ಚಿನ್ನ ಬೆಲೆ ದಿಢೀರ್ 50 ಸಾವಿರ ರೂಪಾಯಿಗೆ ಇಳಿಯುವ... Gold Price
ಚಿನ್ನದ ಬೆಲೆ ಏರಿಕೆ ಕಾಣುತ್ತಿರುವ ರೀತಿ ನೋಡಿ ಎಲ್ಲರಿಗೂ ಭಯ ಆಗುತ್ತಾ ಇದೆ, ಯಾಕಂದ್ರೆ ಚಿನ್ನದ ಬೆಲೆ 1,00,000 ಗಡಿ ದಾಟಿ ಇನ್ನೇನು 1,50,000 ರೂಪಾಯಿಗೆ ತಲುಪುವ ಆತಂಕ ಮನೆ ಮಾಡಿದೆ. ಆಭರಣ ಪ್ರಿಯರಿಗೆ ಕೂಡ ಇದು ದೊಡ್ಡ ಸಂಕಷ್ಟ ತಂದೊಡ್ಡಿದ್ದು, ಹೀಗೆ ಚಿನ್ನ ಬೆಲೆ ಏರಿಕೆ ಕಾಣುತ್ತಿರುವ ರೀತಿ ನೋಡಿ ಚಿಂತೆ ಮಾಡುವಂತೆ ಆಗಿದೆ. ಹೀಗಿದ್ದಾಗಲೇ, ಚಿನ್ನ ಬೆಲೆ ದಿಢೀರ್ 50 ಸಾವಿರ ರೂಪಾಯಿಗೆ ಇಳಿಯುವ...
ಹೌದು, ಚಿನ್ನ ಬೆಲೆ ಮತ್ತೊಮ್ಮೆ ಏರಿಕೆ ಕಂಡು ಈ ಮೂಲಕ ಚಿನ್ನ ಕೊಳ್ಳಲು ಪರದಾಟ ಕೂಡ ಶುರುವಾಗಿದೆ. ಚಿನ್ನ ಬೆಲೆ ಕಳೆದ ಕೆಲ ದಿನಗಳಿಂದ ಸಾಕಷ್ಟು ಏರಿಳಿತ ಕಾಣುತ್ತಿದ್ದು, ಈ ಕಾರಣ ಆಭರಣ ಪ್ರಿಯರು ಮಾರುಕಟ್ಟೆ ಕಡೆಗೆ ಗಮನ ಇಟ್ಟು ಕೂತಿದ್ದರು. ಮದುವೆ ಸೀಸನ್ ಇನ್ನೇನು ಆರಂಭ ಆಗಲಿದ್ದು, ಚಿನ್ನಕ್ಕೆ ಡಿಮ್ಯಾಂಡ್ ಹೆಚ್ಚಾಗುವ ನಿರೀಕ್ಷೆ ಇದೆ. ಇಷ್ಟೆಲ್ಲಾ ಒದ್ದಾಟ & ಪರದಾಟದ ನಡುವೆ ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಕಾಣುವ ಬಗ್ಗೆ ಈ ಸಮಯದಲ್ಲಿ ಸೂಪರ್ ಸುದ್ದಿ ಹೊರ ಬಿದ್ದಿದೆ!

ಚಿನ್ನ 50 ಸಾವಿರ ರೂಪಾಯಿಗೆ ಇಳಿಯುವ...
ಚಿನ್ನ ಅಂದ್ರೆ ಎಲ್ಲರಿಗೂ ಇಷ್ಟ, ಅದರಲ್ಲೂ ಆಭರಣ ಪ್ರಿಯ ಮಹಿಳೆ & ಹುಡುಗಿಯರ ಕನಸು ಕೆ.ಜಿ. ಕೆಜಿ ಚಿನ್ನ ಇರಬೇಕು ಎಂಬುದು. ಇಷ್ಟೆಲ್ಲ ಚಿನ್ನ ಖರೀದಿಗೆ ಗಂಡಸರ ಜೇಬು ದುಡ್ಡಿನಿಂದ ತುಂಬಿರಬೇಕು, ಅದು ಬಿಡಿ ಈಗಿನ ಬೆಲೆ ಏರಿಕೆ ನೋಡಿದರೆ ಕೇವಲ 1 ಗ್ರಾಂ ಚಿನ್ನ ಖರೀದಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಹೀಗಿದ್ದಾಗಲೇ, ಚಿನ್ನ ಬೆಲೆ ದಿಢೀರ್ 50 ಸಾವಿರ ರೂಪಾಯಿಗೆ ಇಳಿಯುವ...
