Gold Price: ಬಂಗಾರದ ಬೆಲೆ ಇಂದು ಭರ್ಜರಿ ಇಳಿಕೆ? ವರಮಹಾಲಕ್ಷ್ಮಿ ಹಬ್ಬದ ದಿನ ಸಿಗುತ್ತಾ ಸಿಹಿಸುದ್ದಿ?

ಚಿನ್ನ.. ಚಿನ್ನ.. ಚಿನ್ನ.. ಈಗ ಗೃಹಿಣಿಯರ ಬಾಯಲ್ಲೂ, ನವ ಯುವತಿಯರ ಮನಸ್ಸಲ್ಲೂ ಓಡಾಡುತ್ತಿರುವ ಒಂದೇ ಒಂದೇ ವಸ್ತು ಚಿನ್ನ. ಯಾಕಂದ್ರೆ ಇಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತಿದ್ದು, ಕರ್ನಾಟಕದ ಮೂಲೆ ಮೂಲೆಯಲ್ಲೂ ಸಂಭ್ರಮವು ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಚಿನ್ನದ ಬೆಲೆ ಕುಸಿತ ಕಾಣುತ್ತಾ? ಎಂಬ ನಿರೀಕ್ಷೆಯಲ್ಲಿ ಬಂಗಾರ ಖರೀದಿಗೆ ಕಾಯುತ್ತಿರುವ ಜನ ಇದ್ದಾರೆ. ಹಾಗಾದ್ರೆ ಇವತ್ತು ಚಿನ್ನ & ಬೆಳ್ಳಿ ಬೆಲೆ ಏನಾಗಲಿದೆ? ಬನ್ನಿ ತಿಳಿಯೋಣ.

ಚಿನ್ನದ ಬೆಲೆ ಇದೀಗ ಭಾರಿ ಏರಿಳಿತ ಕಾಣುತ್ತಿದೆ, ಹಾಗೇ ಬೆಳ್ಳಿ ಬೆಲೆಯಲ್ಲಿ ಕೂಡ ಹೀಗೆಯೇ ಹೆಚ್ಚು & ಕಮ್ಮಿ ಆಗುತ್ತಿದೆ. ಅದ್ರಲ್ಲೂ ಬಂಗಾರ ಬೇಕು ಅಂತಾ ಕಾಯುತ್ತಿದ್ದ ಮಹಿಳೆಯರಿಗೆ ಚಿನ್ನದ ದರ ಕುಸಿತ ಕಂಡಿದ್ದು ಖುಷಿ ಕೊಟ್ಟಿತ್ತು. ಮದುವೆ & ಗೃಹ ಪ್ರವೇಶ ಸೇರಿ ಹಲವು ಶುಭ ಕಾರ್ಯಗಳು ಶುರುವಾಗಿರುವ ಸಮಯದಲ್ಲೇ ಚಿನ್ನದ ಬೆಲೆ ಒಂದಷ್ಟು ಏರಿಕೆ ಕಂಡಿತ್ತು. ಹೀಗಾಗಿ ಸಹಜವಾಗಿಯೇ ಆತಂಕ ಮೂಡಿತ್ತು. ಯಾಕಂದ್ರೆ ಮದುವೆ ಮತ್ತಿತರ ಶುಭ ಕಾರ್ಯ ನಡೆಸಲು ಚಿನ್ನ & ಬೆಳ್ಳಿ ಬೇಕೆಬೇಕು. ಆದರೆ ಬಂಗಾರದ ಬೆಲೆ ಹೆಚ್ಚಾಗುತ್ತಿದೆ ಎಂಬ ಟೆನ್ಷನ್ ಕಾಡುತ್ತಿತ್ತು. ಆದರೆ ಮೊನ್ನೆ ಚಿನ್ನ ಒಂದಷ್ಟು ಕಡಿಮೆ ಆಗಿತ್ತು, ಹಾಗೇ ಇಂದು ಕೂಡ ಚಿನ್ನ ಕುಸಿಯುತ್ತಾ? ಮುಂದೆ ಓದಿ.

Gold Price May Decrease Once Again On 16th Of August 2024

50,000 ರೂಪಾಯಿಗೆ ಚಿನ್ನ ಕುಸಿತ?

ಇವತ್ತು ಹಿಂದೂಗಳ ಪವಿತ್ರ ಹಬ್ಬಗಳ ಪೈಕಿ ಒಂದಾದ 'ವರಮಹಾಲಕ್ಷ್ಮಿ' ಪೂಜೆ ಆರಂಭ ಆಗಿದೆ. ಆಭರಣ ಚಿನ್ನದ ಬೆಲೆ ಮೊನ್ನೆ ಕುಸಿತ ಕಂಡ ಬಳಿಕ ಪ್ರತಿ 10 ಗ್ರಾಂಗೆ 65550 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದಿದೆ. 24 ಕ್ಯಾರೆಟ್ ಚಿನ್ನ ಬೆಲೆಯು ಇಳಿಕೆ ಕಂಡು 10 ಗ್ರಾಂಗೆ 71,510 ರೂಪಾಯಿಗೆ ಮಾರಾಟ ಆಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 80,000 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಶೀಘ್ರದಲ್ಲೇ ಆಭರಣ ಚಿನ್ನವು 10 ಗ್ರಾಂಗೆ 50000 ರೂಪಾಯಿಗೆ ಕುಸಿತ ಕಾಣುತ್ತಾ? ಎಂಬ ಕುತೂಹಲ ಮೂಡಿದೆ.

ಭಾರಿ ಪ್ರಮಾಣದ ಚಿನ್ನ ಆಮದು

ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೇ ಮುಂದೆ ಇದ್ದು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹೀಗೆ ಚಿನ್ನವನ್ನ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಚಿನ್ನವನ್ನು ವ್ಯಾಪಾರ ಉದ್ದೇಶಕ್ಕಾಗಿ ಭಾರತದಲ್ಲಿ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗ್ತಿದೆ. ಆಗಿನ ಕರೆನ್ಸಿ ಅಂದ್ರೆ ನಾಣ್ಯ ಮುದ್ರಣಕ್ಕು ಕೂಡ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗೆ, ನಮ್ಮ ನೆಲದ ಜೊತೆ ಚಿನ್ನ ಕೂಡ ಬೆರೆತು ಹೋಗಿದೆ. ಹೀಗಾಗಿ ಇಂದಿಗು ಕೂಡ ಈ ವಿಚಾರದಲ್ಲಿ ಭಾರತ ದೇಶವೇ ಮುಂದೆ ಇದ್ದು, ಅಪಾರ ಪ್ರಮಾಣದ ಚಿನ್ನವನ್ನ ಭಾರತ ಪ್ರತಿ ವರ್ಷ ಆಮದು ಮಾಡಿಕೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+