Gold Price on April 25: ಇಂದಿನ ಚಿನ್ನಾಭರಣದ ದರಪಟ್ಟಿ, ನಿಮ್ಮೂರಿನಲ್ಲಿ ಎಷ್ಟಿದೆ ಬೆಲೆ?
ಬೆಂಗಳೂರು, ಏಪ್ರಿಲ್ 25: ಚಿನ್ನವು ಭಾರತದಲ್ಲಿ ದುಬಾರಿಯಾಗಿದೆ. ಬೆಳ್ಳಿಯ ದರದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಆಗಿಲ್ಲ. ಆದರೆ ಬಂಗಾರದ ದರ ಒಂದು ಲಕ್ಷ ರೂಪಾಯಿ ದಾಟಿದೆ. ಅದಾದ ಬಳಿಕ ಕಳೆದ ಎರಡು ದಿನಗಳಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನದ ದರ ಏಪ್ರಿಲ್ 25ರಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಅಕ್ಷಯ ತೃತೀಯಾಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಚಿನ್ನ ಮತ್ತಷ್ಟು ಇಳಿಕೆ ಆಗಲಿದೆ ಎಂದು ಗ್ರಾಹಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಚಿನ್ನಕ್ಕೆ ನಿರಂತರ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೆಲವೇ ವರ್ಷಗಳ ಅಂತರದಲ್ಲಿ ಒಂದು ಲಕ್ಷ ರೂಪಾಯಿಗೆ ತುಲುಪಿದೆ. ನಂತರ ಎರಡು ಭಾರಿ ಇಳಿಕೆ ಕಂಡಿದ್ದ ಚಿನ್ನ ದರ ಪ್ರತಿ 10 ಗ್ರಾಂಗೆ (22 ಕ್ಯಾರಟ್) 90,050 ರೂಪಾಯಿ ಇದೆ. ಇನ್ನೂ 24 ಕ್ಯಾರಟ್ ಅಪರಂಜಿ ಚಿನ್ನಕ್ಕೆ 98,240 ರೂಪಾಯಿಯಷ್ಟಿದೆ. ಇದರಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.

ಈ ಬಾರಿಯ ಅಕ್ಷಯಾ ತೃತೀಯಾಗೆ ಚಿನ್ನದ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ದ ಗ್ರಾಹಕರಿಗೆ ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲಿರುವ ಚಿನ್ನವು ಶಾಕ್ ನೀಡಿದೆ. ಹೀಗಾಗಿ ಜನರು ಖರೀದಿಗೆ ಕೊಂಚ ಹಿಂದೇಟು ಹಾಕಬಹುದು ಎನ್ನಲಾಗುತ್ತಿದೆ. ಮತ್ತೊಂದೆಡೆ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕ್ರಮೇಣವಾಗಿ ಇಳಿಕೆ ಆಗಬಹುದು ಅಂತಲೂ ಅಂದಾಜಿಸಲಾಗಿದೆ. ಇದೆಕ್ಕಲ ಇನ್ನು ಕೆಲವು ತಿಂಗಳು ಕಾಯಬೇಕಿದೆ.
ಬೆಂಗಳೂರಿನಲ್ಲೂ ಚಿನ್ನದ ಬೆಲೆ 98,240 ರೂಪಾಯಿ ಇದೆ. ಇನ್ನೂ 18 ಕ್ಯಾರಟ್ ದರದಲ್ಲೂ ಬದಲಾವಣೆ ಆಗಿಲ್ಲ. ಈ ಚಿನ್ನ 10 ಗ್ರಾಂಗೆ ರೂಪಾಯಿ 73,680 ಇದೆ. ಕಳೆದ 24 ಗಂಟೆಯಿಂದ ಇದೇ ದರ ಮುಂದುವರಿದಿದೆ. ಬೆಳ್ಳಿಯ ಬೆಲೆಯು 10 ಗ್ರಾಂಗೆ 1010 ರೂಪಾಯಿ ಇದ್ದು, ಒಂದು ಕೆಜಿ ಬೆಳ್ಳಿಯನ್ನು 1,00,900 ರೂಪಾಯಿಗೆ ಸಿಗಲಿದೆ. ಬೆಳ್ಳಿ, ಚಿನ್ನದ ಆಭರಣ ತಯಾರಿಕೆ ವೇಳೆ ವೇಸ್ಟೇಜ್, ಇತರೆ ಸುಂಕ, ಜಿಎಸ್ಟಿ ಸೇರಿ ನಗರವಾರು ಬೆಲೆಗಳಲ್ಲಿ ಕೊಂಚ ವ್ಯತ್ಯಾಸ ಕಾಣಬಹುದಾಗಿದೆ.
ದೇಶದ ಬೇರೆ ಬೇರೆ ನಗರಗಳ ಚಿನ್ನದ ದರ (22 ಕ್ಯಾರಟ್)
ಬೆಂಗಳೂರು: 90,050 ರೂಪಾಯಿ
ದೆಹಲಿ: 90,200 ರೂಪಾಯಿ
ಉತ್ತರ ಪ್ರದೇಶ: 91,050 ರೂಪಾಯಿ
ಕೋಲ್ಕತ್ತಾ: 90,050 ರೂಪಾಯಿ
ಅಹ್ಮದಾಬಾದ್: 90,100 ರೂಪಾಯಿ
ಮುಂಬೈ: 90,050 ರೂಪಾಯಿ
ಗುಜರಾತ್: 91,090 ರೂಪಾಯಿ
ಲಕ್ನೋ: 90,200 ರೂಪಾಯಿ
ಕೇರಳ: 90,050 ರೂಪಾಯಿ
ನಗರವಾರು 100 ಗ್ರಾಂ ಬೆಳ್ಳಿ ದರ ಪಟ್ಟಿ
ಬೆಂಗಳೂರು: 10,100 ರೂಪಾಯಿ
ದೆಹಲಿ: 10,100 ರೂಪಾಯಿ
ಕೋಲ್ಕತ್ತಾ: 10,100 ರೂಪಾಯಿ
ಮುಂಬೈ: 10,100 ರೂಪಾಯಿ
ಅಹ್ಮದಾಬಾದ್: 10,100 ರೂಪಾಯಿ
ಜೈಪುರ್: 10,100 ರೂಪಾಯಿ
ಕೇರಳ: 11,100 ರೂಪಾಯಿ












Click it and Unblock the Notifications