ಆಭರಣ ಪ್ರಿಯರಿಗೆ ಚಿನ್ನದಂತಹ ಸುದ್ದಿ!
ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿರುವುದಕ್ಕೆ ಹಲವು ಕಾರಣ ಇವೆ. ಇದರಲ್ಲಿ ಪ್ರಮುಖ ಕಾರಣ ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಯುದ್ಧಗಳು. ಯುದ್ಧಕ್ಕೂ & ಚಿನ್ನಕ್ಕೂ ಏನು ಗುರು ಸಂಬಂಧ? ಅಂತಾ ನೀವು ಕೇಳಿದ್ರೆ, ಯುದ್ಧಗಳು ಆರಂಭ ಆದ ಸಮಯದಲ್ಲಿ ಚಿನ್ನದ ಬೆಲೆ ಆಕಾಶ ಮುಟ್ಟುತ್ತದೆ. ಹಾಗೇ, ಯುದ್ಧಗಳು ನಿಂತು ಶಾಂತಿ ಪಾಲನೆ ಮಾಡಿದ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ಕಾಣುತ್ತದೆ. ಇದರ ಜೊತೆ ಮದುವೆ ಸೀಸನ್ & ಹಬ್ಬಗಳು ಭಾರತದಲ್ಲಿ ಸದ್ಯಕ್ಕೆ ಚಿನ್ನದ ಏರಿಳಿತಕ್ಕೆ ಕಾರಣ ಆಗುತ್ತದೆ.
ಹೀಗಿದ್ದಾಗ ಇಸ್ರೇಲ್ & ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸೋಕೆ ಅಮೆರಿಕ ಮುಂದಾಗಿದೆ. ಮತ್ತೊಂದು ಕಡೆ, ಆಷಾಢ ಮಾಸ ಕೂಡ ಬರುತ್ತಿರುವ ಕಾರಣಕ್ಕೆ ಮದುವೆ ಕಾರ್ಯಕ್ರಮಗಳು ಕಡಿಮೆ ಆಗಲಿವೆ. ಇದರ ಜೊತೆ ಚಿನ್ನದ ಬೆಲೆ ಮಿತಿ ಮೀರಿ ಏರಿಕೆ ಕಂಡಿರುವ ಕಾರಣಕ್ಕೆ ಈಗ 50 ಸಾವಿರ ರೂಪಾಯಿಗೆ ಕುಸಿದು ಬೀಳುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಅಕಸ್ಮಾತ್ 50 ಸಾವಿರ ರೂಪಾಯಿಗೆ ಕುಸಿತ ಕಾಣದೇ ಇದ್ದರೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಮಾತ್ರ ಗ್ಯಾರಂಟಿ ಆಗಿದೆ. ಹೀಗಾಗಿ ಆಭರಣ ಪ್ರಿಯರು ಜೂನ್ ತಿಂಗಳಲ್ಲಿ ಚಿನ್ನವನ್ನ ಖರೀದಿ ಮಾಡಲು ಪ್ಲಾನ್ ಮಾಡುತ್ತಿದ್ದಾರೆ!
ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಯಾಕೆ?
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದ್ರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿಬಿಟ್ಟಿದೆ ಹಾಗೇ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಮುಂದಿನ ದಿನಗಳು ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂಬ ಮಾತು ಇದೆ. ಇದರ ಜೊತೆಗೆ ಇನ್ನೂ ಹಲವು ಕಾರಣಗಳು ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿಯೇ ಚಿನ್ನದ ಬೆಲೆ ಈ ವರ್ಷದ ಅಂತ್ಯಕ್ಕೆ, 1,50,000 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು. ಆದರೆ ಅದಕ್ಕೂ ಮೊದಲು ಚಿನ್ನದ ಬೆಲೆ 50,000 ರೂಪಾಯಿ ಕುಸಿತ ಕಾಣುವ ನಿರೀಕ್ಷೆ ಕೂಡ ಇದೆ.












Click it and Unblock the Notifications