Gold Price Today: 1,00,000 ರೂಪಾಯಿ ದಾಟಿದ ಚಿನ್ನ: ಇಂದು ದರದಲ್ಲಿ ಮತ್ತೆ ಭಾರೀ ಹೆಚ್ಚಳ

ಬೆಂಗಳೂರು, ಜೂನ್ 12: ಭಾರತದಲ್ಲಿ ಚಿನ್ನಾಭರಣ ಪ್ರಿಯರಿಗೆ ಗೋಲ್ಡ್ ದರ ಮೇಲಿಂದ ಮೇಲೆ ಶಾಕ್ ನೀಡುತ್ತಿದೆ. ಇತ್ತೀಚೆಗೆ ಒಂದು ಲಕ್ಷ ರೂಪಾಯಿ ತಲುಪಿದ್ದ ಚಿನ್ನದ ಬೆಲೆ ನಿರಂತರವಾಗಿ ಏರಿಳಿಕೆಯಿಂದ ಕೂಡಿತ್ತು. ಕಳೆದೊಂದು ವಾರದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಕಳೆದ 48 ಗಂಟೆಗಳಲ್ಲಿ ಎರಡು ಬಾರಿ ಭರ್ಜರಿಯಾಗಿ ಏರಿಕೆ ಕಂಡಿದೆ. ಒಂದು ಲಕ್ಷ ರೂಪಾಯಿ ದಾಟಿದೆ. ನೆನ್ನೆ ಏರಿಕೆ ಆಗಿದ್ದ ಬೆಳ್ಳಿ ಬೆಲೆಯು ಇಂದು ಇಳಿಕೆ ಕಂಡಿದೆ.

ದೇಶದಲ್ಲಿ ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ಆದರೂ ಸಹಿತ ಬೇಡಿಕೆ ಮಾತ್ರ ಇಳಿಕೆ ಆಗಿಲ್ಲ. ಇಂದು ಜೂನ್ 12ರಂದು ಚಿನ್ನದ ಬೆಲೆ 24 ಕ್ಯಾರಟ್ ಚಿನ್ನದ ಹತ್ತು ಗ್ರಾಂ ದರವು 880 ರೂಪಾಯಿ ಹೆಚ್ಚಾಗಿದೆ. ನೆನ್ನೆ 820 ರೂಪಾಯಿಯಷ್ಟು ಹೆಚ್ಚಾಗಿತ್ತು. 22 ಕ್ಯಾರಟ್ ಚಿನ್ನದ ಹತ್ತು ಗ್ರಾಂ ದರ 800 ರೂಪಾಯಿ ಏರಿಕೆ ಆಗಿದ್ದು, ನೆನ್ನೆ 750 ರೂಪಾಯಿ ಹೆಚ್ಚಳಗೊಂಡಿತ್ತು. ಇಂದು ಮತ್ತೆ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಆಗಿದೆ.

Gold Price on June 12th Gold Price Again Crosses 1 Lakh Rupees in Major Cities in India

ಚಿನ್ನಪ್ರಿಯರು ಬಂಗಾರದ ದರ ಇಳಿಕೆಯನ್ನು ಎದುರು ನೋಡುತ್ತಿರುವ ಹೊತ್ತಿನಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಒಂದು ಲಕ್ಷ ರೂಪಾಯಿ ದಾಟಿದೆ. 22 ಕ್ಯಾರಟ್ ಚಿನ್ನ 10 ಗ್ರಾಂ ನೆನ್ನೆ (ಜೂನ್ 11) 90,200 ರೂಪಾಯಿ ಇದ್ದದ್ದು, ಇಂದು 91,000 ರೂಪಾಯಿಗೆ (+₹800) ಹೆಚ್ಚಾಗಿದೆ. ಈ ಬಂಗಾರವು ಆಭರಣಕ್ಕೆ ಹೆಚ್ಚು ಬಳಕೆ ಆಗುವ ಕಾರಣ ವೇಸ್ಟೇಜ್, ಜಿಎಸ್‌ಟಿ ಮತ್ತು ಇತರೆ ಸುಂಕ ಸೇರಿದರೆ ಒಂದು ಲಕ್ಷ ರೂಪಾಯಿ ಸಮೀಪಿಸುತ್ತದೆ.

