Gold Price on May 04: ಚಿನ್ನ ಪ್ರಿಯರಿಗೆ ವಾರಾಂತ್ಯ ಭರ್ಜರಿ ಗುಡ್‌ನ್ಯೂಸ್: ಬಂಗಾರದ ಬೆಲೆ ಬಂಪರ್ ಇಳಿಕೆ!
Gold Price on May 04: ವಾರಾಂತ್ಯದಲ್ಲಿ ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ ಇದೆ. ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿದ್ದು. ವಾರಾಂತ್ಯದ ಚಿನ್ನದ ಬೆಲೆಯು ಚಿನ್ನ ಪ್ರಿಯರು ಹಾಗೂ ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಖುಷಿ ಕೊಡುವ ಬೆಲೆಯಲ್ಲೇ ಇದೆ. ಚಿನ್ನದ ಬೆಲೆಯು ಹಳೆಯ ರೇಟ್‌ಗೆ ಬರುತ್ತಿದ್ದು. ಚಿನ್ನ ಪ್ರಿಯರು ಜಾಲಿ ಮೂಡ್‌ಗೆ ಜಾರುವಂತೆ ಮಾಡಿದೆ. ಇಷ್ಟಕ್ಕೂ ಮೇ 04ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯ ವಿವರ ಇಲ್ಲಿದೆ.
ಚಿನ್ನ ಖರೀದಿ ಮಾಡಬೇಕು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂದು ಅಂದುಕೊಳ್ಳುತ್ತಿರುವವರಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್. ವಾತಾಂತ್ಯದಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. 18 ಕ್ಯಾರೆಟ್‌ನಿಂದ 22 & 24 ಕ್ಯಾರೆಟ್ ಚಿನ್ನದ ಬೆಲೆ ಹೇಗಿದೆ ಎನ್ನುವ ವಿವರ ನೋಡೋಣ..

18 ಕ್ಯಾರೆಟ್ ಚಿನ್ನದ ಬೆಲೆ: ವಾರಾಂತ್ಯದಲ್ಲಿ (ಮೇ 04) ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಮುಂದುವರಿದಿದೆ. 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,164 ರೂಪಾಯಿ ಆಗಿದೆ. 10 ಗ್ರಾಂನ ಬೆಲೆಯು 71,640 ರೂಪಾಯಿ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 8,755 ರೂಪಾಯಿ ಹಾಗೂ 10 ಗ್ರಾಂಗೆ 87,550 ರೂಪಾಯಿ ಆಗಿದೆ. ಶನಿವಾರ ಹಾಗೂ ಭಾನುವಾರದಂದು ಚಿನ್ನದ ಬೆಲೆಯು ಯಥಾಸ್ಥಿತಿ ಕಾಪಾಡಿಕೊಂಡಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು ಗ್ರಾಹಕರಿಗೆ ಗುಡ್‌ನ್ಯೂಸ್ ನೀಡುತ್ತಿದೆ. ಮೇ 04ರಂದು 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 9,551 ರೂಪಾಯಿ ಹಾಗೂ 10 ಗ್ರಾಂಗೆ 95,510 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕಳೆದ 2 ದಿನಗಳಿಂದ ಇಳಿಕೆಯಾಗಿದೆ.

ಬೆಳ್ಳಿ ಬೆಲೆ ಎಷ್ಟಿದೆ?
ಇನ್ನು ಬೆಳ್ಳಿ ಬೆಲೆಯು ಕಳೆದ ಒಂದು ವಾರದಿಂದ ಯಥಾಸ್ಥಿತಿಯಲ್ಲಿ ಇದೆ. ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 98 ರೂಪಾಯಿ ಆಗಿದೆ. ಪ್ರತಿ ಕೆ.ಜಿ ಬೆಳ್ಳಿ ಬೆಲೆಯು 98,000 ಸಾವಿರ ರೂಪಾಯಿ ಆಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ. ಚಿನ್ನದ ಬೆಲೆಯು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ದೇಶದ ವಿವಿಧ ನಗರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಏರಿಳಿತ ಇದೆ. 10 ಗ್ರಾಂ ಚಿನ್ನದ ಬೆಲೆ 22 ಕ್ಯಾರೆಟ್ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ನಗರ ಬೆಲೆ
ದೆಹಲಿ 87,700 ರೂಪಾಯಿ
ಮುಂಬೈ 87,550 ರೂಪಾಯಿ
ಬೆಂಗಳೂರು 87,550 ರೂಪಾಯಿ
ಚೆನ್ನೈ 87,550 ರೂಪಾಯಿ
ಕೊಚ್ಚಿ 87,550 ರೂಪಾಯಿ
ಕೋಲ್ಕತಾ 87,550 ರೂಪಾಯಿ
ಅಹ್ಮದಾಬಾದ್ 87,600 ರೂಪಾಯಿ
ಜೈಪುರ್ 87,700 ರೂಪಾಯಿ
ಶುಭ ಸಮಾರಂಭ ಇರುವವರಿಗೆ ಸಂಭ್ರಮ: ಇನ್ನು ಇದೇ ತಿಂಗಳು ಸಾಕಷ್ಟು ಶುಭ ಸಮಾರಂಭಗಳು ಸಹ ಇವೆ. ಮದುವೆ ಸೇರಿದಂತೆ ಶುಭ ಸಮಾರಂಭಗಳು ಹೆಚ್ಚಾಗಿ ಇರುವ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಚಿನ್ನ ಖರೀದಿಯೂ ಜೋರಾಗಿ ಇರಲಿದೆ. ಹೀಗಾಗಿ, ಚಿನ್ನ ಬೆಲೆ ಕಡಿಮೆ ಆಗುತ್ತಿರುವುದು ಹಲವರಿಗೆ ಸಂತೋಷನ್ನುಂಟು ಮಾಡಿದೆ.












Click it and Unblock the Notifications