಳ್ಳಿ ದರವು ದಾಖಲೆಯ ಮಟ್ಟದಲ್ಲಿ ಹೆಚ್ಚಳ ಕಂಡಿದೆ. ನೆನ್ನೆ ಒಂದು ಕೆಜಿ ಬೆಳ್ಳಿ ದರದಲ್ಲಿ 5000 ರೂಪಾಯಿ ಏರಿಕೆ ಆಗಿದೆ. ಇವತ್ತು ಒಂದೇ ದಿನಕ್ಕೆ ಮತ್ತೆ 1900 ರೂಪಾಯಿ ಹೆಚ್ಚಾಗಿದೆ. ಎರಡೇ ದಿನದಲ್ಲಿ 6900 ರೂಪಾಯಿ ಏರಿಕೆ ಕಂಡಂತಾಗಿದೆ.
ಬೆಂಗಳೂರಿನಲ್ಲಿ ಇಂದು ಮಂಗಳವಾರ 22ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯು 1,04,800 ರೂಪಾಯಿ, 24 ಕ್ಯಾರೆಟ್ ಚಿನ್ನದ ದರ 1,14,330 ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ದರ 14,050 ರೂ. ಹಾಗೂ ಒಂದು ಕೆಜಿಗೆ 1,40,500 ರೂಪಾಯಿ ಇದೆ. ಇನ್ನೂ ಈ ಚಿನ್ನಾಭರಣ ದರಗಳು ಆಯಾ ನಗರದಲ್ಲಿ ವೇಸ್ಟೇಜ್, ಇತರೆ ಶುಲ್ಕ, ಜಿಎಸ್‌ಟಿ ಸೇರಿ ಕೊಂಚ ವ್ಯತ್ಯಾಸವಾಗಬಹುದು. ಇದನ್ನು ಗಮನಿಸಿ ಗ್ರಾಹಕರು ಖರೀದಿಸಬಹುದು.












Click it and Unblock the Notifications