Gold Price On June 23: ಯುದ್ಧದ ನಡುವೆಯೂ ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಇಲ್ಲಿದ
Gold Price On June 23: ಇಸ್ರೇಲ್ ಹಾಗೂ ಇರಾನ್ ಯುದ್ಧದ ನಡುವೆಯೂ ಚಿನ್ನ ಪ್ರಿಯರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಹೌದು ಯುದ್ಧ ಭೀತಿಯ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಚಿನ್ನ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಈಗಾಗಲೇ ವಿಶ್ವದಾದ್ಯಂತ ಕಚ್ಚಾ ತೈಲದ ಬೆಲೆ ಭಾರೀ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ & ಡೀಸೆಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈ ರೀತಿ ಇರುವಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆಯೂ ಹೆಚ್ಚಳವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ.
ಸಾಮಾನ್ಯವಾಗಿ ಯುದ್ಧ ಅಥವಾ ಭೌಗೋಳಿಕ ಸಮಸ್ಯೆಗಳು ಎದುರಾದಾಗ ಚಿನ್ನದ ಬೆಲೆ ಹೆಚ್ಚಳವಾಗುತ್ತದೆ. ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗುತ್ತದೆ. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆಯು ಭಾರೀ ಇಳಿಕೆಯಾಗಿದೆ. ಜೂನ್ 23ರ ಚಿನ್ನ ಮತ್ತು ಬೆಳ್ಳಿ ಬೆಲೆಯು ಇಳಿಕೆ ಆಗಿದೆ. ಇನ್ನು ಬೆಳ್ಳಿಯ ಬೆಲೆಯಲ್ಲೂ ಬದಲಾವಣೆ ಆಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಇಲ್ಲಿದೆ.

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿತ್ತು. ಇದೀಗ ಯುದ್ಧ ಭೀತಿಯ ನಡುವೆಯೂ ಚಿನ್ನದ ಬೆಲೆ ಇಳಿಕೆ ಆಗಿರುವುದು ಅಚ್ಚರಿ ಮೂಡಿಸಿದೆ. ಸೋಮವಾರ ಚಿನ್ನದ ಬೆಲೆ ಇಳಿಕೆಯಾಗಿದೆಯಾದರೂ ಮಂಗಳವಾರ ಅಥವಾ ಬುಧವಾರ ಪರಿಸ್ಥಿತಿಗೆ ಅನುಗುಣವಾಗಿ ಚಿನ್ನದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
18 ಕ್ಯಾರೆಟ್ ಚಿನ್ನದ ಬೆಲೆ: ಜೂನ್ 23ರ ಸೋಮವಾರ ಪ್ರತಿ ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯು 7,552 ರೂಪಾಯಿ ಆಗಿದೆ. 10 ಗ್ರಾಂಗೆ 75,520 ರೂಪಾಯಿ ಆಗಿದೆ. ನೆನ್ನೆಗಿಂತ ನೂರು ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಇಳಿಕೆಯಾದಂತೆ ಆಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು ಸೋಮವಾರ ಪ್ರತಿ ಗ್ರಾಂ 9,230 ರೂಪಾಯಿ ಆಗಿದ್ದರೆ. 10 ಗ್ರಾಂನ ಬೆಲೆಯು 92,300 ರೂಪಾಯಿ ಆಗಿದೆ. ನೆನ್ನೆಗಿಂತಲೂ ಇಂದು ಚಿನ್ನದ ಬೆಲೆಯಲ್ಲಿ 50 ರೂಪಾಯಿ ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಸೋಮವಾರ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. ಜೂನ್ 23ಕ್ಕೆ ಪ್ರತಿ ಗ್ರಾಂ ಚಿನ್ನದ ಬೆಲೆಯು 10,069 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,00,690 ರೂಪಾಯಿ ಆಗಿದೆ. ಈಗಾಗಲೇ ಚಿನ್ನದ ಬೆಲೆಯು 1 ಲಕ್ಷದ ಗಡಿ ದಾಟಿದ್ದು. ಮುಂದಿನ ದಿನಗಳಲ್ಲಿ ಯುದ್ಧದ ಕಾರಣಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆಯಲ್ಲಿ ಮಹತ್ವದ ಬದಲಾವಣೆ ಆಗಿಲ್ಲ. ಪ್ರತಿ ಗ್ರಾಂ ಬೆಳ್ಳಿ ಬೆಲೆಯು 110 ರೂಪಾಯಿ ಹಾಗೂ ಪ್ರತಿ ಕೆಜಿ ಬೆಳ್ಳಿ ಬೆಲೆಯು 1,10,000 ರೂಪಾಯಿ ಆಗಿದೆ.
ಚಿನ್ನದ ಮೇಲೆ ಹೂಡಿಕೆ: ಸಾಮಾನ್ಯವಾಗಿ ಯುದ್ಧ ಭೀತಿ ಎದುರಾದಾಗ ಹೂಡಿಕೆದಾರರು ಮೊದಲು ಚಿನ್ನದ ಮೇಲೆಯೇ ಹೂಡಿಕೆ ಮಾಡುತ್ತಾರೆ. ಬೇರೆ ಹೂಡಿಕೆಗಳು ಕೈಕೊಟ್ಟರೂ ಚಿನ್ನ ಲಾಭವನ್ನು ತಂದುಕೊಡಲಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಎಂದಿಗೂ ಲಾಸ್ ಆಗುವುದಿಲ್ಲ ಎನ್ನುವ ಲೆಕ್ಕಾಚಾರವಿದೆ.












Click it and Unblock the Notifications