ಇನ್ನೂ 24 ಕ್ಯಾರಟ್ ಚಿನ್ನ 10 ಗ್ರಾಂ ನೆನ್ನೆ (ಜೂನ್ 11) 98,400 ರೂಪಾಯಿ ಇದ್ದದ್ದು, ಇಂದು 99,280 ರೂಪಾಯಿಗೆ (+₹880) ಹೆಚ್ಚಳವಾಗಿದೆ. ಇದು ಜಿಎಟ್‌ಟಿ ಇತರ ಶುಲ್ಕ ಸೇರಿದಂತೆ ಒಂದು ಲಕ್ಷ ರೂಪಾಯಿ ದಾಟುತ್ತದೆ. ಈ ಮೂಲಕ ಚಿನ್ನದ ದರ ಮತ್ತೆ ಒಂದು ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಬೆಳ್ಳಿ ನೆನ್ನೆ ಹತ್ತು ಗ್ರಾಂಗೆ 10,900 ರೂಪಾಯಿ ಇತ್ತು. ಇಂದು 10,890 ರೂಪಾಯಿಗೆ (- ₹10) ಇಳಿಕೆ ಆಗಿದೆ. 100 ಗ್ರಾಂ ಬೆಳ್ಳಿಗೆ 1,08,900 ರೂಪಾಯಿ ಇದೆ ಎಂದು ಚಿನ್ನ ಮಾರುಕಟ್ಟೆಯ ಅಂಕಿ ಸಂಖ್ಯೆಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ

ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಬಂಗಾರಕ್ಕೆ ₹91,000 ಇದೆ. 24 ಕ್ಯಾರಟ್ ಚಿನ್ನಕ್ಕೆ ₹99,280 ಇದೆ. ನಗರದಲ್ಲಿ ಬೆಳ್ಳಿ ದರ ಒಂದು ಕೆಜಿಗೆ 1,08,900 ರೂಪಾಯಿ ಇದೆ. ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲಿ ಚಿನ್ನದ ದರ ಏರಿಕೆ ಆಗಿದೆ. ದೇಶದ ಯಾವುದೇ ನಗರ, ರಾಜ್ಯದಲ್ಲಿ ನೀವು ಚಿನ್ನ ಖರೀದಿಗೆ ಮುಂದಾದರೆ ಅಲ್ಲಿನ ಜಿಎಸ್‌ಟಿ, ಇತರ ಶುಲ್ಕ, ಮೇಕಿಂಗ್ ಚಾರ್ಜಸ್‌ ಸೇರಿ ಬೆಲೆಯಲ್ಲಿ ಕೊಂಚ ವ್ಯತ್ಯಾಸವಾಗಲಿದೆ. ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಪಟ್ಟಿ ಮುಂದಿದೆ.

ಭಾರತದ ನಗರವಾರು ಚಿನ್ನದ ದರ ಪಟ್ಟಿ

ಬೆಂಗಳೂರು - ₹91,000

ಹೈದರಾಬಾದ್ - ₹90,267

ಚೆನ್ನೈ - ₹90,267

ದೆಹಲಿ - ₹90,619

ಅಹಮದಾಬಾದ್- ₹90,707

ಪುಣೆ - ₹90,267

ವಿಜಯವಾಡ - ₹88,856

ಕೊಲ್ಕತ್ತ - ₹90,972

ಮುಂಬೈ - ₹89,561

ಲಕ್ನೋ - ₹89,121

ನಾಸಿಕ್ - ₹88,768

ಪಾಟ್ನಾ - ₹88,856

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+