Gold Price: ಚಿನ್ನದ ಬೆಲೆ ದಿಢೀರ್ 50,000 ರೂಪಾಯಿಗೆ ಕುಸಿತ ಕಾಣುವ...
ಚಿನ್ನದ ಬೆಲೆ ಬಡವರ ಕೈಗೆ ಸಿಗದಷ್ಟು ದೂರ ಹೋಗಿ ಮುಟ್ಟಿದ್ದು, ಇನ್ನು ಸ್ವಲ್ಪ ದಿನಗಳ ಕಾಲ ಹೀಗೆ ಚಿನ್ನದ ಬೆಲೆ ಏರಿಕೆ ಕಂಡರೆ ಮಧ್ಯಮ ವರ್ಗದ ಜನರು ಕೂಡ ಚಿನ್ನ ಖರೀದಿ ಮಾಡಲು ಆಗದ ಪರಿಸ್ಥಿತಿ ನಿರ್ಮಾಣ ಆಗಲಿದೆ. ಯಾಕಂದ್ರೆ ಈಗಾಗಲೇ ಚಿನ್ನದ ಬೆಲೆಯು ಹತ್ತಿರ ಹತ್ತಿರ 85,000 ರೂಪಾಯಿ ತಲುಪಿದ್ದು, ಇನ್ನೇನು 1 ಲಕ್ಷ ರೂಪಾಯಿಗೆ ಚಿನ್ನ ಬೆಲೆ ತಲುಪುವ ಆತಂಕ ಕಾಡುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಚಿನ್ನದ ಬೆಲೆ 50000 ರೂಪಾಯಿಗೆ ಕುಸಿತ ಕಾಣುವ...
ಹೌದು, ಭಾರತೀಯರಿಗೆ ಒಂದು ಹೊತ್ತು ಊಟ ಕಡಿಮೆಯಾದರೂ ಸರಿ ಆದರೆ ಚಿನ್ನದಲ್ಲಿ ಮಾತ್ರ ಕೊರತೆ ಆಗಬಾರದು. ಅದರಲ್ಲೂ ಮದುವೆಗಳಲ್ಲಿ ಚಿನ್ನದ ಬಳಕೆ ಕಡ್ಡಾಯ. ಇದರ ಜೊತೆಗೆ ಶುಭಕಾರ್ಯ & ಶುಭ ಸಮಾರಂಭಗಳಲ್ಲಿ ಚಿನ್ನ ಬಳಸಬೇಕು ಎಂಬುದು ಭಾರತೀಯರ ಸಂಸ್ಕೃತಿಯಲ್ಲಿ ಬೆರೆತು ಹೋಗಿದೆ. ಇಂತಹ ಸಂದರ್ಭದಲ್ಲೇ ಚಿನ್ನದ ಬೆಲೆ ಇನ್ನೇನು ಭರ್ಜರಿ 1 ಲಕ್ಷ ರೂಪಾಯಿಗೆ ತಲುಪುವ ಭಯ ಕಾಡುತ್ತಿದೆ. ಆದರೆ ಬಜೆಟ್‌ಗೆ ಮೊದಲೇ ಆಭರಣ ಪ್ರಿಯ ಮಹಿಳೆಯರಿಗೆ ಭರ್ಜರಿ ಸುದ್ದಿಯು ಸಿಕ್ಕಿದ್ದು, ಚಿನ್ನದ ಬೆಲೆ ಕುಸಿಯುವ ಮುನ್ಸೂಚನೆ ಈಗ ಸಿಗುತ್ತಿದೆ!

ಚಿನ್ನದ ಬೆಲೆ ದಿಢೀರ್ 50,000 ರೂಪಾಯಿಗೆ?
2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು, ಚಿನ್ನದ ಮೇಲೆ ಆಭರಣ ಪ್ರಿಯರು ನಿರೀಕ್ಷೆ ಇಟ್ಟುಕೊಂಡು ಕೂತಿದ್ದಾರೆ. ಅದರಲ್ಲೂ ಈಗ ಬಜೆಟ್‌ನಲ್ಲಿ ಚಿನ್ನದ ಮೇಲೆ ಆಮದು ಸುಂಕ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡುವ ನಿರೀಕ್ಷೆ ಚಿನ್ನ ಪ್ರಿಯರಲ್ಲಿ ಮೂಡಿದ್ದು, ಚಿನ್ನದ ಬೆಲೆ ದಿಢೀರ್ 50,000 ರೂಪಾಯಿಗೆ ಕುಸಿತ ಕಾಣುವ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ....
