Gold Price on May 12: ಸತತ 4ನೇ ದಿನವು ಬಂಗಾರದ ಬೆಲೆ ಕುಸಿತ, ಬೆಂಗಳೂರಿನಲ್ಲಿ ಎಷ್ಟಿದೆ?
Gold Price Today: ಭಾರತೀಯರು ಸದ್ಯಕ್ಕೆ ಚಿನ್ನ ಖರೀದಿಸದಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡುತ್ತಿದ್ದಂತೆ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಚಿನ್ನದ ಬೆಲೆ ಮತ್ತೆ ಕುಸಿಯುತ್ತಿದೆ. ಕಳೆದ ನಾಲ್ಕು ದಿನಗಳಿಂದ ಇಳಿಕೆಯ ಹಾದಿಯತ್ತ ಸಾಗಿರುವ ಚಿನ್ನವು ಮಂಗಳವಾರ (ಮೇ 12) ಮತ್ತೆ ಅಲ್ಪ ಇಳಿಕೆ ಕಂಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಂತಾಗಿದೆ.
ಚಿನ್ನವು ಸತತ ನಾಲ್ಕನೇ ದಿನವು ಇಳಿಕೆಯತ್ತ ಸಾಗಿದ್ದು, ಇದರೊಂದಿಗೆ ಬೆಳ್ಳಿಯು ಕೊಂಚ ಇಳಿಕೆ ಆಗಿದೆ. ಒಂದು ಗ್ರಾಂಗೆ ಬೆಳ್ಳಿಗೆ 10 ಪೈಸೆ ಕಡಿಮೆ ಆಗಿದ್ದು, ಒಂದು ಕೆಜಿಗೆ 100 ರೂಪಾಯಿ ತಗ್ಗಿದೆ. ಇಂದು ಬೆಳ್ಳಿ ಪ್ರತಿ ಕೆಜಿ ದರ 2,74,900 ರೂಪಾಯಿ ಇದೆ. ನಾಲ್ಕು ದಿನಗಳಿಂದ 2,75,000 ರೂಪಾಯಿಯ ಸ್ಥಿರತೆ ಕಾಯ್ದುಕೊಂಡಿತ್ತು.

ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ
* ಇಂದು 24 ಕ್ಯಾರಟ್ ಒಂದು ಗ್ರಾಂ ಚಿನ್ನದ ದರವು 1 ರೂ, ಕಡಿಮೆ ಆಗಿದ್ದು, 10 ಗ್ರಾಂಗೆ 10 ರೂಪಾಯಿ ಅಲ್ಪ ಕುಸಿತ ಕಂಡಿದ್ದು, ದರ 1,52,120 ರೂಪಾಯಿಯಷ್ಟಿದೆ.
* ಅದೇ ರೀತಿ 22 ಕ್ಯಾರಟ್ ಒಂದು ಗ್ರಾಂ ಬಂಗಾರದ ಬೆಲೆ ಕೂಡ 1 ರೂ. ಇಳಿಎಕ ಆಗಿದ್ದು, 10 ಗ್ರಾಮಗೆ 10 ರೂಪಾಯಿ ಕುಸಿದು ಅದರ ಬೆಲೆಯು 1,39,440 ರೂ. ತಗ್ಗಿದೆ.
* 18 ಗ್ರಾಂ ಚಿನ್ನದ ಬೆಲೆಯಲ್ಲೂ ಸಹ 1 ರೂ.ನಂತೆ 10 ಗ್ರಾಂಗೆ 10ರೂ. ಇಳಿಕೆ ಕಂಡಿದೆ.
ಚಿನ್ನದ ಬೆಲೆ ಭರ್ಜರಿ 880 ರೂ. ಕುಸಿತ
ಬೆಂಗಳೂರು ಸೇರಿದಂತೆ ಭಾರತದಲ್ಲಿ ಕಳೆದ 05 ದಿನಗಳಿಂದ ಚಿನ್ನ ಬೆಲೆಯಲ್ಲಿ ನಿರಂತರ ಇಳಿಕೆ ಪ್ರಕ್ರಿಯೆ ಮುಂದುವರಿದಿದೆ. 24 ಕ್ಯಾರಟ್ ಚಿನ್ನದಲ್ಲಿ ಮೇ 8 ರಂದು 320, ಮೇ 9ರಂದು 330 ಇಳಿಕೆ ಆಗಿತ್ತು. ನಂತರ ಮೇ 10ರಂದು ಸ್ಥಿರವಾಗಿದ್ದ ಬಂಗಾರದ ಬೆಲೆಯು ನೆನ್ನೆ ಸೋಮವಾರ (ಮೇ 11) ಮತ್ತೆ 220 ರೂ. ಇಂದು 10 ರೂಪಾಯಿ ಕುಸಿತ ಕಂಡಿದ್ದು, ಒಟ್ಟು ನಾಲ್ಕೇ ದಿನದಲ್ಲಿ 880 ರೂಪಾಯಿ ಕಡಿಮೆಯಾಗಿದೆ.
ಚಿನ್ನ ಬೆಳ್ಳಿ ದರಗಳು ಗರಿಷ್ಠ ಬೆಲೆ ತಲುಪುತ್ತಿದ್ದಂತೆ ಫೆಬ್ರವರಿ 1ರಿಂದ ಇಳಿಯಲಾರಂಭಿಸಿದವು. ಅಲ್ಲಿಂದ ಈವರೆಗೆ ಏರಿಳಿತ ಮುಂದುವರಿದಿವೆ. ಮುಂದಿನ ದಿನಗಳಲ್ಲಿ ಸಹಿತ ಚಿನ್ನ-ಬೆಳ್ಳಿ ದರ ಮತ್ತಷ್ಟು ಇಳಿಕೆ ಆಗುವ ಲಕ್ಷಣಗಳು ಇವೆ. ಕಾರಣ ಯುದ್ಧಗಳು, ಜಾಗತಿಕ ಅನಿಶ್ಚಿತತೆ, ರಾಜತಾಂತ್ರಿಕ ಕಾರಣಗಳು ಸೇರಿವೆ. ಅಲ್ಲದೇ ಯು.ಎಸ್ ಬ್ಯಾಂಕ್‌ನ ಬಾಂಡ್ ಮೇಲಿನ ಬಡ್ಡಿ ದರ ಹೆಚ್ಚಳದಿಂದ ಹೂಡಿಕೆದಾರರು ಚಿನ್ನದ ಮೇಲಿನ ಆಸೆ ಕೈ ಬಿಡುತ್ತಿದ್ದಾರೆ. ಬಾಂಡ್‌ಗಳ ಖರೀದಿಯತ್ತ ಹೆಚ್ಚು ಒಲವು ತೋರಿದ್ದಾರೆ.
ನಗರವಾರು ಇಂದಿನ 22ಕೆ ದರ ವಿವರ
ಬೆಂಗಳೂರು :13,944 ರೂಪಾಯಿ
ದೆಹಲಿ : 13,959 ರೂಪಾಯಿ
ಹೈದರಾಬಾದ್ :13,944 ರೂಪಾಯಿ
ಕೇರಳ :13,944 ರೂಪಾಯಿ
ಪುಣೆ :13,944 ರೂಪಾಯಿ
ಚೆನ್ನೈ : 14,099 ರೂಪಾಯಿ
ಮುಂಬೈ : 13,944 ರೂಪಾಯಿ
ಕೊಲ್ಕತ್ತಾ : 13,944 ರೂಪಾಯಿ













Click it and Unblock the Notifications