Gold Price Oct 6: ಚಿನ್ನದ ಬೆಲೆ ನಿರಂತರ ಇಳಿಕೆ; 10 ಗ್ರಾಂಗೆ 1 ಲಕ್ಷ ರೂ. ಆಗಲಿದೆಯೇ ಬಂಗಾರದ ಬೆಲೆ, ಬೆಳ್ಳಿ ಬೆಲೆ ಎಷ್ಟಾಗಿದೆ

Gold Price Oct 6: ಚಿನ್ನ ಮತ್ತು ಬೆಳ್ಳಿ ಬೆಲೆ ಭರ್ಜರಿ ಇಳಿಕೆಯಾಗಿದೆ. ಕಳೆದ ಒಂದು ವಾರದಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಭಾರತದಲ್ಲೂ ಚಿನ್ನದ ಬೆಲೆ ಕುಸಿಯುತ್ತಿದೆ. ಅಕ್ಟೋಬರ್ 6ರ ಮಂಗಳವಾರ ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 160 ರೂಪಾಯಿ ಇಳಿಕೆಯಾಗಿದ್ದು, ₹1,49,020 ರೂ. ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 150 ರೂಪಾಯಿ ಇಳಿಕೆಯಾಗುವುದರೊಂದಿಗೆ 1,36,600 ರೂಪಾಯಿ ಆಗಿದೆ.

ಈ ವರ್ಷದ ಪ್ರಾರಂಭದಲ್ಲಿ ಚಿನ್ನದ ಬೆಲೆಯು ದಾಖಲೆಯ ಏರಿಕೆ ಕಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ 2 ಲಕ್ಷ ರೂಪಾಯಿ ಆಗಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಬಂಗಾರ ಪ್ರಿಯರು ಸಂತೋಷಪಡುವ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ 1.25 ಲಕ್ಷ ರೂ. ಅಥವಾ 1 ಲಕ್ಷಕ್ಕೆ ತಲುಪಲಿದೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಚಿನ್ನದ ಬೆಲೆಯು 2026ರ ಪ್ರಾರಂಭದಲ್ಲಿ ಭಾರೀ ಹೆಚ್ಚಳವಾಗಿತ್ತು. ಆದರೆ ಇದೀಗ ವರ್ಷಾಂತ್ಯದ ವೇಳಗೆ ಚಿನ್ನದ ಬೆಲೆಯು ಬರೋಬ್ಬರಿ ಶೇ 26ರಷ್ಟು ಕುಸಿತ ಕಂಡಿದೆ.

Gold Price Oct 6 Gold Prices Continue to Fall Will Gold Drop to 1 Lakh Silver Rates Revealed

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 11,177 ರೂಪಾಯಿ ಹಾಗೂ ಹತ್ತು ಗ್ರಾಂಗೆ 1,11,770 ರೂ. ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ, 18 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂನ ಮೇಲೆ 12 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 120 ರೂಪಾಯಿ ಕಡಿಮೆಯಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 13,660 ರೂಪಾಯಿ ಹಾಗೂ ಹತ್ತು ಗ್ರಾಂನ ಬೆಲೆ 1,36,600 ರೂ. ಆಗಿದೆ. ಅಕ್ಟೋಬರ್ 5ರ ಸೋಮವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಮೇಲೆ 15 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 150 ರೂಪಾಯಿ ಕಡಿಮೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 18 ಹಾಗೂ 22 ಕ್ಯಾರೆಟ್‌ನಂತೆಯೇ 24 ಕ್ಯಾರೆಟ್ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 14,902 ರೂಪಾಯಿ ಹಾಗೂ ಹತ್ತು ಗ್ರಾಂನ ಬೆಲೆಯು 1,49,020 ರೂ. ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ, 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 16 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 160 ರೂಪಾಯಿ ಕಡಿಮೆ ಆಗಿದೆ.

Gold Price Oct 6: ಬೆಳ್ಳಿ ಬೆಲೆ ಎಷ್ಟಾಗಿದೆ ?

ಬೆಳ್ಳಿ ಬೆಲೆಯು ಸ್ಥಿರವಾಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 235 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2.35 ಲಕ್ಷ ರೂ. ಆಗಿದೆ. ಕಳೆದ ಹತ್ತಕ್ಕೂ ಹೆಚ್ಚು ದಿನಗಳಿಂದ ಬೆಳ್ಳಿ ಬೆಲೆಯು ಸ್ಥಿರವಾಗಿದೆ.

ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ?

Gold Price Oct 6 Gold Prices Continue to Fall Will Gold Drop to 1 Lakh Silver Rates Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+