ಚಿನ್ನದ ಬೆಲೆ ಎಷ್ಟೇ ಹೆಚ್ಚಾದರೂ ಅಥವಾ ಕಡಿಮೆ ಆದರೂ ಭಾರತೀಯರು ಚಿನ್ನ ಕೊಳ್ಳುತ್ತಾರೆ ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ. ಅದ್ರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಹೀಗಿದ್ದಾಗ ಚಿನ್ನದ ಬೆಲೆ ಕಡಿಮೆ ಅಗಲೇಬೇಕು ಎಂಬ ನಿರೀಕ್ಷೆ ಕೂಡ ಇದ್ದು, 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ತೆರಿಗೆಯು ಇಳಿಕೆ ಕಂಡರೆ ಚಿನ್ನದ ಬೆಲೆ 50,000 ರೂಪಾಯಿಗೆ ತಲುಪುವ ನಿರೀಕ್ಷೆ ಇದೆ.
ಚಿನ್ನ.. ಚಿನ್ನ.. ಚಿನ್ನ...
ಒಟ್ನಲ್ಲಿ ಚಿನ್ನ ಎಂಬುದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು & ಸ್ನೇಹಿತನು ಇದ್ದಂತೆ. ಹಲವು ರೀತಿಯಲ್ಲಿ ಚಿನ್ನದ ಉಪಯೋಗ ಪಡೆಯಬಹುದಾಗಿದೆ. ಈ ಕಾರಣಕ್ಕೆ ಚಿನ್ನ ಅಂದ್ರೆ ಭಾರತೀಯರಿಗೆ ಇಷ್ಟ. ಹೀಗೆ ತುಂಬಾ ಇಷ್ಟಪಡುವ ವಸ್ತು ಚಿನ್ನ ಕಡಿಮೆ ಬೆಲೆಗೆ ಸಿಗುವ ದಿನಗಳು ಮತ್ತೆ ಬರಲಿ ಎಂಬ ನಿರೀಕ್ಷೆಯಲ್ಲಿ ಆಭರಣ ಪ್ರಿಯರು ಇದ್ದು, ಬಜೆಟ್ ನಂತರ ಆ ನಿರೀಕ್ಷೆ ನಿಜವಾಗುವ ಸಾಧ್ಯತೆ ಇದೆ.
5000 ವರ್ಷಗಳ ಇತಿಹಾಸ
ಮನುಷ್ಯ ನಾಗರಿಕತೆ ಕಡೆ ಹೆಜ್ಜೆ ಹಾಕಿದ ನಂತರ ಚಿನ್ನ ಹೆಚ್ಚು ಬಳಸತೊಡಗಿದ್ದು, ಈ ಪೈಕಿ ಚಿನ್ನದ ಬಳಕೆಗೆ 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನು ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಈ ರೀತಿ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡಲ್ಲ. ಆದರೆ ಚಿನ್ನಕ್ಕೆ ಮಾತ್ರ ಹೆಚ್ಚು ಬೆಲೆ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಪಕ್ಕಾ ಅಂತಿದ್ದರು ತಜ್ಞರು. ಈ ನಡುವೆ ಬಜೆಟ್ ಬಳಿಕ ಚಿನ್ನದ ಬೆಲೆ ಕುಸಿಯುವ ನಿರೀಕ್ಷೆಯು ಮೂಡಿದೆ.
ಚಿನ್ನಕ್ಕೆ ಯಾಕೆ ಇಷ್ಟು ಬೇಡಿಕೆ?
ಜಾಗತಿಕವಾಗಿ ಯುದ್ಧ ಶುರುವಾದ್ರೆ ಮೊದಲು ಅದರ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿ ಯುದ್ಧ ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹಣ ಬದಲಾಯಿಸಿ ಸಂಗ್ರಹ ಮಾಡಲು ಜನರು ಮುಂದಾಗುತ್ತಾರೆ. ಹೀಗೆ ಜಗತ್ತಿನ ಹಲವು ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನವನ್ನ ಯುದ್ಧ ಸಮಯ ಬಂದಾಗ ಖರೀದಿ ಮಾಡುತ್ತವೆ. ಇದೇ ಕಾರಣಕ್ಕೇ ಕಳೆದ ವರ್ಷ ಅಂದ್ರೆ 2024 ರಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿತ್ತು, ಆದರೆ 2025 ರಲ್ಲಿ ಚಿನ್ನದ ಬೆಲೆಯು ಕುಸಿಯುವ ನಿರೀಕ್ಷೆ ಮೂಡಿದೆ.












Click it and Unblock the Notifications