Gold Price on July 15: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಬೆಳ್ಳಿ ದರ ₹4000 ಏರಿಕೆ, ಇಂದು ಎಷ್ಟಿದೆ?

ಬೆಂಗಳೂರು, ಜುಲೈ 15: ಚಿನ್ನಾಭರಣ ಪ್ರಿಯರಿಗೆ ಇಂದಿನ ಚಿನ್ನ ಬೆಲೆಯು ಗುಡ್ ನ್ಯೂಸ್ ನೀಡಿದೆ. ನಿರಂತರವಾಗಿ ಏರಿಕೆ ಆಗುತ್ತಿದ್ದ ಚಿನ್ನ ದರವು ಇಂದು ಇಳಿಕೆ ಆಗಿದೆ. ಇತ್ತ ಬೆಳ್ಳಿ ದರವು ದಾಖಲೆ ನಿರ್ಮಿಸಿದೆ. ಏಕೆಂದರೆ ಕಳೆದ ಎರಡು ತಿಂಗಳಲ್ಲಿ ಬೆಳ್ಳಿಯ ದರದಲ್ಲಿ ಭಾರೀ ಬದಲಾವಣೆ ಆಗಿದೆ. ಬೆಳ್ಳಿ ದರವು 4000 ರೂಪಾಯಿ ಏರಿಕೆ ಆಗಿದೆ. ಈ ಮೂಲಕ ಬೆಳ್ಳಿ ಹಲವು ವಾರಗಳ ಬಳಿಕ ದುಬಾರಿಯಾಗಿದೆ.

ಒಂದು ಗ್ರಾಂ ಬೆಳ್ಳಿಗೆ 115 ರೂಪಾಯಿ ಇತ್ತು. ಅದು ಇಂದು 119 ರೂಪಾಯಿಗೆ ಹೆಚ್ಚಾಗಿದೆ. 10 ಗ್ರಾಂ ಬೆಳ್ಳಿಯ ಬೆಲೆ 1150 ರೂಪಾಯಿಯಿಂದ 1190 ರೂಪಾಯಿ ಏರಿಕೆ ಕಂಡಿದೆ. ಹತ್ತು ಗ್ರಾಂಗೆ 400 ರೂಪಾಯಿಯಂತೆ ಒಂದು ಕೆ.ಜಿ. ಬೆಳ್ಳಿ ದರ ಜುಲೈ 15ರಂದು ಒಟ್ಟು ಬರೋಬ್ಬರಿ 4000 ರೂಪಾಯಿ ಏರಿಕೆ ಆಗಿದೆ. ಇತ್ತ ಚಿನ್ನದ ದರವು ನೆನ್ನೆವರೆಗೆ ನಿರಂತರವಾಗಿ ಏರಿಕೆ ಆಗುತ್ತಲೇ ಬಂದಿದ್ದ, ಇಂದು ಮಂಗಳವಾರಕ್ಕೆ ಇಳಿಕೆ ಕಂಡಿದೆ. ಇದು ಚಿನ್ನಾಭರಣ ಪ್ರಿಯರಿಗೆ ಕೊಂಚ ನೆಮ್ಮದಿ ತಂದಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳಿವೆ. ಆ ಹೊತ್ತಿಗೆ ಬಂಗಾರದ ದರ ಮತ್ತಷ್ಟು ಇಳಿಕೆ ಕಂಡರೆ ಖದೀದಿಸುವ ಇಚ್ಚೆ ಹೊಂದಿದ್ದಾರೆ.

Gold Price on July 15 Gold Rate Highly Reduced Today Know Silver Price

ಚಿನ್ನದ ದರ 1000 ರೂಪಾಯಿ ಇಳಿಕೆ

22 ಕ್ಯಾರಟ್ 10 ಗ್ರಾಂ ಚಿನ್ನದ ದರವು ನೆನ್ನೆ 91,550 ರೂಪಾಯಿ ಇತ್ತು. ಇಂದು ₹100 ಇಳಿಕೆ ಆಗಿದೆ ಅಂದರೆ ಚಿನ್ನದ ದರ 91,450 ರೂಪಾಯಿ ಗೆ ಕುಸಿದಿದೆ. 100 ಗ್ರಾಂ ಚಿನ್ನದ ದರದಲ್ಲಿ ಬರೊಬ್ಬರಿ 1000 ರೂಪಾಯಿ ಇಳಿಕೆ ಆಗಿದೆ. ಇದೇ ರೀತಿ 24 ಕ್ಯಾರಟ್ ಬಂಗಾರದಲ್ಲೂ ಸಹ ದರ ಇಳಿಕೆ ಕಂಡಿದೆ. ಹತ್ತು ಗ್ರಾಂ ಗೆ ಸೋಮವಾರ 99,880 ರೂಪಾಯಿ ಇದ್ದದ್ದು ಇಂದು ಮಂಗಳವಾರಕ್ಕೆ 110 ರೂಪಾಯಿ ಇಳಿಕೆಯಾಗಿದ್ದು, 99,770 ರೂಪಾಯಿಗೆ ಕುಸಿತ ಕಂಡಿದೆ. 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ 1100 ರೂಪಾಯಿ ತಗ್ಗಿದಂತಾಗಿದೆ ಎಂದು ಮಾರುಕಟ್ಟೆ ಮೂಲಗಳೂ ಮಾಹಿತಿ ನೀಡಿವೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿವಿಧ ದೇಶಗಳಲ್ಲೂ ಚಿನ್ನದ ದರ ಕೊಂಚ ಇಳಿಕೆ ಕಂಡಿದೆ. ಇದೇ 24 ಕ್ಯಾರಟ್ ಚಿನ್ನವು ಒಂದು ಲಕ್ಷ ರೂಪಾಯಿ ದಾಟಿತ್ತು. ಇದೀಗ ಅದರ ಬೆಲೆ 99,880 ರೂಪಾಯಿಗೆ ಕುಸಿದಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಚಿನ್ನದ ದರ ಸುಮಾರು 50000 ಕ್ಕೆ ಇಳಿಕೆಯಾಗುವ ಸಂಭವವು ಇದೆ. ಆರ್‌ಬಿಐ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡುತ್ತಿಲ್ಲ. ಹೀಗಾಗಿ ಚಿನ್ನದ ದರ ಇಳಿಕೆಯ ಲಕ್ಷಣಗಳು ದಟ್ಟವಾಗಿವೆ.

ನಗರವಾರು 10 ಗ್ರಾಂ 22k ಚಿನ್ನದ ದರ ಪಟ್ಟಿ, ವಿವರ

ಬೆಂಗಳೂರು: 98,270 ರೂ.
ಚೆನ್ನೈ: 98,470 ರೂ.
ಹೈದರಾಬಾದ್: 98,340 ರೂ.
ಅಹಮದಾಬಾದ್: 98,320 ರೂ.
ಮುಂಬೈ: 98,190 ರೂ.
ಕೋಲ್ಕತ್ತಾ: 98,060 ರೂ.
ದೆಹಲಿ: 98,020 ರೂ.

ಗಮನಿಸಬೇಕಾದ ವಿಷಯವೆಂದರೆ ಚಿನ್ನ ಖರೀದಿ ವೇಳೆ ವೇಸ್ಟೇಜ್, ಇತರ ಶುಲ್ಕ, ಜಿಎಸ್‌ಟಿ ಸೇರಿ ನಗರದಿಂದ ನಗರಕ್ಕೆ, ಮಳಿಗೆಯಿಂದ ಮಳಿಗೆಗೆ ಚಿನ್ನದ ಒಟ್ಟು ದರದಲ್ಲಿ ವ್ಯತ್ಯಾಸವಾಗಬಹುದು. ಇದನ್ನು ಗಮನಿಸಿ ಖರೀದಿಸಬೇಕು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+